ಬೆಂಗಳೂರು:ಉದಯೋನ್ಮುಖ ಪ್ರತಿಭೆಗಳಿಗೆ ಇದೀಗ ಸೋಷಿಯಲ್​ ಮೀಡಿಯಾ ಒಂದೊಳ್ಳೆಯ ಲಾಂಚ್​ ಪ್ಯಾಡ್​ನಂತಾಗುತ್ತಿವೆ. ಯಾವುದೋ ಮೂಲೆಯಲ್ಲಿರುವ ಪ್ರತಿಭೆಗಳು ರಾತ್ರಿ ಬೆಳಗಾಗುವುದರೊಳಗೆ ‘ವರ್ಲ್ಡ್​ ಫೇಮಸ್​’ ಆಗುತ್ತಿದ್ದಾರೆ. ಮಾತ್ರವಲ್ಲ ಒಂದೊಳ್ಳೆಯ ಸಂಗೀತ, ಕಲೆ, ಬರವಣಿಗೆ, ವಿಡಿಯೋ ತುಣುಕುಗಳು ಕೆಲವೇ ನಿಮಿಷಗಳಲ್ಲಿ ವಿಶ್ವಾದ್ಯಾಂತ ಹರಿದಾಡಿ ಜನಪ್ರಿಯವಾಗುತ್ತಿವೆ, ಜನಪ್ರಿಯತೆ ತಂದು ಕೊಡುತ್ತಿವೆ.
ಅಂಥ ಪ್ರತಿಭೆಗಳಲ್ಲಿ ಈ ಸೋದರಿ ಜೋಡಿಯೂ ಒಂದು. ಈಗಾಗಲೇ ಜಂಟಿಯಾಗಿ ಹಾಡುವ ಮೂಲಕ ಸಾಕಷ್ಟು ಸಲ ಸಂಗೀತಪ್ರಿಯರ ಮನ ಗೆದ್ದಿರುವ ಈ ಸೋದರಿಯರು, ಈಗ ಮತ್ತೊಮ್ಮೆ ಕೇಳುಗರಿಗೆ ಸಂಗೀತದ ಖುಷಿ ನೀಡಿದ್ದಾರೆ. ಇವರು ಮತ್ಯಾರೂ ಅಲ್ಲ, ಸಹೋದರಿಯರಾಗಿರುವ ಅಂತರ ನಂದಿ ಹಾಗೂ ಅಂಕಿತ ನಂದಿ.
https://www.instagram.com/p/CFgoxuwhEXy/?utm_source=ig_web_copy_link
ಅಂತರ ನಂದಿ ಸೋದರಿ ಅಂಕಿತ ಜತೆ ಹಾಡಿರುವ ಚಿತ್ರಗೀತೆಯೊಂದರ ತುಣುಕನ್ನು ತಮ್ಮ ಇನ್​ಸ್ಟಾಗ್ರಾಮ್​ ಪ್ರೊಫೈಲ್​ನಲ್ಲಿ ನಾಲ್ಕು ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. ‘ಬೇಫಿಕ್ರೆ’ ಸಿನಿಮಾದ ‘ನಶೆ ಸಿ ಛಡ್​ ಗಯಿ’ ಗೀತೆಯನ್ನು ಇವರು ಒಂಚೂರೂ ಆಚೀಚೆ ಆಗದಂತೆ ಇಬ್ಬರೂ ಜತೆಯಾಗಿ ಹಾಡಿದ್ದು ಈ ವಿಡಿಯೋ ತುಣುಕಿನ ವಿಶೇಷ. ಈ ಪರ್​ಫೆಕ್ಟ್​ ವಾಯ್ಸ್​ ಸಿಂಕ್​ನ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕೇ ದಿನಗಳಲ್ಲಿ ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವರು ಮೆಚ್ಚುಗೆಯ ಕಮೆಂಟ್​ ಮಾಡಿದ್ದಾರೆ. ‘ಆವೊತ್ತಿಂದಿನ ನಮಗೆ ತುಂಬ ಸಮಯವಿತ್ತು, ಸಿಕ್ಕಾಪಟ್ಟೆ ವಿಡಿಯೋ ಮಾಡಿದ್ವಿ, ಅದರಲ್ಲಿ ಇದೂ ಒಂದು..’ ಎಂಬ ಸಾಲಿನೊಂದಿಗೆ ಅಂತರ ನಂದಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
