ಚೆನ್ನೈ:ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿಸಿ ದೇಶದ ಹಲವೆಡೆ ತಿಂಗಳುಗಳಿಂದ ಹೋರಾಟ ನಡೆಯುತ್ತಿದೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಹೋರಾಟದ ಕಿಚ್ಚು ಹತ್ತಿದ್ದು ಬೃಹತ್​ ಮೆರವಣಿಗೆಯ ಮೂಲಕ ಹೋರಾಟಗಾರರು ರಾಜ್ಯ ಸಚಿವಾಲಯದತ್ತ ಹೊರಟಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆಸದಂತೆ ತಡೆಗಟ್ಟಲು ಮದ್ರಾಸ್​ ಹೈ ಕೋರ್ಟ್​ ಮಂಗಳವಾರದಂದು ಆದೇಶ ಹೊರಡಿಸಿತ್ತು. ನ್ಯಾಯಮೂರ್ತಿಗಳಾದ ಎಂ​. ಸತ್ಯನಾರಾಯಣ್​ ಮತ್ತು ಆರ್​.ಹೇಮಲತಾ ಇದ್ದ ನ್ಯಾಯಪೀಠವು ಹೋರಾಟಗಾರರು ಮೆರವಣಿಗೆ ನಡೆಸುವುದನ್ನು ತಡೆಗಟ್ಟಲು ಕೋರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಬಂದಿದ್ದ ಪಿಐಎಲ್​ನ ಆದೇಶವನ್ನು ಅಂಗೀಕರಿಸಿದ್ದರು.
ಇಂದು ನಗರದಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದು, ಯಾವುದೇ ಹಿಂಸಾತ್ಮಕ ಚಟುವಟಿಕೆ ನಡೆಯದಿರುವಂತೆ ನೋಡಿಕೊಳ್ಳುವ ಸಲುವಾಗಿ ಸಾವಿರಾರು ಪೊಲೀಸರನ್ನು ನೇಮಿಸಿರುವುದಾಗಿ ನಗರ ಪೊಲೀಸ್​ ಆಯುಕ್ತ ಎ.ಕೆ.ವಿಶ್ವನಾಥ್​ ತಿಳಿಸಿದ್ದಾರೆ. ನ್ಯಾಯಾಲಯದಿಂದ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದಾಗಿ ಅವರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + one =
Remember me
