ನವದೆಹಲಿ:ರೈಲು ಚಲಿಸುವಾಗ ಹತ್ತಬಾರದು, ಹಳಿಗಳ ಮೇಲೆ ಇಳಿಯಬಾರದು ಎಂಬಿತ್ಯಾದಿ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಆದರೆ ಅನಾಗರಿಕರಂತೆ ವರ್ತಿಸುವ ಹಲವು ಪ್ರಯಾಣಿಕರು ಇದಾವುದನ್ನೂ ಲೆಕ್ಕಿಸದೆ ಜೀವ ಪಣಕ್ಕಿಟ್ಟು ರೈಲು ನಿಲ್ದಾಣಗಳಲ್ಲಿ ವರ್ತಿಸುವುದನ್ನು ಕಾಣಬಹುದು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ವೀಡಿಯೋ ಸಾಕ್ಷಿ.
ಇದನ್ನೂ ಓದಿ:ಲಿಟಲ್ ಚಾಂಪಿಯನ್.. ಅಭಿಮಾನಿಗೆ ಸಮಂತಾ ಪ್ರಶಂಸೆ!
ಇಂಡಿಯನ್​ ಟೆಕ್​ ಅಂಡ್​ ಇನ್ಫ್ರಾ ಇನ್​ಸ್ಟಾದಲ್ಲಿ ಈ ವೈರಲ್​ ವೀಡಿಯೋವನ್ನು ಪೋಸ್ಟ್​ ಮಾಡಿದೆ. ಇದರಲ್ಲಿ ಚಲಿಸುವ ರೈಲನ್ನು ಹತ್ತಲು ಕುಟುಂಬವೊಂದು ರೈಲುಹಳಿಗಳ ಮೇಲೆ ಇಳಿದಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ. ಆಕೆಯನ್ನು ಜೋರಾಗಿ ರೈಲಿನ ಒಳಗೆ ತಳ್ಳುತ್ತಾನೆ. ನಂತರ, ದೊಡ್ಡ ಲ್ಯಾಗೇಜ್​ಬ್ಯಾಗ್​ನೊಂದಿಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದು ಕಂಡುಬರುತ್ತಿದೆ.
We need more tracks and affordable trains on a priority basis, along with the Vande Bharat and Bullet trains.pic.twitter.com/KRINjbhdSl
— Indian Tech & Infra (@IndianTechGuide)May 20, 2024

ನಿಲ್ದಾಣದಿಂದ ಹೊರಡುತ್ತಿರುವ ರೈಲಿನಲ್ಲಿ ಇಂತಹ ದುಸ್ಸಾಹಸಕ್ಕೆ ಪ್ರಯಾಣಿಕರು ಇಳಿದಿದ್ದಾರೆ. ಬಾಗಿಲಿನ ಮೆಟ್ಟಿಲ ಮೇಲೆ ಅವರು ನೇತಾಡುತ್ತ ಪ್ರಯಾಣಿಸುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ಆಗಿದೆ. ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋ ಕಂಡು ನೆಟ್ಟಿಗರು ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಕಾಮೆಂಟ್​ ಮಾಡಿದ್ದಾರೆ.
ಯಾರೂ ಇಲ್ಲದ ಸಮಯದಲ್ಲಿ ಅವನು ಬಂದು ಅಂಗಿ ಬಿಚ್ಚಿದ ..ಭಯವಾಯ್ತು! ಖ್ಯಾತ ನಟಿ ಬಿಚ್ಚಿಟ್ಟ ಸತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
