ಶಿಮ್ಲಾ:ಹಿಮಾಚಲ ಪ್ರದೇಶ ವಿಧಾನಸಭೆಗೆ ಶನಿವಾರ ನಡೆದ ಮತದಾನದಲ್ಲಿ ಶೇ. 65.92ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ವರಿದಿಯನ್ನು ಉಲ್ಲೇಖಿಸಿ ಚನಾವಣಾ ಆಯೋಗ ತಿಳಿಸಿದೆ. ಬಿಜೆಪಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ತವಕದಲ್ಲಿದ್ದರೆ, ಕಾಂಗ್ರೆಸ್​ಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಡಿಸೆಂಬರ್ 8ರಂದು ಗುಜರಾತ್ ವಿಧಾನಸಭಾ ಚುನವಣಾ ಫಲಿತಾಂಶದ ಜೊತೆಗೆ ಹಿಮಾಚಲ ಪ್ರದೇಶದ ಫಲಿತಾಂಶಗಳು ಪ್ರಕಟಗೊಳ್ಳಲಿವೆ ಎಂದು ತಿಳಿಸಿದೆ.
ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತದಾನ ನಿಧಾನಗತಿಯಲ್ಲಿ ಆರಂಭವಾಗಿ ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ. 5, 11ರ ಹೊತ್ತಿಗೆ 19.98, 1ರ ವೇಳೆಗೆ 37.19 ಹಾಗೂ 3 ಗಂಟೆ ಹೊತ್ತಿಗೆ ಶೇ. 55.65 ಮತ್ತು ಸಂಜೆ 5ಕ್ಕೆ ಶೇ. 65.92ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ. ಸಿಮೋರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 72.35ರಷ್ಟು ಮತದಾನವಾಗಿದೆ. ರಾಜ್ಯದ 68 ವಿಧಾನಸಭಾ ಕ್ಷೇತ್ರಗಳಲ್ಲಿ 412 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ರಾಜ್ಯದ 68 ವಿಧಾನಸಭಾ ಕ್ಷೇತ್ರಗಳಿಗೆ: ಮಂಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಪತ್ನಿ ಹಾಗೂ ಪುತ್ರಿಯರ ಜತೆ, ರಾಂಪುರದಲ್ಲಿ ಹಿಮಾಚಲ ಕಾಂಗ್ರೆಸ್ ಮುಖ್ಯಸ್ಥ ಪ್ರತಿಭಾ ಸಿಂಗ್, ಪುತ್ರ ವಿಕ್ರಮಾದಿತ್ಯ ಸಿಂಗ್ ಜತೆ ಮತ ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ದುಮಾಲ್, ಪುತ್ರ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಮೀರ್​ಪುರದಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಶಿಮ್ಲಾದಲ್ಲಿ ಹಕ್ಕು ಚಲಾಯಿಸಿದರು.
15,256 ಅಡಿ ಎತ್ತರದಲ್ಲಿ ಮತದಾನ ಕೇಂದ್ರ: ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ತಾಶಿಗ್ಯಾಂಗ್ ಪ್ರದೇಶದಲ್ಲಿ 15,256 ಅಡಿ ಎತ್ತರದಲ್ಲಿ ನಿರ್ವಿುಸಿದ್ದ ಮತದಾನ ಕೇಂದ್ರ ವಿಶ್ವದ ಅತಿ ಎತ್ತರ ಪ್ರದೇಶದ ಮತದಾನ ಕೇಂದ್ರ ಎನಿಸಿಕೊಂಡಿದೆ. ಅಲ್ಲಿ ಕೇವಲ 52 ಮತದಾರರಿದ್ದು, ಎಲ್ಲರೂ ಹಕ್ಕನ್ನು ಚಲಾಯಿಸಿದರು. ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗೆ ಸುಲಭವಾಗಿ ಮತದಾನ ಮಾಡಲು ಸಾಧ್ಯವಾಗುವಂತೆ ಮಾದರಿ ಮತದಾನ ಕೇಂದ್ರವಾಗಿ ಇದನ್ನು ರೂಪಿಸಲಾಗಿತ್ತು. ಲಾಹೌಲ್-ಸ್ಪಿತಿ ಜಿಲ್ಲೆ 92 ಮತಗಟ್ಟೆಗಳನ್ನು ಹೊಂದಿತ್ತು.
ಶತಾಯುಷಿಗಳಿಂದ ಮತದಾನ: ಚಂಬಾ ಜಿಲ್ಲೆಯ ಚುರ್ಹಾದಲ್ಲಿ ನಾರೋ ದೇವಿ (105) ಮತ್ತು ಶಿಮ್ಲಾದಲ್ಲಿ ಸರ್ದಾರ್ ಪ್ಯಾರ್ ಸಿಂಗ್ (103) ಮತಚಲಾವಣೆ ಮಾಡಿದರು. ಮಂಡಿ ಜಿಲ್ಲೆಯ ಕಲ್ಪದ ನಿವಾಸಿ ಶ್ಯಾಂ ಶರಣ ನೇಗಿ (106) ಕಳೆದ ವಾರ ನಿಧನರಾಗಿದ್ದು, ಅದಕ್ಕೂ ಕೆಲ ದಿನ ಮೊದಲು ಅಂಚೆ ಮೂಲಕ ಮತದಾನ ಮಾಡಿದ್ದರು. ಅವರು ದೇಶದ ಮೊದಲ ಚುನಾವಣೆಯಿಂದ ಈಗಿನ ಚುನಾವಣೆ ವರೆಗೆ ಎಲ್ಲದರಲ್ಲೂ ವೋಟ್ ಮಾಡಿದ್ದರು.
ಗುಜರಾತ್​ನಲ್ಲಿ ಅಧಿಕಾರಕ್ಕೆ ಬಂದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂಗೆ ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಮರು ನಾಮಕರಣ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ, ವಿಧವೆ ಮತ್ತು ವೃದ್ಧ ಮಹಿಳೆಗೆ ಮಾಸಿಕ -ಠಿ;2,000 ಸಹಾಯ ಧನ ನೀಡಲಾಗುವುದು. ಸರ್ಕಾರದಿಂದ 3,000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು ಮತ್ತು ರಾಜ್ಯದ ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು. -3 ಲಕ್ಷ ರೂ. ವರೆಗಿನ ಕೃಷಿ ಸಾಲ ಮನ್ನಾ, 300 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂಪಾಯಿಗಳ ನೆರವು ಮತ್ತು 500 ರೂಪಾಯಿಗೆ ಗೃಹೋಪಯೋಗಿ ಅನಿಲ ಸಿಲಿಂಡರ್​ಗಳನ್ನು ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
