ರಾಜಸ್ಥಾನ:ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ಬುಧವಾರ ‘ಪತ್ತರ್‌ ಮರ್‌ ಹೋಲಿ’ ಆಡುತ್ತಿದ್ದಾಗ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ. ‘ಪತ್ತರ್ ಕಿ ಹೋಲಿ’ ಎಂದರೆ ಈ ಭಾಗದಲ್ಲಿ ಹಬ್ಬವನ್ನು ಆಚರಿಸುವ ಸಾಂಪ್ರದಾಯಿಕ ವಿಧಾನವಾಗಿದೆ.
ವಿಚಿತ್ರ ನಂಬಿಕೆ:ಹೋಳಿ ಆಡುವಾಗ ರಕ್ತ ಚೆಲ್ಲಿದರೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ವರ್ಷಪೂರ್ತಿ ಜನರು ನೆಮ್ಮದಿಯಿಂದ ಇರಬಹುದು ಎಂಬುದು ಗ್ರಾಮದ ಜನರ ನಂಬಿಕೆ. ದೇಶದಾದ್ಯಂತ ಜನರು ಇಂದು ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಇವರು ಮಾತ್ರ ಕಲ್ಲು ಹೊಡೆದು ಆಚರಿಸುತ್ತಾರೆ.
ಬುಧವಾರ, ಡುಂಗರ್‌ಪುರದ ಭಿಲುಡಾ ಗ್ರಾಮದಲ್ಲಿ ನೂರಾರು ಜನರು ಜಮಾಯಿಸಿ ಕಲ್ಲುಗಳನ್ನು ಬಳಸಿ ಹೋಳಿ ಆಡಲು ಪ್ರಾರಂಭಿಸಿದರು. ಕಲ್ಲುಗಳನ್ನು ತೆಗೆದುಕೊಂಡು ಪರಸ್ಪರ ಹೊಡೆದ ಎರಡು ಗುಂಪುಗಳು ಊರಿನ ನೆಮ್ಮದಿಗಾಗಿ ಹೋಳಿ ಆಡಿದ್ದಾರೆ.ಈ ಘಟನೆಯಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಭಿಲುಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕರ ತಲೆ, ಕೈ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twenty =
Remember me
