ಬಿಹಾರ:ಹಣವೆಂದರೆ ಹೆಣವು ಬಾಯಿ ಬಿಡುತ್ತದೆ ಎನ್ನುವ ಗಾದೆ ಮಾತನ್ನು ಕೇಳಿದ್ದೇವೆ. ಆದರೆ ಈ ಗಾದೆ ನಿಜ ಎನ್ನುವುದಕ್ಕೆ ಸಾಕ್ಷಿಯಾಗಿ ಬಿಹಾರದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಹಣದ ನೋಟುಗಳ ಕಟ್ಟುಗಳನ್ನು ಚರಂಡಿಯಲ್ಲಿ ತೇಲುವುದನ್ನು ನೋಡಿದರೆ ನೀವೇನು ಮಾಡುತ್ತೀರಿ? ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಪಟ್ಟಣದಲ್ಲಿ ಗಬ್ಬು ನಾರುತ್ತಿರುವ ಚರಂಡಿಯೊಂದರಲ್ಲಿ ನೋಟುಗಳ ರಾಶಿಯೊಂದು ತೇಲುತ್ತಿರುವುದು ಕಂಡು ಬಂದಿದ್ದು, ಚರಂಡಿಯೊಳಕ್ಕೆ ಇಳಿದು ಜನರು ಹಣ ಹುಡುಕುತ್ತಿರುವ ವಿಡಿಯೋವೊಂದು ಸೋಷಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ರೋಡ್ ಶೋಗೆ ಕ್ಷಣಗಣನೆ: ತುಂತುರು ಮಳೆ ಮಧ್ಯೆಯೇ ಜಮಾಯಿಸಿದ ಜನರು
ವಿಡಿಯೋದಲ್ಲಿ ಏನಿದೆ?:2ಸಾವಿರ, 500, 100 , 10 ರೂ. ನೋಟುಗಳ ಬಂಡಲ್‌ ಚರಂಡಿಯೊಳಗೆ ಪತ್ತೆಯಾಗಿದ್ದು, ಜನರು ಒಬ್ಬೊಬ್ಬರಂತೆ ಜನಸಂದಣಿಯು ಚರಂಡಿ ಮೇಲಿನ ಸೇತುವೆಯ ಮೇಲೆ ಜಮಾಯಿಸಲು ಪ್ರಾರಂಭಿಸಿತು. ಈ ವೇಳೆ, ಕೆಲವರು ಚರಂಡಿಯೊಳಕ್ಕೆ ಇಳಿದು ಹಣ ಹುಡುಕಲು ಯತ್ನಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಸ್ಥಳಕ್ಕಾಗಮಿಸಿದರು.
‘ಬೆಳಿಗ್ಗೆ 8 ಗಂಟೆ ಸುಮಾರಿಗೆ, ನಾವು ಚರಂಡಿಯಲ್ಲಿ ಭಾರಿ ಪ್ರಮಾಣದ ಹಣ ತೇಲುತ್ತಿರುವುದನ್ನು ನೋಡಿದ್ದೇವೆ, ಆದ್ದರಿಂದ, ನಾವು ಅದನ್ನು ನೋಡಲು ಇಲ್ಲಿ ನಿಂತೆವು. ಕೆಲವೊಬ್ಬರು ಚರಂಡಿಗೆ ಇಳಿದು ಹಣವನ್ನು ಸಂಗ್ರಹಿಸಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ನಾವು ಹಿಂತಿರುಗಿದಾಗ ಯಾವುದೇ ನಗದು ತೇಲುತ್ತಿರಲಿಲ್ಲ’ ಎಂದು ವ್ಯಕ್ತಿಯೊಬ್ಬರು ಹೇಳಿದರು.
If it is money, people will do anything. They waded sewage water in a canal in#Sasaramtown in#Rohtasdistrict of#Biharto collect bundles of sodden, rotten currency notes.#India#Rupees#MoneyHeistpic.twitter.com/0NCCCHKf7u
— Dev Raj (@JournoDevRaj)May 6, 2023

ನೋಟುಗಳು ಅಸಲಿಯೇ ಮತ್ತು ಅವುಗಳನ್ನು ಯಾರು ಚರಂಡಿಗೆ ಎಸೆದಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.
ಮದುವೆ ಮನೆಯ ಬಸ್‌ ಪಲ್ಟಿಯಾಗಿ ಐವರು ಮೃತ್ಯು; 15 ಮಂದಿ ಗಂಭೀರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 15 =
Remember me
