ಅಹಮದಾಬಾದ್​:ಜನರ ಗುಂಪೊಂದು ವಜ್ರಕ್ಕಾಗಿ ರಸ್ತೆಯಲ್ಲೆಲ್ಲ ಹುಡುಕಾಟ ನಡೆಸಿದ ಆಸಕ್ತಿಕರ ಘಟನೆ ಗುಜರಾತಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಗುಜರಾತಿನ ಸೂರತ್ ಜಿಲ್ಲೆಯ ವಾರಚ್ಚ ಏರಿಯಾದಲ್ಲಿ ಸೆ. 24ರಂದು ಈ ಘಟನೆ ನಡೆದಿದೆ. ವಜ್ರಗಳ ಖರೀದಿ ಮತ್ತು ಮಾರಾಟಕ್ಕೆ ಈ ಏರಿಯಾ ತುಂಬಾ ಪ್ರಸಿದ್ಧಿ ಪಡೆದಿದೆ. ಇದನ್ನು ವಜ್ರಗಳ ಮಿನಿ ಬಜಾರ್​ ಎಂದೇ ಸ್ಥಳೀಯವಾಗಿ ಕರೆಯಲಾಗುತ್ತದೆ. ವ್ಯಾಪಾರಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೆಟ್ ಅನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದಾರೆ ಎಂಬ ಸುದ್ದಿ ಆ ಪ್ರದೇಶದಲ್ಲಿ ಹರಿದಾಡಿದೆ.
ಇದನ್ನೂ ಓದಿ:ವಾಟ್ಸಾಪ್ ಸೆಕ್ಯೂರಿಟಿಗಾಗಿ ಬರಲಿದೆ ಪಾಸ್‌ ಕೀ; ಈ ಮೂಲಕ ಬಳಕೆದಾರರಿಗೆ ಮತ್ತಷ್ಟು ಸೇಫ್​​​ ಆಗಲಿದೆ
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರ ರಸ್ತೆಯಲ್ಲಿ ಚೆಲ್ಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಜನರು ವಜ್ರಗಳ ಬೇಟೆಯನ್ನು ಆರಂಭಿಸಿದರು. ವಾಹನಗಳು ಹೋಗಲು ಅವಕಾಶ ನೀಡದೆ ರಸ್ತೆಯ ಮಧ್ಯೆಯೇ ವಜ್ರಗಳನ್ನು ಹುಡುಕಾಡುವಲ್ಲಿ ನಿರತರಾದರು. ಪರಿಣಾಮ ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಸಹ ಉಂಟಾಯಿತು.
ಕೆಲವರು ಮಾರುಕಟ್ಟೆಯ ರಸ್ತೆಯಿಂದಲೂ ಧೂಳನ್ನು ಸಂಗ್ರಹಿಸಿ ವಜ್ರಗಳನ್ನು ಹುಡುಕಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲವರು ಕೆಲವು ವಜ್ರಗಳನ್ನು ಹುಡುಕುವಲ್ಲಿ ಯಶಸ್ವಿಯಾದರು ಕೂಡ ಅವು ಅಮೆರಿಕನ್ ವಜ್ರಗಳಾಗಿದ್ದರಿಂದ ನಿರಾಸೆ ಅನುಭವಿಸುವಂತಾಯಿತು.
#સુરતવરાછા મિનિબજાર રાજહંસ ટાવર પાસે હીરા ઢોળાયાની વાત થતા હીરા શોધવા લોકોની ભીડ થઈ.પ્રાથમિક સૂત્રો દ્વારા જાણવા મળેલ છે કે આ હીરા CVD અથવા અમેરિકન ડાયમંડ છે..#Diamond#Surat#Gujaratpic.twitter.com/WdQwbBSarl
— 𝑲𝒂𝒍𝒑𝒆𝒔𝒉 𝑩 𝑷𝒓𝒂𝒋𝒂𝒑𝒂𝒕𝒊 🇮🇳🚩 (@KalpeshPraj80)September 24, 2023

ವಜ್ರಗಳಿಗಾಗಿ ಬೀದಿಯಲ್ಲಿ ಶೋಧ ನಡೆಸಿದವರಲ್ಲಿ ಒಬ್ಬರಾದ ಅರವಿಂದ್ ಪನ್ಸೇರಿಯಾ ಎಂಬುವರು ಮಾಧ್ಯಮಗಳ ಜತೆ ಮಾತನಾಡಿದ್ದು, ತಾವು ಸಂಗ್ರಹಿಸಿದ ವಜ್ರ ನಕಲಿ ವಜ್ರವಾಗಿದೆ. ಇದು ಅಮೆರಿಕನ್ ವಜ್ರವಾಗಿದೆ. ಇದನ್ನು ಆಭರಣ ಅಥವಾ ಸೀರೆಗಳ ವಿನ್ಯಾಸದಲ್ಲಿ ಬಳಸಲಾಗುತ್ತದೆ. ಇದು ಬೆಲೆ ಬಾಳುವ ವಜ್ರವಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ

ಪೊಲೀಸರಿಂದ ಲಂಚಕ್ಕೆ ಬೇಡಿಕೆ! ಜನತಾ ದರ್ಶನದಲ್ಲಿ ಕಾಂಗ್ರೆಸ್ ಶಾಸಕರಿಂದಲೇ ಅಳಲು

ಕುಡಿಯಲು ಕಾವೇರಿ ನೀರು ಕೊಡಿ ಎಂದರೆ ವಿಸ್ಕಿ, ಬ್ರಾಂಡಿ ಕೊಡುತ್ತೇವೆ ಎನ್ನುತ್ತಾರೆ; ಅಶ್ವತ್ಥ ನಾರಾಯಣ

Sign in to your account
Please enter an answer in digits:eighteen − twelve =
Remember me
