ಬೋಲ್​ಪುರ:ಬಾಂಗ್ಲಾದೇಶೀಯರ ಅಕ್ರಮ ವಲಸೆ ಮತ್ತು ಕಾಟ, ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ ಮುಂತಾದವುಗಳಿಂದ ಬೇಸತ್ತಿರುವ ಬಂಗಾಳ ಬದಲಾವಣೆಯನ್ನು ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ಅವರು ಭಾನುವಾರ ಭಿರ್​ಬೂಮ್​ ಜಿಲ್ಲೆಯ ಬೋಲ್​ಪುರದಲ್ಲಿ ರೋಡ್​ ಷೋ ಒಂದರಲ್ಲಿ ಭಾಗವಹಿಸಿ ಮಾತನಾಡಿದರು.
ಪಶ್ಚಿಮ ಬಂಗಾಳಕ್ಕೆ ಸೋನರ್ ಬಾಂಗ್ಲಾ ಎಂಬ ಹೆಸರೊಂದಿದೆ. ಬಂಗಾಳದ ಹಳೆಯ ವೈಭವವನ್ನು ಮತ್ತೆ ಒದಗಿಸುವ ಕೆಲಸವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಡಲಿದೆ. ನಾನು ಅನೇಕ ರೋಡ್​ ಷೋಗಳಲ್ಲಿ ಭಾಗವಹಿಸಿದ್ದೇನೆ. ಆಯೋಜಿಸಿದ್ದೇನೆ. ಆದರೆ, ಇಂಥ ರೋಡ್​ ಷೋವನ್ನು ನೋಡಿರಲಿಲ್ಲ. ಇದು ಮಮತಾ ಬ್ಯಾನರ್ಜಿ ಅವರ ಸರ್ಕಾರದ ವಿರುದ್ಧದ ಆಕ್ರೋಶವಾಗಿದ್ದು, ರೋಡ್​ ಷೋ ಮೂಲಕ ಅದು ವ್ಯಕ್ತವಾಗುತ್ತಿದೆ. ಇಲ್ಲಿ ಸೇರಿರುವ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಕೂಡ ಹೌದು ಎಂದು ಷಾ ವ್ಯಾಖ್ಯಾನಿಸಿದರು.
ಇದನ್ನೂ ಓದಿ:ರೈತರ ಹೋರಾಟಕ್ಕೆ ವಿದೇಶಗಳಿಂದ ಬರುತ್ತಿದೆ ಹಣ! ಫೋರೆಕ್ಸ್​ ಇಲಾಖೆಯಿಂದ ಬಂತು ನೋಟಿಸ್​!
ಕವಿ ರವೀಂದ್ರನಾಥ ಟಾಗೋರ್ ಅವರೊಂದಿಗೆ ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ನಂಟು ಹೊಂದಿರುವ ಬೋಲ್​ಪುರದಲ್ಲಿ ರೋಡ್ ಷೋ ನಡೆಸುವ ಮುನ್ನ ಟಾಗೋರ್ ಅವರಿಗೆ ಅಮಿತ್ ಷಾ ಪುಷ್ಪನಮನ ಸಲ್ಲಿಸಿದರು. ಬೋಲ್​ಪುರದ ಡಾಕ್​ಬಂಗ್ಲೋ ಗ್ರೌಂಡ್​ನಿಂದ ಅಪರಾಹ್ನ 3.10ಕ್ಕೆ ಶುರುವಾದ ರೋಡ್ ಷೋ ಚೌರಾಸ್ತಾ ತನಕವೂ ಮುಂದುವರಿಯಿತು. ತೆರೆದ ಲಾರಿಯ ಮೇಲೆ ಅಮಿತ್ ಷಾ ಅವರೊಂದಿಗೆ ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್​ ಕೂಡ ಜತೆಗಿದ್ದರು. ಬೆಂಬಲಿಗರು ಜೈಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್​, ಅಮಿತ್ ಷಾ ಜಿಂದಾಬಾದ್ ಘೋಷಣೆ ಕೂಗಿದರು. (ಏಜೆನ್ಸೀಸ್)
West Bengal: Union Home Minister Amit Shah holds roadshow in Bolpur, Birbhum district. The roadshow has started at Hanuman Mandir Stadium Road and will culminate at Bolpur circle.pic.twitter.com/kBwekZfnKX
— ANI (@ANI)December 20, 2020

ಮೂರು ತಿಂಗಳಲ್ಲಿ 25,000 ಕೋಟಿ ರೂಪಾಯಿ ಸಂಗ್ರಹಿಸಲಿವೆ ಸಾರ್ವಜನಿಕ ಬ್ಯಾಂಕುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
