ನವದೆಹಲಿ:ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ದುಷ್ಕರ್ವಿುಗಳು ಯಾವುದೇ ಧರ್ಮ, ಜಾತಿ ಹಾಗೂ ಪಕ್ಷಕ್ಕೆ ಸೇರಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ಗಲಭೆ ಎಬ್ಬಿಸಿದವರು ಮತ್ತೊಮ್ಮೆ ಇಂಥ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಕಾನೂನಿನ ಭಯ ಹುಟ್ಟುಹಾಕುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಸಂಸತ್​ನಲ್ಲಿ ಹೇಳಿದ್ದಾರೆ.
ದೆಹಲಿ ಗಲಭೆ ಕುರಿತು ಗುರುವಾರ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಉತ್ತರ ನೀಡಿದ ಅವರು, ಗಲಭೆಯಲ್ಲಿ ಭಾಗಿಯಾಗಿದ್ದ 1922 ಜನರನ್ನು ಗುರುತಿಸಲಾಗಿದ್ದು, ಇದರಲ್ಲಿ 336 ಜನರು ಉತ್ತರಪ್ರದೇಶದಿಂದ ಬಂದಿದ್ದರು. ದುಷ್ಕರ್ವಿುಗಳನ್ನು ಪತ್ತೆಮಾಡುವಾಗ ಯಾರ ಖಾಸಗಿತನಕ್ಕೆ ಧಕ್ಕೆ ತಂದಿಲ್ಲ. ಗಲಭೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಲು ಕೇವಲ ವಾಹನ ಚಾಲನೆ ಪರವಾನಿಗೆ ಹಾಗೂ ಮತದಾರರ ಗುರುತಿನ ಚೀಟಿ ಡೇಟಾ ಬಳಸಲಾಗಿದೆ. ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಆಧಾರ್ ಡೇಟಾ ಬಳಸಿಲ್ಲ ಎಂದು ಮಾಹಿತಿ ನೀಡಿದರು.
ಹಿಂಸಾಚಾರದ ಬಗ್ಗೆ ಜನರು ಕಳುಹಿಸಿದ ವಿಡಿಯೋಗಳು ದುಷ್ಕರ್ವಿುಗಳನ್ನು ಪತ್ತೆ ಹಚ್ಚಲು ನೆರವಾದವು. ನಿಮಗೆ ಯಾರನ್ನಾದರೂ ದೂಷಿಸಬೇಕು ಎಂದರೆ ನನ್ನನ್ನು ದೂಷಿಸಿ. ಆದರೆ ದೆಹಲಿ ಪೊಲೀಸರ ಬಗ್ಗೆ ಮಾತನಾಡಬೇಡಿ ಎಂದು ಅಮಿತ್ ಷಾ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ದ್ವೇಷ ಭಾಷಣಗಳು ಪ್ರಾರಂಭವಾದವು. ಸಿಎಎ ನಿಮ್ಮ ಪೌರತ್ವ ಕಸಿದುಕೊಳ್ಳುತ್ತದೆ ಎಂದು ಜನರಿಗೆ ತಪು್ಪ ಮಾಹಿತಿಗಳನ್ನು ಹರಡಲಾಯಿತು. ದೆಹಲಿ ಹಿಂಸಾಚಾರಕ್ಕೂ 2 ದಿನಗಳ ಮುಂಚೆ ಕೆಲವು ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆಯಲಾಗಿದ್ದು, ಫೆ.25ರ ಬಳಿಕ ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ದ್ವೇಷವನ್ನು ಹರಡುವ ಸಲುವಾಗಿ ಇವುಗಳನ್ನು ತೆರೆಯಲಾಗಿತ್ತು. ಅವುಗಳ ಮಾಲೀಕರು ಸುರಕ್ಷಿತವಾಗಿದ್ದೇವೆ ಎಂದುಕೊಂಡಿದ್ದಾರೆ. ಆದರೆ ಇದು ಡಿಜಿಟಲ್ ಯುಗ. ನಾವು ಅವರನ್ನೆಲ್ಲ ಪತ್ತೆಮಾಡಿ ಕೋರ್ಟ್ ಮುಂದೆ ನಿಲ್ಲಿಸುತ್ತೇವೆ ಎಂದು ಷಾ ಹೇಳಿದ್ದಾರೆ. ನನ್ನ ಎಲ್ಲ ಮುಸ್ಲಿಂ ಸಹೋದರ-ಸಹೋದರಿಯರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಸಿಎಎ ಪೌರತ್ವ ನೀಡುವುದಕ್ಕಾಗಿ ಇರುವುದೇ ಹೊರತು, ಕಸಿದುಕೊಳ್ಳುವುದಕ್ಕಾಗಿ ಅಲ್ಲ. ದಯವಿಟ್ಟು ಯಾರೂ ಈ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡರು.
ಜಗತ್ತಿನಲ್ಲಿ ಎರಡು ವೈರಸ್​ಗಳಿವೆ!
ವಿಶ್ವದಾದ್ಯಂತ ಸದ್ಯ ಎರಡು ವೈರಸ್​ಗಳಿವೆ. ಒಂದು ಕರೊನಾ ವೈರಸ್ ಮತ್ತೊಂದು ಕೋಮುವಾದ ವೈರಸ್. ಈ ವೈರಸ್ ಯುವಕರಲ್ಲಿ ಸೇರಿದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ದೆಹಲಿಯಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತು, ಆದರೆ ದೆಹಲಿ ಪೊಲೀಸರಿಗಿದು ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ನೀವು ಗೋವುಗಳನ್ನು ರಕ್ಷಿಸಲು ಏನೂ ಬೇಕಾದರೂ ಮಾಡುತ್ತಿರಿ. ಆದರೆ ಮನುಷ್ಯರನ್ನು ಉಳಿಸಲು ಏನೂ ಮಾಡಲು ಸಾಧ್ಯವಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ಷಾ ಹೇಳಿದ್ದೇನು?
ಎನ್​ಪಿಆರ್​ಗೆ ಯಾವ ದಾಖಲೆಗಳನ್ನೂ ಕೇಳಲಾಗುವುದಿಲ್ಲ. ಯಾರಾದರೂ ನಿರ್ದಿಷ್ಟ ಮಾಹಿತಿ ನೀಡಲು ನಿರಾಕರಿಸಿದರೆ ಮತ್ತೆ ಪ್ರಶ್ನೆ ಕೇಳುವುದಿಲ್ಲ. ಯಾರ ಪೌರತ್ವದ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದಿಲ್ಲ.
ಸಿಎಂ ಅರವಿಂದ್ ಕೇಜ್ರಿವಾಲ್ ಫೆ. 27ರಂದು ಮಿಲಿಟರಿ ಕರೆಸಿ ಎಂದು ಒತ್ತಾಯಿಸಿದರು. ಆದರೆ ಅಷ್ಟರಲ್ಲಿ ಗಲಭೆ ಶಾಂತಸ್ಥಿತಿಗೆ ಮರಳಿತ್ತು. ಆದರೆ ಕೇಜ್ರಿವಾಲ್​ರ ಭಾವನೆಯನ್ನು ನಾನು ಅರ್ಥಮಾಡಿಕೊಂಡೆ. ಏಕೆಂದರೆ ಅವರ ಪಕ್ಷದ ನಾಯಕನ ಮನೆಯಲ್ಲಿ ದುಷ್ಕೃತ್ಯಕ್ಕೆ ಬಳಸಲಾದ ಅನೇಕ ವಸ್ತುಗಳು ಪತ್ತೆಯಾಗಿದ್ದವು.
ಸ್ವಾತಂತ್ರ್ಯ ನಂತರದಿಂದಲೂ ಬಿಜೆಪಿ ಸಿದ್ಧಾಂತವನ್ನು ಗಲಭೆಗಳ ಜತೆ ಸೇರಿಸುವ ಕೆಲಸ ನಡೆಯುತ್ತಿದೆ. ಆದರೆ ವಾಸ್ತವ ಬೇರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಗಲಭೆಗಳಲ್ಲೇ ಶೇ.76 ಜನರು ಸಾವನ್ನಪ್ಪಿದ್ದಾರೆ.
ಎರಡು ಮಸೂದೆ ಅಂಗೀಕಾರ
ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ
ಹಿಂದಿನ ಪ್ರವರ್ತಕರು ಮಾಡಿದ ಅಪರಾಧಗಳಿಗೆ ಕ್ರಿಮಿನಲ್ ವಿಚಾರಣೆಯ ಅಪಾಯದಿಂದ ದಿವಾಳಿಯಾದ ಕಂಪನಿಗಳ ಹೂಡಿಕೆದಾರರಿಗೆ ಸಹಾಯ ಮಾಡುವ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾದ ಈ ಮಸೂದೆಯನ್ನು ಮಾ. 6 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಖನಿಜ ಕಾನೂನು (ತಿದ್ದುಪಡಿ) ಮಸೂದೆ
ರಾಜ್ಯಸಭೆಯಲ್ಲಿ ಖನಿಜ ಕಾನೂನು (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ. ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಮತ್ತು ಕಲ್ಲಿದ್ದಲು ಗಣಿ (ವಿಶೇಷ ನಿಬಂಧನೆ) ಕಾಯ್ದೆ, 2015ಕ್ಕೆ ತಿದ್ದುಪಡಿಗಳನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಲೋಕಸಭೆಯಲ್ಲಿ ಕಳೆದ ಮಾ.6ರಂದು ಇದನ್ನು ಅಂಗೀಕರಿಸಲಾಗಿತ್ತು.
ದೆಹಲಿ ಹಿಂಸಾಚಾರಕ್ಕೆ ವಿದೇಶಿ ಮುಸ್ಲಿಂ ಎನ್​ಜಿಒದ ಹಣಕಾಸು ಸಹಾಯ…

ಜ್ಯೋತಿರಾದಿತ್ಯ ಸಿಂಧಿಯಾರ ಕೈ ಹಿಡಿದು ಸ್ವಾಗತ ಕೋರಿದ ಅಮಿತ್​ ಷಾ; ಪಕ್ಷದ ಬಲ ಹೆಚ್ಚಿತು ಎಂದ್ರು ರಾಜನಾಥ್​ ಸಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + two =
Remember me
