ನವದೆಹಲಿ:ಭಾರತದಲ್ಲಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮದ ಭಾಗವಾಗಿ ಶುರು ಮಾಡಲಾದ ಟೆಲಿ-ಮಾನಸ್ ಟೋಲ್-ಫ್ರೀ ಸಂಖ್ಯೆಯು ದಿನಕ್ಕೆ ಸರಾಸರಿ ಅಂದರೆ 3,500ಕ್ಕೂ ಅಧಿಕ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ:ದೇವರ ದರ್ಶನಕ್ಕೆ ಬರುತ್ತಿದ್ದ ಪಾದಯಾತ್ರಿಗಳ ಮೇಲೆ ಹರಿದ ಲಾರಿ! ಓರ್ವ ಸ್ಥಳದಲ್ಲೇ ದುರ್ಮರಣ
ಸಚಿವಾಲಯದ ಪ್ರಕಾರ, ಸಹಾಯವಾಣಿಯು ಡಿಸೆಂಬರ್ 2022ರಲ್ಲಿ ಸುಮಾರು 12,000ರಿಂದ ಮೇ 2024ರಲ್ಲಿ 90,000ಕ್ಕೂ ಹೆಚ್ಚು ಕರೆ ಮಾಡುವವರ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಇದು ಫಾಲೋ-ಅಪ್‌ಗಾಗಿ ಕಾಲ್​-ಬ್ಯಾಕ್‌ಗಳನ್ನು ಸಹ ಸಂಯೋಜಿಸುತ್ತದೆ. ಟೆಲಿ-ಮಾನಸ್​​ ಎಂಬ ವಿಶೇಷ ಸಹಾಯವಾಣಿಯನ್ನು ಅಕ್ಟೋಬರ್​ 2022ರಂದು ದೇಶದ ನಾನಾ ಭಾಗಗಳಲ್ಲಿ ಚಾಲನೆಗೆ ಬರುವಂತೆ ಜಾರಿಗೊಳಿಸಲಾಯಿತು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 51 ಟೆಲಿ-ಮಾನಸ್ ಸಹಾಯವಾಣಿಗೆ ಅಂದಿನಿಂದ 10 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗಳು 14416 ಅಥವಾ 1-800-891-4416 ಇದೆ. ರಾಷ್ಟ್ರವ್ಯಾಪಿ ಮಾನಸಿಕ ಆರೋಗ್ಯ ಸೇವೆಯ ವಿತರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಆರೋಗ್ಯ ಇಲಾಖೆ, ಬಹು-ಭಾಷಾ ಬೆಂಬಲವನ್ನು ಸಹ ನೀಡಿದ್ದು, ಮಾನಸಿಕ ಆರೋಗ್ಯ ವೃತ್ತಿಪರರ ನಡುವೆ ಸಂವಹನವನ್ನು ಸುಲಭಗೊಳಿಸುವಲ್ಲಿ ಈ ಸಹಾಯವಾಣಿಯನ್ನು ಚಾಲನೆಗೆ ತಂದಿದೆ.
ಇದನ್ನೂ ಓದಿ:ಹಣ ವಶಪಡಿಸಿಕೊಂಡಿದ್ದ ಪ್ರಕರಣ ಇತ್ಯರ್ಥ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾಹಿತಿ
“ಈ ಸಹಾಯವಾಣಿಯು ಮಾನಸಿಕ ಆರೋಗ್ಯ ಉಪಕ್ರಮಗಳ ವಿಸ್ತರಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಪ್ರತಿಯೊಬ್ಬರು ಕೂಡ ಇದರ ಅಗತ್ಯವಿದ್ದರೆ, ಉಪಯೋಗಿಸಿಕೊಳ್ಳಬಹುದು. ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ರೂಪಿಸಿರುವ ಈ ಸಂಪನ್ಮೂಲ ಒಂದು ಮಹತ್ವದ ಮೈಲಿಗಲ್ಲು” ಎಂದು ಆರೋಗ್ಯ ಸಚಿವಾಲಯ ಹೇಳಿದೆ,(ಏಜೆನ್ಸೀಸ್).
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅವಮಾನ! ಮೊದಲು ಈ ದಡೂತಿ ದೇಹ ಇಳಿಸು… ಆಜಂ ಖಾನ್ ವಿರುದ್ಧ ನೆಟ್ಟಿಗರು ಕಿಡಿ

ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + thirteen =
Remember me
