ಮುಂಬೈ:ಲಡಾಖ್ ಬಿಕ್ಕಟ್ಟಿನ ನಂತರದಲ್ಲಿ ದೇಶಾದ್ಯಂತ ಚೀನಾ ವಿರೋಧಿ ಮನೋಭಾವ ಹೆಚ್ಚಾಗಿದೆ. ಜನರು ಚೀನಾದ ವಸ್ತುಗಳನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಆದರೆ, ಇಂಥ ಒಂದು ವಿದ್ಯಮಾನ ಉಂಟಾಗುವ ಮುನ್ನವೇ ಚೀನಾದ ಕೇಂದ್ರೀಯ ಬ್ಯಾಂಕ್​ ಪೀಪಲ್ಸ್​ ಬ್ಯಾಂಕ್​ ಆಫ್​ ಚೀನಾ (ಪಿಬಿಒಸಿ) ಭಾರತೀಯ ಕಂಪನಿಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ ಎಂಬುದು ಗಮನಾರ್ಹವಾಗಿದೆ.
ಭಾರತದ ಪ್ರಮುಖ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಪಿಬಿಒಸಿ ಶೇ.1 ಹೂಡಿಕೆ ಹೊಂದಿದೆ. ಇದೇ ರೀತಿ ಇನ್ನೂ ಹಲವು ಸಂಸ್ಥೆಗಳಲ್ಲಿ ಅದರ ಹೂಡಿಕೆ ಇದೆ. ಆದರೆ, ಹೂಡಿಕೆಗಳು ಶೇ.1 ಅಥವಾ ಅದಕ್ಕಿಂತ ಕಡಿಮೆ ಇರುವುದರಿಂದ ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಗೋವಾ ವೈದ್ಯ ಬೀಳ್ಕೊಡುವ ರೀತಿ ಇದು!
ಪಿರಾಮಲ್​ ಎಂಟರ್​ಪ್ರೈಸಸ್​ನಲ್ಲಿ ಶೇ.0.43 ಹೂಡಿಕೆ ಹೊಂದಿರುವ ಪಿಬಿಒಸಿ, ಅಂಬುಜಾ ಸಿಮೆಂಟ್​ನಲ್ಲಿ ಶೇ.32 ಹೂಡಿಕೆ ಹೊಂದಿದೆ. ಕೇಂದ್ರ ಸರ್ಕಾರ ವಿದೇಶಿ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದ ನಂತರದಲ್ಲಿ ಈ ಹೂಡಿಕೆಗಳ ಮಾಹಿತಿ ಬಹಿರಂಗಗೊಂಡಿದೆ.
ಎಚ್​ಡಿಎಫ್​ಸಿಯಲ್ಲಿ ಪಿಬಿಒಸಿಯ 3,100 ಕೋಟಿ ರೂ. ಹೂಡಿಕೆ ಇದ್ದರೆ, ಪಿರಾಮಲ್​ ಎಂಟರ್​ಪ್ರೈಸಸ್​ನಲ್ಲಿ 137 ಕೋಟಿ ರೂ. ಹಾಗೂ ಅಂಬುಜಾ ಸಿಮೆಂಟ್​ನಲ್ಲಿ 122 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಭಾರತದಲ್ಲಿ ತನ್ನ ಶಾಖೆಯನ್ನು ಆರಂಭಿಸಲು ಪಿಬಿಒಸಿಗೆ ಅನುಮತಿ ನೀಡಿತ್ತು. ಈ ಬ್ಯಾಂಕಿನ ಮೂಲಕ ಚೀನಾದ ಹಲವು ಕಂಪನಿಗಳು ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಟ್ಟಿರುವ ಕಂಪನಿಗಳಲ್ಲಿ ಹಾಗೂ ಭಾರತೀಯ ಆರ್ಥಿಕತೆಯಲ್ಲಿ ವ್ಯೋಹಾತ್ಮಕವಾಗಿ ಮಹತ್ವ ಪಡೆದುಕೊಂಡಿರುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಒಲವು ತೋರಿದ್ದವು ಎನ್ನಲಾಗಿದೆ.
ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
