ಲಖನೌ:ಕರೊನಾ ಸಂಪೂರ್ಣವಾಗಿ ಹೋಗಬೇಕೆಂದರೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅತ್ಯವಶ್ಯಕ. ಆದರೆ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂಜರಿಕೆ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಹೊಸ ಉಪಾಯವೊಂದನ್ನು ಮಾಡಲಾಗಿದೆ. ಜಿಲ್ಲಾಡಳಿತವೊಂದು ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಲಭ್ಯವಿರುವುದಿಲ್ಲ ಎಂದು ಹೇಳಿಬಿಟ್ಟಿದೆ.
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಂತದ್ದೊಂದು ವಿಶೇಷ ಪ್ಲಾನ್​ ಮಾಡಲಾಗಿದೆ. 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡಿರುವ ದಾಖಲೆ ತೋರಿಸಿದರೆ ಮಾತ್ರವೇ ಮದ್ಯ ನೀಡಿ ಎಂದು ಎಲ್ಲ ಮದ್ಯದಂಗಡಿ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ನೀಡಬೇಡಿ ಎಂದು ತಿಳಿಸಲಾಗಿದೆ.
ಈ ನಿರ್ದೇಶನ ನೀಡಿದ ಬೆನ್ನಲ್ಲೆ ಜಿಲ್ಲಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಹೆಮ್​ ಸಿಂಗ್​ ಮದ್ಯದಂಗಡಿಗಳ ಮುಂದೆ ಕ್ಯೂ ನಿಂತ ಜನರ ಬಳಿಯೂ ಬಂದಿದ್ದು, 45 ವರ್ಷ ಮೇಲ್ಪಟ್ಟು ಇನ್ನೂ ಲಸಿಕೆ ಪಡೆಯದವರನ್ನು ಅಲ್ಲಿಂದ ವಾಪಾಸು ಕಳಿಸಿದ್ದಾರೆ. ಎಲ್ಲ ಮದ್ಯದಂಗಡಿಗಳು ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುತ್ತಿವೆಯೇ ಎಂದು ಆಗಾಗ ಪರಿಶೀಳನೆ ಮಾಡುವುದಾಗಿಯೂ ತಿಳಿಸಿದ್ದಾರೆ. (ಏಜೆನ್ಸೀಸ್​)
ಹೆಣ್ಣು ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿದ್ದ ಬಾಡಿ ಬಿಲ್ಡರ್​ಗೆ ಈಗ ಗಂಡು ಡಾಲ್​ ಬೇಕಂತೆ!

ಅಪ್ಪ ಅಮ್ಮನಿಗೆ ಬೈದನೆಂದು ತಮ್ಮನನ್ನೇ ಕೊಲೆ ಮಾಡಿದ್ದ ಅಣ್ಣ ಜೈಲು ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
