ನವದೆಹಲಿ: ಕಾಲೇಜು ಮುಗಿಸಿ, ಆದಷ್ಟು ಬೇಗ ಕೆಲಸ ಗಿಟ್ಟಿಸಿಕೊಳ್ಳಬೇಕು, ಒಳ್ಳೆಯ ಸ್ಯಾಲರಿ ಸಿಗಬೇಕು ಎಂಬುದು ಎಲ್ಲರ ಆಸೆ. ಆದರೆ ವಾಸ್ತವ ಜಗತ್ತಿಗೆ ಕಾಲಿಟ್ಟಾಗಲೇ ಅವರಿಗೆ ಸಂಬಳದ ವಾಸ್ತವತೆ ಗೊತ್ತಾಗುತ್ತದೆ. ಆದರೆ ಇಲ್ಲೊಬ್ಬ ಮೊಮೊಸ್​ ಅಂಗಡಿ ಮಾಲೀಕ ಸಹಾಯಕನ ಅಗತ್ಯ ಇದೆ ಕೈತುಂಬಾ ಸಂಬಳ ಕೊಡುವುದಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಹೆಲ್ಪರ್ ಪ್ಯಾಕೇಜ್ ಗೊತ್ತಾದ್ರೆ ನೀವೂ ಬೆಚ್ಚಿ ಬೀಳುತ್ತೀರಿ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಖಾಲಿ ಹುದ್ದೆಯನ್ನು ಬರೆದಿರುವ ಪೋಸ್ಟರ್ ಅನ್ನು ನೋಡಲಾಗಿದೆ. ಈ ಪೋಸ್ಟರ್‌ನಲ್ಲಿ, ‘ಸಹಾಯಕನ ಅಗತ್ಯವಿದೆ. ವೇತನ 25 ಸಾವಿರ ರೂ. ಈ ಫೋಟೋವನ್ನು ‘ಈ ಸ್ಥಳೀಯ ಮೊಮೊ ಅಂಗಡಿಯು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳು ನೀಡುವುದಕ್ಕಿಂತ ಉತ್ತಮ ಪ್ಯಾಕೇಜ್‌ಗಳನ್ನು ನೀಡುತ್ತಿದೆ’ ಎಂಬ ಶೀರ್ಷಿಕೆಯಲ್ಲಿ ಸೋಶಿಯಲ್​​ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
Damn this local momo shop is offering a better package than the average college in India these dayspic.twitter.com/ectNX0mc18
— Amrita Singh (@puttuboy25)April 8, 2024

ಪೋಸ್ಟ್ ನೋಡಿದ ನಂತರ, ಬಳಕೆದಾರರು, ನೀವು ಪ್ರತಿದಿನ ತಿನ್ನಲು ಉಚಿತ ಮೊಮೊಸ್​​ಗಳನ್ನು ಸಹ ಪಡೆಯುತ್ತೀರಿ. ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕಳುಹಿಸಿ. TCS ಗಿಂತ ಉತ್ತಮವಾಗಿ ನೀಡುತ್ತಿದ್ದಾರೆ. ಇಲ್ಲಿ ವಾಕ್-ಇನ್ ಸಂದರ್ಶನವಿದೆಯೇ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − one =
Remember me
