ಬೆಂಗಳೂರು:ಒಂದೇ ವಾರದೊಳಗೆ ಅದೆಷ್ಟೋ ಮಂದಿ ವಾಟ್ಸ್​ಆ್ಯಪ್​ಗೆ ಬೈಯುವ ಜತೆಗೆ ಬಾಯ್​ ಹೇಳಲೂ ಆರಂಭಿಸಿದ್ದಾರೆ. ಮಾತ್ರವಲ್ಲ, ಟೆಲಿಗ್ರಾಮ್​ಗೆ ಹಾಯ್​ ಹೇಳಲು ಹಾಗೂ ಸಿಗ್ನಲ್ ಕೊಡಲು ಮುಂದಾಗಿದ್ದಾರೆ. ಅರ್ಥಾತ್ ವಾಟ್ಸ್ಆ್ಯಪ್​ ಬದಲಿಗೆ ಹಲವರು ಟೆಲಿಗ್ರಾಮ್​ ಡೌನ್​ಲೋಡ್ ಮಾಡಿಕೊಂಡು ಬಳಸಲಾರಂಭಿಸಿದ್ದರೆ ಇನ್ನು ಕೆಲವರು ‘ಸಿಗ್ನಲ್​’ ಆ್ಯಪ್​ ಬಳಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟಕ್ಕೂ ಹೀಗಾಗಿದ್ದೇಕೆ ಎಂದರೆ, ಇದು ವಾಟ್ಸ್​ಆ್ಯಪ್​ನ ಸ್ವಯಂಕೃತ ಅಪರಾಧ. ಅಂದರೆ, ಇತ್ತೀಚೆಗಷ್ಟೇ ವಾಟ್ಸ್​ಆ್ಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದು, ಇದರ ಬಗ್ಗೆ ಅಸಮಾಧಾನಗೊಂಡಿರುವ ಬಳಕೆದಾರರು ಈ ಬದಲಾವಣೆಗೆ ಮುಂದಾಗಿದ್ದಾರೆ. ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ಪಾಲಿಸಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರಲಿದೆ ಎಂಬ ಹಿನ್ನೆಲೆಯಲ್ಲಿ ಹಾಗೂ ವೈಯಕ್ತಿಕ ಮಾಹಿತಿಗಳು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಈಗಾಗಲೇ ಹಲವಾರು ಬಳಕೆದಾರರು ವಾಟ್ಸ್​ಆ್ಯಪ್​ನಿಂದ ವಿಮುಖರಾಗಿ ಟೆಲಿಗ್ರಾಮ್​ನತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!
ಫೇಸ್​ಬುಕ್ ಮಾಲೀಕತ್ವದಲ್ಲಿರುವ ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ಪಾಲಿಸಿ ಫೆಬ್ರವರಿ 8ರಿಂದ ಅನ್ವಯಿಸಲಿದೆ. ಹೊಸ ಪಾಲಿಸಿಯಿಂದ ಫೇಸ್​ಬುಕ್​ ಸಂಸ್ಥೆಗೆ ವಾಟ್ಸ್​ಆ್ಯಪ್​ ಡಾಟಾ ಮೇಲೆ ಕಣ್ಣು ಹಾಕಲು ಅನುಕೂಲವಾಗಲಿದೆ ಎನ್ನಲಾಗಿದೆ. ಅಲ್ಲದೆ ಫೇಸ್​ಬುಕ್​ ಈ ಹಿಂದೆಯೇ ಡೇಟಾ ಕಳವು ಆರೋಪ ಎದುರಿಸಿರುವುದರಿಂದ ಈಗ ಬಳಕೆದಾರರಲ್ಲಿ ಈ ಅಭದ್ರತೆ ಕಾಡಲಾರಂಭಿಸಿದೆ. ಇನ್ನು ಫೆಬ್ರವರಿ 8ರ ಬಳಿಕ ವಾಟ್ಸ್​ಆ್ಯಪ್​ ಬಳಸಬೇಕಿದ್ದರೆ ಬಳಕೆದಾರರು ಈಗಿನ ಹೊಸ ಪ್ರೈವೆಸಿ ಪಾಲಿಸಿಯನ್ನು ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯ.
#WhatsAppPrivacyPolicy#Telegram@WhatsAppTime for telegram to rise.. All hail telegram !#quitwhatsapppic.twitter.com/W73GYYnXwB
— Kishan Rathod🇮🇳 (@kisan_rathod)January 9, 2021

#WhatsAppPrivacyPolicyMake Sure You Read and then accept..pic.twitter.com/KpROfmvfFH
— Sanatani Pooja (@SanataniPooja)January 9, 2021

Signal Vs WhatsApp#Signal#WhatsAppPrivacyPolicypic.twitter.com/p3cfnXGA2B
— Abhijith (@abhijith2109)January 9, 2021

ಹೀಗಾಗಿ ಬಹಳಷ್ಟು ಮಂದಿ ವಾಟ್ಸ್​ಆ್ಯಪ್ ಡಿಲೀಟ್ ಮಾಡಿ ಟೆಲಿಗ್ರಾಮ್​ ಹಾಗೂ ಸಿಗ್ನಲ್ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಮಾತ್ರವಲ್ಲ ವಾಟ್ಸ್​ಆ್ಯಪ್​ ಹೊಸ ಪ್ರೈವೆಸಿ ಪಾಲಿಸಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನು ಕೆಲವರು ವಾಟ್ಸ್​ಆ್ಯಪ್​ಗಿಂತಲೂ ಟೆಲಿಗ್ರಾಮ್​ ಹೇಗೆ ವಿಶೇಷ ಹಾಗೂ ಉತ್ತಮ ಮತ್ತು ಅದರಲ್ಲಿರುವ ಫೀಚರ್ಸ್ ತಾಳೆ ಹಾಕಿ ಟೆಲಿಗ್ರಾಮ್​ ಬಳಸುವುದು ಉತ್ತಮ ಎಂದು ಸಾರಲಾರಂಭಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

ಮಗಳ ಅಕ್ರಮ ಸಂಬಂಧವನ್ನು ಒಪ್ಪದ ತಂದೆಯ ಸಜೀವ ದಹನ! ಹೆಂಡತಿ ಮಕ್ಕಳಿಂದಲೇ ನಡೆಯಿತು ದುಷ್ಕೃತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × four =
Remember me
