ಕೊಯಮತ್ತೂರು :ಎರಡು ತಿಂಗಳ ನಂತರ ಕೊಯಮತ್ತೂರಿನಲ್ಲಿ ಮದ್ಯದಂಗಡಿಗಳನ್ನು ತೆಗೆದ ಹಿನ್ನೆಲೆಯಲ್ಲಿ ಮದ್ಯಪ್ರೇಮಿಗಳು ಫುಲ್ ಖುಶ್​! ಹಲವರು ಈ ಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿದ್ದರು. ಕೆಲವರು ತಮ್ಮ ಈ ಸಂಭ್ರಮವನ್ನು ಅಂಗಡಿಗಳ ಮುಂದೆ ಪಟಾಕಿ ಹೊಡೆಯುವ ಮೂಲಕ ಆಚರಿಸಿದರು ಎಂದು ಇಂಡಿಯ ಟುಡೇ ವರದಿ ಮಾಡಿದೆ.
ಕರೊನಾ ಪ್ರಕರಣ ಸಂಖ್ಯೆ ಕಡಿಮೆಯಾದ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಜೂನ್ ಮಧ್ಯಭಾಗದಿಂದಲೇ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಿ, ಮದ್ಯದಂಗಡಿಗಳನ್ನು ಸೀಮಿತ ಅವಧಿಗೆ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕರೊನಾ ಪ್ರಕರಣ ಹೆಚ್ಚಿದ್ದ ಕಾರಣಕ್ಕೆ ಕೊಯಮತ್ತೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಪೂರ್ಣ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಇದೀಗ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಈ 11 ಜಿಲ್ಲೆಗಳಲ್ಲಿ ಕೂಡ ಇಂದಿನಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದ್ದು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಭಾನುವಾರದಂದು ರಾಜ್ಯದಲ್ಲಿ ಒಟ್ಟು 3,867 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ.(ಏಜೆನ್ಸೀಸ್)
ಮಂಡ್ಯ ಹಾಲು ಒಕ್ಕೂಟದ ಅಕ್ರಮದ ಬಗ್ಗೆ ಎಚ್​​ಡಿಕೆ ಮೌನವೇಕೆ? – ಸಂಸದೆ ಸುಮಲತಾ ಅಂಬರೀಶ್ ಪ್ರಶ್ನೆ
VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ
ತಾಯಿ-ಚಿಕ್ಕಪ್ಪನ ಅಕ್ರಮ ಸಂಬಂಧ ಅರಿತ ಬಾಲಕ… ಮುಂದಾದದ್ದು ಭಾರೀ ದುರಂತ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
