ಗುರುದಾಸ್​ಪುರ/ಮಥುರಾ :ಕರೊನಾ ಸಾಂಕ್ರಾಮಿಕ ಹರಡಿರುವ ಈ ಸಂಕಷ್ಟದ ಸಮಯದಲ್ಲಿ ಜನಪ್ರತಿನಿಧಿಗಳು ಸ್ವಕ್ಷೇತ್ರದಲ್ಲಿದ್ದು ತಮ್ಮ ಅಗತ್ಯಗಳಿಗೆ ಸ್ಪಂದಿಸಬೇಕೆಂದು ಜನ ಅಪೇಕ್ಷಿಸುವುದು ಸ್ವಾಭಾವಿಕ. ಅಂತಹುದೇ ಅಪೇಕ್ಷೆಯನ್ನು ಬಿಜೆಪಿ ಸಂಸದರಾಗಿರುವ ಬಾಲಿವುಡ್​ ನಟಿ ಹೇಮಾ ಮಾಲಿನಿ ಮತ್ತು ಪುತ್ರ ನಟ ಸನ್ನಿ ಡಿಯೋಲ್ ಬಗ್ಗೆ ಅವರ ಲೋಕಸಭಾ ಕ್ಷೇತ್ರಗಳ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್​ನ ಗುರುದಾಸ್​ಪುರದಲ್ಲಿ ಒಂದು ವರ್ಷದಿಂದ ಅವರು ಕಾಣಿಸಿಕೊಂಡೇ ಇಲ್ಲ ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ. ಅವರ ಭಾವಚಿತ್ರವನ್ನು ಹಾಕಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್​ಗಳನ್ನು ಮುದ್ರಿಸಿದ್ದಾರೆ. “ಕರೊನಾ ಹಾವಳಿ ಇದೆ, ರೈತರ ಪ್ರತಿಭಟನೆಯೂ ನಡೆದಿದೆ. ಆದರೆ ಸಂಸದರು ಮಾತ್ರ ಇಲ್ಲಿಗೆ ಭೇಟಿ ನೀಡದೆ ಮುಂಬೈನಲ್ಲೇ ಮೊಕ್ಕಾಂ ಹೂಡಿದ್ದಾರೆ” ಎಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಊಟ ಕೇಳಿದ 82 ವರ್ಷದ ತಾಯಿಗೆ ಹೊಡೆದು ಮನೆಯಿಂದ ಹೊರಹಾಕಿದ ಮಗ!
ಮತ್ತೊಂದೆಡೆ, ಸಂಸದೆ ಹೇಮಾ ಮಾಲಿನಿ ಅವರೂ ತಮ್ಮ ಲೋಕಸಭಾ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ ಎಂದು ಮಥುರಾ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಸೆಲೆಬ್ರಿಟಿ ಕಾಂಗ್ರೆಸ್​ ಶಾಸಕರಾದ ಕ್ರಿಕೆಟಿಗ ನವಜೋತ್​ ಸಿಂಗ್ ಸಿಧು ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಅಮೃತಸರಕ್ಕೆ ಭೇಟಿಯೇ ನೀಡುವುದಿಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ವರದಿಗಳೂ ಇತ್ತೀಚೆಗೆ ಬಂದಿದ್ದವು.(ಏಜೆನ್ಸೀಸ್)
ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ 646 ವೈದ್ಯರು ಕರೊನಾಗೆ ಬಲಿ

ಲಾಭಕ್ಕಾಗಿ ಕರೊನಾ ಲಸಿಕೆ ಮಾರಿಕೊಂಡ ಸರ್ಕಾರ… ಇದೀಗ ಹೊರಡಿಸಿದೆ ತಿದ್ದುಪಡಿ ಆದೇಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
