ಇಂಧೋರ್​:ಲಾಕ್​ಡೌನ್​ ಅವಧಿ ವಿಸ್ತರಣೆ ಆಗುತ್ತಿದ್ದಷ್ಟೂ ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಅದರಲ್ಲೂ ವಲಸೆ ಕಾರ್ಮಿಕರು ತಮ್ಮ ಊರಿಗೆ ಬರಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವಲಸೆ ಕಾರ್ಮಿಕರನ್ನು ಆಯಾ ಸ್ಥಳೀಯ ಆಡಳಿತಗಳೇ ಬಸ್​ ಮೂಲಕ ಅವರ ಊರಿಗೆ ಕಳಿಸುತ್ತಿದ್ದಾರೆ. ಇನ್ನೂ ಹಲವೆಡೆ ಕಾರ್ಮಿಕರು ತಾವೇ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.
ವಾಹನ ಸಂಚಾರ ಇಲ್ಲದ ಕಾರಣ ಅದೆಷ್ಟೋ ವಲಸೆ ಕಾರ್ಮಿಕರು ನಡೆದೇ ತಮ್ಮೂರು ಸೇರಿಕೊಂಡಿದ್ದಾರೆ. ಇನ್ನೊಂದಿಷ್ಟು ಜನ ತರಕಾರಿ, ಹಣ್ಣುಗಳ ಲಾರಿಯ ಮೂಲಕ, ಗಡಿ ಭಾಗದಲ್ಲಿರುವ ಕಳ್ಳ ದಾರಿಯ ಮೂಲಕ ಮನೆ ತಲುಪಿದ್ದಾರೆ.
ಈಗ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಒಂದಷ್ಟು ಜನ ವಲಸೆ ಕಾರ್ಮಿಕರು ಅತ್ಯಂತ ಅಪಾಯಕಾರಿ ಜಾಗದಲ್ಲಿ ಕುಳಿತು ಬಂದಿದ್ದನ್ನು ಕಾಣಬಹುದು.
ಸುಮಾರು 18 ಜನ ಕಾರ್ಮಿಕರು ಮಹಾರಾಷ್ಟ್ರದಿಂದ ಸಿಮೆಂಟ್​ ಕಾಂಕ್ರೀಟ್​ ಮಿಶ್ರಣ ಮಾಡುವ ಮಶಿನ್​ ಹೊತ್ತ ಟ್ರಕ್​ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದರು. ಅದೂ ಕೂಡ ಕಾಂಕ್ರೀಟ್​ ಮಿಕ್ಸ್ ಮಾಡುವ ಮಶಿನ್​ ಒಳಗೆ ಅಡಗಿ ಕುಳಿತು ಅಲ್ಲಿಂದ ಆಗಮಿಸಿದ್ದಾರೆ. ಈ ಟ್ರಕ್​ ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಲಖನೌಗೆ ತೆರಳುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಂಕ್ರೀಟ್​ ಮಿಶ್ರಣದ ದೊಡ್ಡ ಟ್ಯಾಂಕ್​ ಹೊತ್ತ ಲಾರಿಯನ್ನು ಪೊಲೀಸರು ಇಂಧೋರ್​ ಬಳಿ ಪರಿಶೀಲನೆಗೆಂದು ತಡೆದಿದ್ದಾರೆ. ಅನುಮಾನ ಬಂದು ಅದ ಮುಚ್ಚಳವನ್ನು ತೆರೆದಾಗ ಯಂತ್ರದೊಳಗೆ ಇದ್ದ 18 ಕಾರ್ಮಿಕರು ಒಬ್ಬರ ಹಿಂದೆ ಮತ್ತೊಬ್ಬರಂತೆ ಹೊರಗೆ ಬಂದಿದ್ದಾರೆ.
ಇದನ್ನೂ ಓದಿ:ರಾಜ್ಯ ಸರ್ಕಾರದಿಂದ 3ನೇ ಹಂತದ ಲಾಕ್​ಡೌನ್ ಮಾರ್ಗಸೂಚಿ ಬಿಡುಗಡೆ; ಕಂಟೇನ್​ಮೆಂಟ್​ ವಲಯ, ರೆಡ್​ ಝೋನ್​ಗಳಲ್ಲಿ ಏನಿರತ್ತೆ? ಏನಿರಲ್ಲ..?
ಇವರೆಲ್ಲ ಉತ್ತರ ಪ್ರದೇಶದವರು. ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದರು. ಈಗ ಮತ್ತೊಮ್ಮೆ ಲಾಕ್​ಡೌನ್​ ವಿಸ್ತರಣೆ ಆದ ಹಿನ್ನೆಲೆಯಲ್ಲಿ ಹೀಗೆ ಊರಿಗೆ ಹೊರಟಿದ್ದರು ಎಂದು ಟ್ರಾಫಿಕ್​ ಪೊಲೀಸ್ ಸಬ್​ ಇನ್ಸ್​ಪೆಕ್ಟರ್​ ಅಮಿತ್​ ಕುಮಾರ್ ಯಾದವ್​ ಮಾಹಿತಿ ನೀಡಿದ್ದಾರೆ.
ಸದ್ಯ ಈ ಕಾರ್ಮಿಕರನ್ನೆಲ್ಲ ವೈದ್ಯಕೀಯ ತಪಾಸಣೆಗೆಂದು ಆಶ್ರಯ ತಾಣಕ್ಕೆ ಕಳಿಸಲಾಗಿದೆ. ಹಾಗೇ ಉತ್ತರ ಪ್ರದೇಶಕ್ಕೆ ಕಳಿಸಲು ಬಸ್​ಗಳನ್ನೂ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.  ಸದ್ಯ ಟ್ರಕ್​​ ಚಾಲಕನನ್ನು ಅರೆಸ್ಟ್​ ಮಾಡಲಾಗಿದ್ದು, ವಾಹನ ಜಪ್ತಿಯಾಗಿದೆ.
ಶನಿವಾರವಷ್ಟೇ 347 ವಲಸೆ ಕಾರ್ಮಿಕರನ್ನೊಳಗೊಂಡ ವಿಶೇಷ ರೈಲು ಮಹಾರಾಷ್ಟ್ರದ ನಾಸಿಕ್​ನಿಂದ ಮಧ್ಯಪ್ರದೇಶ ಭೋಪಾಲ್​ಗೆ ಆಗಮಿಸಿದೆ. ನಂತರ ಅವರನ್ನೆಲ್ಲ ಬಸ್​ ಗಳ ಮೂಲಕ ಆಯಾ ಹಳ್ಳಿಗಳಿಗೆ ಕಳಿಸಲಾಗಿದೆ. (ಏಜೆನ್ಸೀಸ್)
https://www.facebook.com/VVani4U/videos/836176303531268/?t=0
ಇದನ್ನೂ ಓದಿ:ಲಾಕ್​ಡೌನ್​ ಸಮಯದಲ್ಲಿ ಸರ್ಕಾರದ ನಿರ್ದೇಶನ ಪಾಲಿಸದ ತಿರುಪತಿ ದೇಗುಲ ಮಂಡಳಿ, ಕಾರ್ಮಿಕ ಸಂಘಟನೆಗಳ ಆಕ್ರೋಶ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
