ಗೋರಖ್​ಪುರ:ಮೋದಿ ಮೋಡಿಗೆ ಮತ್ತೊಂದು ಉದಾಹರಣೆ ಎಂಬಂತೆ ಇಂದು ಉತ್ತರಪ್ರದೇಶದ ಗೋರಖ್​ಪುರ ಸಾಕ್ಷಿಯಾಗಿದೆ. ನರೇಂದ್ರ ಮೋದಿಯವರನ್ನು ನೋಡಲು ಬಂದಿದ್ದ ಜನರು ಮಳೆಯಲ್ಲೂ ಕಾದು ನಿಂತು ಪ್ರಧಾನಿಯನ್ನು ಕಣ್ತುಂಬಿಕೊಂಡರು.
ಜನರು ಮಳೆಯಲ್ಲಿ ನಿಂತು ಪ್ರಧಾನಿ ಮೋದಿಯವರ ಬರುವಿಕೆಯನ್ನು ಕಣ್ತುಂಬಿಕೊಂಡ ಇಂದಿನ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ದೇಶದ ಪ್ರಧಾನಿ ಕುರಿತ ಅಭಿಮಾನ, ಅದರಲ್ಲೂ ವಿಶ್ವಗುರು ಮೋದಿಯ ಮೋಡಿಗೆ ಇಂದಿನ ದೃಶ್ಯ ನಿದರ್ಶನ ಎಂಬಂತಾಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ:ಉರಗಗಳ ಮಹಾ ಕದನ: ವಿಷದಿಂದ ಹೆಬ್ಬಾವು, ಉಸಿರುಗಟ್ಟಿ ಕಾಳಿಂಗ ಸರ್ಪ ಸಾವು!
ಗೋರಖ್​ಪುರದ ಗೀತಾ ಪ್ರೆಸ್​ನ ಶತಮಾನೋತ್ಸವ ಸಮಾರಂಭ ಹಾಗೂ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆ ನೀಡಲು ಬಂದಿದ್ದ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾಗ ಮಳೆ ಸುರಿಯಲಾರಂಭಿಸಿತ್ತು. ಅದಾಗ್ಯೂ ಜನರು ಅದನ್ನು ಲೆಕ್ಕಿಸದರೆ ನೆಚ್ಚಿನ ಮೋದಿಯನ್ನು ನೋಡಿ ಪುಳಕಿತರಾದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮೋದಿ ಮೋಡಿಯ ಕುರಿತು ಬೆರಗು ಕೂಡ ವ್ಯಕ್ತವಾಗಿದೆ. –ಏಜೆನ್ಸೀಸ್
ಮೋದಿ ಮೋಡಿ: ಗೋರಖ್​ಪುರದಲ್ಲಿ ಮಳೆಯನ್ನೂ ಲೆಕ್ಕಿಸದೆ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಂಡ ಜನತೆ
ವಿವರಗಳಿಗೆhttps://t.co/YaFZZchf1Jನೋಡಿ..pic.twitter.com/hlwGcHHIHe
— Vijayavani (@VVani4U)July 7, 2023

ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
