ಚೆನ್ನೈ:ಬೈಕ್​ಗೆ ಪಟಾಕಿಯನ್ನು ಕಟ್ಟಿ ಯುವಕನೊಬ್ಬ ನಡುರಸ್ತೆಯಲ್ಲೇ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆ ತಮಿಳುನಾಡಿನ ತಿರುಚಿಯಲ್ಲಿದೆ.
ವಿಡಿಯೋವನ್ನು ನವೆಂಬರ್​ 9ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೆ ಲಕ್ಷಾಂತರ ವೀಕ್ಷಣೆಯನ್ನು ಕಂಡಿದ್ದು, ರಸ್ತೆಯಲ್ಲಿ ಸಾಹಸ ಪ್ರದರ್ಶಿಸಿ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕರು ಬೈಕ್‌ನ ಹೆಡ್‌ಲೈಟ್‌ಗೆ ಪಟಾಕಿಗಳನ್ನು ಕಟ್ಟುತ್ತಿರುವುದನ್ನು ತೋರಿಸುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. ಇದಾದ ಬಳಿಕ ಹೆಡ್‌ಲೈಟ್‌ಗೆ ಕಟ್ಟಿದ್ದ ಪಟಾಕಿಗಳನ್ನು ಸಿಡಿಸುವ ಮೂಲಕ ಯುವಕರು ಬೈಕ್‌ನಲ್ಲಿ ಸಾಹಸ ಪ್ರದರ್ಶಿಸುತ್ತಿರುವುದು ಕಂಡು ಬರುತ್ತದೆ.
எவனோ ஒருத்தன் ஆரம்பிச்சி வச்சான், இப்ப நிறைய பேரு இதே மாதிரி பைக்ல வெடி கட்டி வீடியோ போட ஆரம்பிச்சிட்டானுக.pic.twitter.com/cpofhXjV6W
— 𝗟 𝗼 𝗹 𝗹 𝘂 𝗯 𝗲 𝗲 (@Lollubee)November 12, 2023

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ವಿಡಿಯೋವನ್ನು ‘ಡೆವಿಲ್ ರೈಡರ್’ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪೇಜ್ ಅನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಯುವಕನ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಟೀಮ್​ ಇಂಡಿಯಾದ ಮಾರಕ ಬೌಲಿಂಗ್​ ದಾಳಿ ಹಿಂದಿರುವ ಮಾಂತ್ರಿಕ ಇವರೇ ನೋಡಿ…

ಕೆಲಸದಿಂದ ತೆಗದಿದ್ದಕ್ಕೆ ಬೆಂಗಳೂರು ಕಂಪನಿಯೊಂದಕ್ಕೆ ಬಾಂಬ್​ ಬೆದರಿಕೆ ಹಾಕಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fourteen =
Remember me
