ಚಂಡೀಗಢ:ಸಹೋದರನಿಗೆ ಕಷ್ಟ ಕಾಲದಲ್ಲಿ ಹಣ ನೀಡಿ ಸಹಾಯ ಮಾಡಿದ ಮಹಿಳೆಯೊಬ್ಬಳು, ಆ ಹಣವನ್ನು ಆತನಿಂದ ವಾಪಾಸು ಕೇಳಿದ್ದಕ್ಕೆ ಆತ ವಿಷವನ್ನೇ ಕೊಟ್ಟು ಕಳುಹಿಸಿರುವ ಘಟನೆ ಪಂಜಾಬ್​ನ ಗುರುದಾಸ್​ಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಮನೆ ಪಾಠ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ, ಬಾಲಕಿ ಗರ್ಭಿಣಿ
ಭಾರತಿ ಶರ್ಮಾ ಹೆಸರಿನ ಮಹಿಳೆ ಸಹೋದರ ಪ್ರದೀಪ್​ ಶರ್ಮಾನಿಗೆ ಹಣ ನೀಡಿದ್ದಳು. ಇತ್ತೀಚೆಗೆ ಆ ಹಣವನ್ನು ವಾಪಾಸು ಕೊಡುವಂತೆ ಆಕೆ ಕೇಳಿದ್ದಾಳೆ. ಆದರೆ ಅದಕ್ಕೆ ಒಪ್ಪದ ಪ್ರದೀಪ್​, ಹಣದ ಬದಲಾಗಿ ವಿಷವನ್ನು ಭಾರತಿಯ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಒಂದು ವೇಳೆ ನೀನು ವಿಷ ಕುಡಿದು ಸಾಯದಿದ್ದರೆ ನಾನೇ ಬಂದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸಹೋದರನಿಂದಾಗಿ ಮೋಸ ಹೋದ ಭಾರತಿ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ನ್ಯಾಯ ಕೊಡಿಸಿ ಎಂದು ವಿಡಿಯೋ ಹರಿಬಿಟ್ಟಿದ್ದಾಳೆ. ನಂತರ ಸಹೋದರ ಕಳುಹಿಸಿಕೊಟ್ಟಿದ್ದ ವಿಷವನ್ನು ಗಂಡನಿಗೆ ಮತ್ತು 16 ವರ್ಷದ ಮಗಳಿಗೆ ಕುಡಿಸಿ, ತಾನೂ ಕುಡಿದು ಉಸಿರು ಬಿಟ್ಟಿದ್ದಾಳೆ.
ಇದನ್ನೂ ಓದಿ:ಸೈನಿಕರದ್ದೇ ಅಶ್ಲೀಲ ಚಿತ್ರ ಚಿತ್ರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​!
ನಗರದಲ್ಲಿ ಆದ ಪ್ರಕರಣದ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ಆಗ ನಡೆದ ಘಟನೆಯನ್ನು ಭಾರತಿಯ ಮಗ ಕುನಾಲ್​ ಶರ್ಮಾ ಪೊಲೀಸರಿಗೆ ವಿವರಿಸಿದ್ದಾನೆ. ಇದೀಗ ಪ್ರದೀಪ್​ ಸೇರಿ 10 ಜನರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುನಾಲ್​ ಹೇಳಿರುವ ಕಥೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಪೊಲೀಸ್​ ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್​)
2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
