ಕೊಚ್ಚಿ:ಓಡಿ ಬಂದು ಜಿಗಿದು ವಾಹನ(Vehicle)ಗಳ ಗಾಜು (Glass) ಒಡೆಯುವ ದೃಶ್ಯವನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಈ ರೀತಿ ಮಾಡಲು ಅಷ್ಟು ಸುಲಭವಲ್ಲ. ಅದಕ್ಕಾಗಿ ಡಬಲ್​ ಗುಂಡಿಗೆ ಬೇಕು. ಸ್ವಲ್ಪ ಎಡವಟ್ಟಾದರೂ ಪ್ರಾಣವೇ ಹೋಗಬಹುದು. ಇಲ್ಲೊಬ್ಬ ಯುವಕ (Youth) ತನ್ನ ಎದುರಿಗೆ ಬರುತ್ತಿದ್ದ ಬಸ್ (Bus)​ ಒಂದರ ಗಾಜನ್ನು ಓಡಿ ಬಂದು ಜಿಗಿದು ತಲೆಯಿಂದಲೇ ಪುಡಿ ಪುಡಿ ಮಾಡಿರುವ ಭಯಾನಕ ಘಟನೆ ಕೇರಳ (Kerala)ದ ಮಲಪ್ಪುರಂ ಜಿಲ್ಲೆಯ ಪೆರಿಂತಲಮನ್ನಾ ಪಟ್ಟಣದಲ್ಲಿ ನಡೆದಿದೆ.
ಅರೆ ಬೆತ್ತಲೆಯ ಸ್ಥಿತಿಯಲ್ಲಿದ್ದ ಯುವಕ ಓಡಿ ಬಂದು ಬಸ್​ನ ವಿಂಡ್​ಶೀಲ್ಡ್​ ಗಾಜನ್ನು ತಲೆಯಿಂದ ಪುಡಿ ಪುಡಿ ಮಾಡಿದ್ದಲ್ಲದೆ, ಬಸ್​ ಒಳಗೆ ಏರಿ ಡ್ರೈವರ್​ ಸೀಟ್​ ಮೇಲೆ ಕೆಲ ಕಾಲ ಕುಳಿತು ಪೀಡಿಸಿದ್ದಾರೆ. ಅಂದಹಾಗೆ ಪೆರಿಂತಲಮನ್ನಾದ ಅಂಗಡಿಪ್ಪುರಂನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್​ ಆಗಿದೆ.
ಈ ಘಟನೆ ನಿನ್ನೆ 5 ಗಂಟೆ ಸುಮಾರಿಗೆ ಜುಬಿಲಿ ಜಂಕ್ಷನ್​ ಬಳಿ ನಡೆದಿದೆ. ಬಸ್​ ಮಂಕಡಾ ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್​ ಎದುರಿಗೆ ಓಡಿ ಬಂದು, ಮೇಲಕ್ಕೆ ಜಿಗಿದು ತಲೆಯಿಂದ ಡಿಕ್ಕಿ ಹೊಡೆದು ವಿಂಡ್​ಶೀಲ್ಡ್​ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಬಸ್​ ಗುದ್ದಿದ ರಭಸಕ್ಕೆ ಯುವಕನು ಕೂಡ ಕೊಂಚ ದೂರ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡ್​ಗಳ ಕಾಲ ನೆಲದ ಮೇಲೆಯೇ ಬಿದ್ದಿದ್ದ ಯುವಕ, ಬಳಿಕ ಎದ್ದು ಬಂದು ಬಸ್​ ಏರಿದ್ದಾನೆ. ಡ್ರೈವರ್​ ಸೀಟ್​ ಮೇಲೆ ಕುಳಿತು ತನ್ನ ಎರಡೂ ಕಾಲುಗಳನ್ನು ಸ್ಟೀರಿಂಗ್​ ಮೇಲೆ ಇಟ್ಟು ಕೆಲಕಾಲ ಬಸ್​ನಲ್ಲಿದ್ದವರನ್ನು ಪೀಡಿಸಿದ್ದಾರೆ.
ಅಂದಹಾಗೆ ಯುವಕನನ್ನು ಮಾನಸಿಕ ಅಸ್ವಸ್ಥ (Mentally unstable) ಎಂದು ನಂಬಲಾಗಿದೆ. ಈ ಮುಂಚೆ ಚಿಕಿತ್ಸೆ ಪಡೆದುಕೊಂಡಿದ್ದ. ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಖಾಸಗಿ ಆಸ್ಪತ್ರೆ (Hospital)ಗೆ ದಾಖಲಿಸಿದ್ದರು. ಇದೀಗ ಯುವಕನ ಕುಟುಂಬಸ್ಥರು ಕೋಯಿಕ್ಕೋಡ್​ (Kozhikode) ಆಸ್ಪತ್ರೆಗೆ ಆತನನ್ನು ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.(ಏಜೆನ್ಸೀಸ್​)
In a shocking incident, a mentally ill youth jumped before a moving bus near Perinthalmanna. The cops summoned his parents to the spot, and shifted him to a mental health institute in Kozhikode, reports said.The man suffered head & leg injuries in the incident.pic.twitter.com/sgcSRQHHVJ
— Bechu.S (@bechu_s)November 9, 2022

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಸಾನಿಯಾ ಮಿರ್ಜಾ-ಶೋಯಿಬ್​ ಮಲಿಕ್​ ಡಿವೋರ್ಸ್​ ವದಂತಿ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಫ್ರೆಂಡ್​!

ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಬರದಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ನರ್ಸಿಂಗ್​ ವಿದ್ಯಾರ್ಥಿನಿ

ಸೂರ್ಯಕುಮಾರ್​ರನ್ನು ಸುಲಭವಾಗಿ ಔಟ್​ ಮಾಡುವುದು ಹೇಗೆ? ಪಾಕ್​ ಮಾಜಿ ಆಟಗಾರ ಕೊಟ್ಟ ಸಲಹೆ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 17 =
Remember me
