ಭೋಪಾಲ್​:ವಿಭಜನೆಯಾದ ಏಳು ದಶಕಗಳ ಬಳಿಕ ಪಾಕಿಸ್ತಾನದ ಜನರಿಗೆ ಭಾರತದಿಂದ ದೇಶ ವಿಭಜನೆಯಾಗಬಾರದಿತ್ತು ಎಂಬ ಅರಿವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ,ಮೋಹನ್​ ಭಾಗವತ್​ ಅಭಿಪ್ರಾಪಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುವ ವೇಳೆ 1947ರಲ್ಲಿ ವಿಭಜನೆಗೂ ಮೊದಲು ಭಅರತವಾಗಿತ್ತು. ವಿಭಜನೆಯ ನಂತರ ಅಲ್ಲಿನ ಜನರು ನೋವಿನಲ್ಲಿ ಜೀವನ ಕಳೆಯುವಂತಾಗಿದೆ.
ಎರಡು ದೇಶಗಳ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಭಾಗವತ್​ ಭಾರತವು ಬೇರೆ ದೇಶಗಳ ಮೇಲೆ ದಾಳಿ ನಡೆಸುವಂತೆ ಕರೆ ಕೊಟ್ಟಿಲ್ಲ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುತ್ತಿಲ್ಲ ಭಾರತ ಆ ಸಂಸ್ಕೃತಿಗೆ ಸೇರಿದ ದೇಶ ಅಲ್ಲ ಎಂದು ಹೇಳಿದ್ಧಾರೆ.
ಇದನ್ನೂ ಓದಿ:ಪತ್ರಕರ್ತನ ಮೇಲೆ ದಾಳಿ ಪ್ರಕರಣ; ಇಬ್ಬರು ಹೈಬ್ರಿಡ್​ ಉಗ್ರರ ಬಂಧನ
ನಾವು ನಮ್ಮ ಆತ್ಮ ರಕ್ಷಣೆಗಾಗಿ ತಕ್ಕ ತಿರುಗೇಟು ನೀಡುತ್ತಾ ಬಂದವರು ಎಂದು ಭಾರತ ಪಾಕಿಸ್ತಾನದ ವಿರುದ್ದ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ಗಳ ಬಗ್ಗೆ ಮಾತನಾಡಿದ್ದಾರೆ.
ಪಾಕಿಸ್ತಾನದ ಜನರು ಈಗ ಭಾರತದಿಂದ ವಿಭಜನೆಯಾಗಿ ದೊಡ್ಡ ತಪ್ಪನ್ನು ಮಾಡಿದ್ದೇವು ಎಂದು ಹೇಳುತ್ತಿದ್ದಾರೆ. ವಿಭಜನೆಯ ಸಮಯದಲ್ಲಿ ಸಿಂಧಿ ಸಮುದಾಯದವರು ಸಿಂಧು ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಾಪಾಡಲು ಆ ಭಾರತದಿಂದ ಈ ಭಾರತಕ್ಕೆ ಬಂದರು ಎಂದು ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
