ನವದೆಹಲಿ:ದೇಶದಲ್ಲಿ ಕರೊನಾ ಎರಡನೇ ಅಲೆ ತಗ್ಗಿದೆ. ಇನ್ನು ಕೆಲವೇ ದಿನಗಳಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿದೆ. ಆದರೂ ಅದನ್ನು ಲೆಕ್ಕಿಸದ ಜನರು ಬೇಕಾಬಿಟ್ಟಿ ಓಡಾಡಿಕೊಂಡು, ಪ್ರವಾಸ ಮಾಡಿಕೊಂಡು ಸಮಯ ಕಳೆಯಲಾರಂಭಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಜನರು ಕರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಹವಾಮಾನ ವರದಿಯಂತೆ ಕೇಳಿ ಸುಮ್ಮನಾಗುತ್ತಿದ್ದಾರೆ ಎಂದು ಹೇಳಿದೆ.
ಮಂಗಳವಾರದಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ ಪಾಲ್, “ಜಾಗತಿಕವಾಗಿ, ಕೋವಿಡ್ 19ರ ಮೂರನೇ ಅಲೆಯನ್ನು ಕಾಣಲಾಗುತ್ತಿದೆ. ಭಾರತದಲ್ಲಿ ಅದು ಸಂಭವಿಸದಂತೆ ಗಂಭೀರ ಪ್ರಯತ್ನಗಳನ್ನು ಮಾಡುವಂತೆ ಜನರಿಗೆ ಮನವಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
“ಕರೊನಾ ಹೋಯಿತೆಂದು ಜನರು ಎಲ್ಲ ಮರೆತುಬಿಡಬಾರದು. ಸೋಂಕನ್ನು ನಿಯಂತ್ರಣದಲ್ಲಿಡಲು ಕಟ್ಟುನಿಟ್ಟಾಗಿ ಕೋವಿಡ್ 19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ದೇಶದ ಹಲವಾರು ಭಾಗಗಳಲ್ಲಿ ಕರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿರುವುದನ್ನು ಗಮನಿಸಲಾಗುತ್ತಿದೆ. ಇದು ನಾವು ಇಲ್ಲಿಯವರೆಗೆ ಗಳಿಸಿದ ಮಾಡಿದ ಶ್ರಮವನ್ನೆಲ್ಲ ವ್ಯರ್ಥ ಮಾಡಬಹುದು. ಜನರು ಕರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹವಾಮಾನ ವರದಿ ಕೇಳಿದಂತೆ ಕೇಳಿ ಸುಮ್ಮನಾಗುತ್ತಿದ್ದಾರೆ. ಅದರ ಗಂಭೀರತೆ ಮತ್ತು ನಮ್ಮ ಎಚ್ಚರಿಕೆಯನ್ನು ನಾವು ಮರೆಯುತ್ತಿದ್ದೇವೆ” ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)
ದಿವ್ಯಾಗೆ ಪೆಟ್ಟಾದರೆ ಅರವಿಂದ್ ಧ್ವನಿ ನಡುಗತ್ತೆ; ಕೆಪಿಗೆ ಸಮಾಧಾನ ಮಾಡಿದ ಡಿಯು

ಎರಡೇ ದಿನಗಳಲ್ಲಿ 50 ಬಾರಿ ಟ್ರಾಫಿಕ್ ನಿಯಮ ಮುರಿದ ಕಾರು! ಡ್ರೈವರ್​ ಸಿಕ್ಕಾಗ ಬಯಲಾಗಿದ್ದು ಬೇರೆಯದ್ದೇ ಕಥೆ

ಅಜ್ಜಿಯ ಬಾಲ್ಯದ ಕನಸನ್ನ ನನಸಾಗಿಸಿದ ಮೊಮ್ಮಗಳು; ಖುಷಿಯಿಂದ ಕಣ್ಣೀರಿಟ್ಟ ಅಜ್ಜಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − eleven =
Remember me
