ಲಖನೌ:ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಕ್ಷುಲಕ ಕಾರಣಗಳಿಗೆ ವ್ಯಾಪಕ ಸದ್ದು ಮಾಡುತ್ತಿವೆ. ಇದೀಗ ಬಿರಿಯಾನಿ ಅಲ್ಲಿ ಲೆಗ್​ಪೀಸ್​ ಸಿಗಲಿಲ್ಲ ಎಂಬ ಕಕಾರಣಕ್ಕೆ ಮದುವೆ ಮನೆ ರಣರಂಗವಾಗಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಅಭಿಜಿತ್​ ಮಜುಂದಾರ್​ ಎಂಬುವವರು ಪೋಸ್ಟ್​ ಮಾಡಿದ್ದು, ಜನ ಹೊಡೆದಾಡುವುದನ್ನು ನೋಡಬಹುದಾಗಿದೆ.
Bareilly, UP.Chicken leg pieces in the biryani got over at the wedding dawaat.So, the groom and his guests were served kicks, punches, and flying chairs.pic.twitter.com/rhmxIAw35m
ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ದಾಸ; ಅರೆಸ್ಟ್ ಆದ 12 ದಿನದಲ್ಲಿ ಭಾರೀ ತೂಕ ಕೆಳದುಕೊಂಡ ದರ್ಶನ್
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಗಂಡಿನ ಕಡೆಯವರಿಗೆ ನೀಡಲಾಗಿರುವ ಬಿರಿಯಾನಿಯಲ್ಲಿ ಲೆಗ್​ ಪೀಸ್​ ಇಲ್ಲ ಎಂದು ವಧುವಿನ ಕಡೆಯವರು ತಗಾದೆ ತೆಗೆಯುತ್ತಾರೆ. ಇದಕ್ಕೆ ಆಕ್ಷೇಪಿಸುವ ವರನ ಕಡೆಯವರು ಅಡಜಸ್ಟ್​ ಮಾಡಿಕೊಳ್ಳುವಂತೆ ಮನವಿ ಮಾಡುತ್ತಾರೆ. ವರನ ಕಡೆಯವರು ಇದಕ್ಕೆ ಒಪ್ಪದಿದ್ದಾಗ ವಾಗ್ವಾದ ಶುರುವಾಗಿದ್ದು, ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ರಾಜಿ ಸಂಧಾನ ಮಾಡಿಸಿ ಮದುವೆ ಕಾರ್ಯಕ್ರಮವನ್ನು ಮುಂದುವರೆಸಲು ಅನುವು ಮಾಡಿಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ಕುರ್ಚಿಗಳನ್ನು ಪರಸ್ಪರ ಎಸೆಯುತ್ತಿರುವ ದೃಶ್ಯವನ್ನು ಕಾಣಬಹುದು. ವರ ಹಾಗೂ ವಧುವಿನ ಕಡೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಇಂತಹ ಕ್ಷುಲ್ಲಕ ಕಾರಣಕ್ಕೂ ಜಗಳವಾಡುವ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಕಮೆಂಟ್​ಗಳ ಮೂಲಕ ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 10 =
Remember me
