| ರಾಘವ ಶರ್ಮ ನಿಡ್ಲೆ, ನವದೆಹಲಿಯಮುನಾ ನದಿ ಪ್ರವಾಹ ಸಂತ್ರಸ್ತರ ಭವಿಷ್ಯವನ್ನೇ ಅಂಧಕಾರದತ್ತ ತಳ್ಳಿದ್ದರೆ ಮತ್ತೊಂದೆಡೆ ನಿರಾಶ್ರಿತರ ಕೇಂದ್ರಗಳಲ್ಲೂ ಅವರ ಬದುಕು ಅಸಹನೀಯವಾಗಿದೆ. ಅಗತ್ಯ ವ್ಯವಸ್ಥೆಗಳಿಲ್ಲದೆ ನಿರಾಶ್ರಿತರು ಜಾನುವಾರುಗಳಂತೆ ಬದುಕಬೇಕಾಗಿದೆ. ಸದ್ಯ ನದಿ ಪಕ್ಕದ ಮಯೂರ್ ವಿಹಾರ್ ಪ್ರದೇಶದ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಟೆಂಟ್​ಗಳನ್ನೇ ವಸತಿ ಕೇಂದ್ರಗಳನ್ನಾಗಿ ಬಳಸಲಾಗುತ್ತಿದೆ. ಸುಮಾರು 5000 ಮಂದಿಯ ಬದುಕೀಗ ಬೀದಿಗೆ ಬಿದ್ದಿದೆ.
ದೆಹಲಿಯ ಅಕ್ಷರಧಾಮ, ಮಯೂರ್ ವಿಹಾರ್, ಅಶೋಕ್ ನಗರಕ್ಕೆ ಅಂಟಿಕೊಂಡಿರುವ ಯಮುನಾ ನದಿ ಕಿನಾರೆಯಲ್ಲಿ ವಲಸೆ ಬಂದ ಜನರು ಹತ್ತಾರು ವರ್ಷಗಳಿಂದ ಕೃಷಿಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಪ್ರವಾಹದ ನೀರು ನುಗ್ಗಿದ ರಭಸಕ್ಕೆ ಮನೆ, ಕೃಷಿ ಯಂತ್ರ, ಅಗತ್ಯ ಸಲಕರಣೆಗಳು, ಮನೆ ಸಾಮಗ್ರಿ, ಮಕ್ಕಳ ಶಾಲೆ ಪುಸ್ತಕಗಳು ನೀರು ಪಾಲಾಗಿವೆ. ಕೆಲ ಟೆಂಟ್​ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಲ್ಲಿ ಮಕ್ಕಳಿಗೆ ತೊಡಿಸಲು ಬಟ್ಟೆಗಳೇ ಇಲ್ಲದಂತಾಗಿದೆ. ಕೆಲ ಮಂದಿ ತಮ್ಮ ಜಾನುವಾರುಗಳನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಗಳಲ್ಲಿ ಕಟ್ಟಿ ಹಾಕಿದ್ದಾರೆ. ಈ ಕೇಂದ್ರದಲ್ಲಿ ಅಸ್ವಚ್ಛತೆ ಎದ್ದುಕಾಣುತ್ತಿದೆ. ಮಲ-ಮೂತ್ರ ವಿಸರ್ಜನೆಗೆ ಬೇಕಾದಷ್ಟು ತಾತ್ಕಾಲಿಕ ಶೌಚಾಲಯಗಳನ್ನೂ ಸರ್ಕಾರದಿಂದ ಕಟ್ಟಿ ಕೊಡಲಾಗಿಲ್ಲ ಎಂದು ಮಹಿಳೆಯರು ದೂರುತ್ತಾರೆ.
ಜೋಪಡಿ ನಿರ್ಮಾಣ ಅಕ್ರಮ:ಜೋಪಡಿಗಳ ಮರು ನಿರ್ವಣಕ್ಕೆ ಸರ್ಕಾರ ಪರಿಹಾರ ನೀಡುವ ಸಾಧ್ಯತೆ ಕಡಿಮೆ. ಈ ಜೋಪಡಿಗಳೆಲ್ಲವನ್ನೂ ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಆದರೆ ನಿವಾಸಿಗರು ಆಧಾರ್ ಕಾರ್ಡ್ ಹೊಂದಿದ್ದಾರೆ. ಮನೆ, ಜೋಪಡಿಗಳು ಅಕ್ರಮ ಎಂದಾದರೆ ಅವರಿಗೆ ಅದೇ ವಿಳಾಸಕ್ಕೆ ಗುರುತಿನ ಚೀಟಿ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ. ಇವರನ್ನು ಸ್ಥಳಾಂತರಗೊಳಿಸುವ ಕೆಲಸವನ್ನು ಎಷ್ಟೋ ವರ್ಷಗಳ ಮೊದಲೇ ಮಾಡಬೇಕಿತ್ತು.
ರೋಗಗಳಿಗೆ ಆಹ್ವಾನ:ನಿರಾಶ್ರಿತರ ಕೇಂದ್ರಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕಿದ್ದರೂ, ಅಧಿಕಾರಿ ವರ್ಗ ತಲೆಕೆಡಿಸಿಕೊಂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ, ಕಾಲರಾದಂತಹ ಮಹಾಮಾರಿಗಳಿಗೆ ಜನ ತುತ್ತಾಗಲಿದ್ದಾರೆ ಎಂದು ನಿರಾಶ್ರಿತರಿಗೆ ಸಹಾಯ ಒದಗಿಸುತ್ತಿರುವ ನವ ಉದಯ್ ಕಿರಣ್ ಎಂಬ ಎನ್​ಜಿಒ ಸದಸ್ಯ ಅಸೀಮ್ ಎಚ್ಚರಿಕೆ ನೀಡುತ್ತಾರೆ.
ಮುಂದಿನ ಜೀವನ ಬಗ್ಗೆ ಚಿಂತೆ:ಸುಮಾರು ರೂ.1 ಲಕ್ಷ ವೆಚ್ಚದ ಕೃಷಿ ಯಂತ್ರ ಪ್ರವಾಹದಲ್ಲಿ ಕೊಚ್ಚಿ ಹೋಯಿತು ಎಂದು ಕಣ್ಣೀರು ಹಾಕಿದ ಸಂಜು ದೇವಿ, ಮೂಲತಃ ಪೂರ್ವ ಉತ್ತರ ಪ್ರದೇಶದ ಜೌನ್​ಪುರ ಜಿಲ್ಲೆಯವರು. ಕಳೆದ 40 ವರ್ಷದಿಂದ ಕೃಷಿ ಮಾಡುತ್ತಾ ಜೀವನ ನಡೆಸಿದ್ದಾರೆ. ನಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕು. ಕೈಯಲ್ಲಿ ನಯಾಪೈಸೆಯಿಲ್ಲ. ಮನೆ ಸಾಮಗ್ರಿಗಳೆಲ್ಲವೂ ನೀರು ಪಾಲಾಗಿದೆ. ಸರ್ಕಾರ ಪರಿಹಾರ ಯಾವುದೇ ಭರವಸೆ ನೀಡಿಲ್ಲ. ಮುಂದಿನ ಜೀವನ ಹೇಗೆಂದೇ ಗೊತ್ತಾಗುತ್ತಿಲ್ಲ ಎಂದರು. ನಮ್ಮದೇನೂ ತಪ್ಪಿಲ್ಲದಿದ್ದರು, ನಮ್ಮ ಅವಿವೇಕತನದಿಂದ ಈ ಗತಿ ಬಂದಿದೆ ಎಂದು ನಗರ ನಿಗಮದ ಅಧಿಕಾರಿಗಳು ದೂರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಯುವಕ ಅನುಜ್ ಪಟೇಲ್, ನಮಗೆ ಪ್ರವಾಹದ ಮುನ್ಸೂಚನೆ ನೀಡಲೇ ಇಲ್ಲ. ನೀಡಿದ್ದೆವು ಎಂದು ಈಗ ಸುಳ್ಳು ಹೇಳುತ್ತಿದ್ದಾರೆ. ಮುಂದೆ ನಾವೇನು ಮಾಡಬೇಕು ಎಂದು ಕೇಳಿದರೆ ಊರಿಗೆ ವಾಪಸ್ ಹೋಗಿ ಎನ್ನುತ್ತಿದ್ದಾರೆ. ಊರಿಗೆ ಹೋಗಿ ಏನು ಮಾಡುವುದು ನೀವೇ ಹೇಳಿ ಎಂದು ಪ್ರಶ್ನಿಸುತ್ತಾರೆ.
ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:two × 1 =
Remember me
