ಕೊಲ್ಲಂ:ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದ ವಿಚಿತ್ರ ಪ್ರಕರಣದ ಅಸಲಿ ಸತ್ಯ ಇದೀಗ ಬಯಲಾಗಿದೆ. ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್​ನಂತೆಯೇ ಮನೆಯಲ್ಲಿ ಘಟನೆಗಳು ನಡೆಯುತ್ತಿದ್ದವು. ಇದರಿಂದ ಇಡೀ ಕುಟುಂಬ ಗಾಬರಿಗೊಂಡು ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿತ್ತು. ಇದೀಗ ಆ ವಿಚಿತ್ರ ಘಟನೆಯ ಹಿಂದೆ ಯುವಕನೊಬ್ಬನ ಕೈವಾಡ ಇರುವುದು ಬಹಿರಂಗವಾಗಿದೆ.
ಅಂದಹಾಗೆ ಈ ಘಟನೆ ಕೊಲ್ಲಂ ಜಿಲ್ಲೆ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್​ನಲ್ಲಿ ನಡೆದಿತ್ತು. ವಾಟ್ಸ್​ಆ್ಯಪ್​ನಲ್ಲಿ ಬಂದ ಮಸೇಜ್​ನಂತೆಯೇ ಮನೆಯಲ್ಲಿ ಅನೇಕ ಘಟನೆಗಳು ನಡೆಯುತ್ತಿತ್ತು. ನೆಲ್ಲಿಕುನ್ನಮ್​ ಗ್ರಾಮದ ನಿವಾಸಿ ಹಾಗೂ ಎಲೆಕ್ಟ್ರಿಷಿಯನ್​ ರಾಜನ್​ ಅವರ ಮನೆ ಈ ವಿಚಿತ್ರ ವಿದ್ಯಾಮಾನಕ್ಕೆ ಸಾಕ್ಷಿಯಾಗಿತ್ತು.
ಕಳೆದ ಏಳು ತಿಂಗಳಿಂದಲೂ ರಾಜನ್​ ಮಗಳು ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್​ನಲ್ಲಿ ಆಕೆಯ ಗಮನಕ್ಕೆ ಬಾರದಂತೆ ಮಸೇಜ್​ಗಳನ್ನು ಸ್ವೀಕರಿಸುತ್ತಿದ್ದಳು. ಅಚ್ಚರಿ ಏನೆಂದರೆ, ಮಸೇಜ್​ ಬಂದ ಕೂಡಲೇ ವಿದ್ಯುತ್​ ಸಾಧನಗಳು ಹಾಗೂ ಸ್ವಿಚ್​ ಬೋರ್ಡ್​ಗಳು ಇದ್ದಕ್ಕಿದ್ದಂತೆ ಸುಡಲು ಆರಂಭಿಸುತ್ತಿತ್ತು. ರಾಜನ್​ ಎಲೆಕ್ಟ್ರಿಷಿಯನ್​ ಆಗಿದ್ದರೂ ಸಹ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.
ಫ್ಯಾನ್​ ಸ್ವಿಚ್​ ಆಫ್​ ಆಗುತ್ತದೆ ಎಂದು ಮಸೇಜ್​ ಬಂದ ಕೂಡಲೇ ಫ್ಯಾನ್​ ಆಫ್​ ಆಗುತ್ತಿತ್ತು. ಆನ್​ ಆಗುತ್ತದೆ ಎಂದು ಆನ್​ ಆಗುತ್ತಿತ್ತು. ಟವಿ ಕೂಡ ಆನ್​ ಆ್ಯಂಡ್​ ಆಫ್​ ಆಗುತ್ತಿತ್ತು. ಟ್ಯಾಂಕರ್​ನಿಂದ ನೀರು ಹೊರ ಸುರಿಯುತ್ತದೆ ಎಂದು ಕೂಡಲೇ ಅದೇ ರೀತಿ ಘಟನೆ ನಡೆಯುತ್ತಿತ್ತು. ಈ ಸಂಬಂಧ ಸೈಬರ್​ ಸೆಲ್​ಗೆ ಕುಟುಂಬದ ದೂರು ನೀಡಿತ್ತು.
ತನಿಖೆ ನಡೆಸಿದ ಪೊಲೀಸರಿಗೆ ಯುವಕನೊಬ್ಬನ ಕೈವಾಡ ಇರುವುದು ಬಯಲಾಗಿದೆ. ಆ್ಯಪ್​ ಒಂದರ ಮೂಲಕ ಸಂತ್ರಸ್ತ ಕುಟುಂಬದ ಮೊಬೈಲ್​ ಸಂಪರ್ಕಿಸಿ, ಈ ಕೃತ್ಯ ಎಸಗುತ್ತಿದ್ದ. ಆರೋಪಿ ಯುವಕನ ಮೊಬೈಲ್​ ಫೋನ್​ನಲ್ಲಿ ವಿಶೇಷ ಆ್ಯಪ್ ಒಂದು ಇನ್​ಸ್ಟಾಲ್​ ಆಗಿದ್ದು, ಅದರ ಮೂಲಕವೇ ಸಂತ್ರಸ್ತ ಕುಟುಂಬದ ವಿದ್ಯುತ್​ ಸಾಧನಗಳನ್ನು ಹ್ಯಾಕ್​ ಮಾಡಿ ನಿಯಂತ್ರಣ ಮಾಡುತ್ತಿದ್ದ.
ಇದನ್ನು ತಮಾಷೆಗಾಗಿ ಆತ ಮಾಡಿದನಂತೆ. ಆದರೆ, ಇಷ್ಟೊಂದು ಗಂಭೀರವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಆರೋಪಿ ಯುವಕ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಟಿವಿ ಸೇರಿದಂತೆ ಇತರೆ ಗೃಹ ಬಳಕೆಯ ವಿದ್ಯುತ್​ ಸಾಧನಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೊಟ್ಟಾರಕ್ಕರ ಎಸ್​ಐ ಪ್ರಶಾಂತ್​ ತಿಳಿಸಿದ್ದಾರೆ.(ಏಜೆನ್ಸೀಸ್​)​
ನಟಿ ರಶ್ಮಿಕಾ ಮಂದಣ್ಣರಿಂದಾಗಿ ಈ ಎರಡು ಸಿನಿಮಾಗಳಿಗೆ ಎದುರಾಯ್ತು ಸಂಕಷ್ಟ!

ಮಂಗಳೂರು ಬ್ಲಾಸ್ಟ್​ ಎಫೆಕ್ಟ್​: ಮನೆ ಬಾಡಿಗೆಗ ಕೊಡುವ ಮುನ್ನ ಪೊಲೀಸ್​ ಠಾಣೆಯಲ್ಲಿ ಪಡೆಯಬೇಕು ಅನುಮತಿ…

ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
