ನವದೆಹಲಿ:ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ತಂದೆಯನ್ನು ನೋಡಲು ಮುಂಬೈನಿಂದ ಜಮ್ಮುಗೆ ಸೈಕಲ್​ ಯಾತ್ರೆ ಆರಂಭಿಸಿರುವ ವ್ಯಕ್ತಿಗೆ ಪೊಲೀಸರು ಮತ್ತು ಸಿಆರ್​ಪಿಎಫ್​ ಯೋಧರ ನೆರವು ಸಿಕ್ಕಿದೆ.
ಮೊಹಮ್ಮದ್​ ಆರೀಫ್​ (36) ಮುಂಬೈನ ಬಾಂದ್ರಾ ವೆಸ್ಟ್​ನಲ್ಲಿ ಲಿಬ್ರಾ ಟವರ್​ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮುವಿನಲ್ಲಿರುವ ತಮ್ಮ ತಂದೆ ತೀವ್ರ ಅಸ್ವಸ್ಥರಾಗಿರುವುದಾಗಿ ಮಾಹಿತಿ ಲಭಿಸಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಬಸ್​ ಮತ್ತು ರೈಲು ಸೇವೆಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಸೈಕಲ್​ನಲ್ಲೇ ಜಮ್ಮುಗೆ ತೆರಳಲು ಮುಂದಾಗಿದ್ದರು.
ಇವರು ಗುಜರಾತ್​ ತಲುಪುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಮ್ಮುಗೆ ತೆರಳಲು ಇವರಿಗೆ ಅಗತ್ಯ ನೆರವು ನೀಡಲು ಮುಂದಾಗಿದ್ದಾರೆ. ಜಮ್ಮು ಕಡೆಗೆ ತೆರಳುತ್ತಿದ್ದ ಟ್ರಕ್​ನಲ್ಲಿ ಆತನನ್ನು ಹತ್ತಿಸಿದ್ದು, ಕೆಲವೇ ಗಂಟೆಗಳಲ್ಲಿ ಇವರು ಜಮ್ಮು ತಲುಪಲಿದ್ದಾರೆ.
ಭಾನುವಾರ ಈ ವಿಷಯವನ್ನು ತಿಳಿಸಿರುವ ಮೊಹಮ್ಮದ್​ ಆರೀಫ್​, ನಾನು ಇಡೀ ರಾತ್ರಿ ಸೈಕಲ್​ ತುಳಿದುಕೊಂಡು ಗುಜರಾತ್​-ರಾಜಸ್ಥಾನ ಗಡಿಯನ್ನು ತಲುಪಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ನನಗೆ ಕರೆ ಮಾಡಿ ಲಾಕ್​ಡೌನ್​ ಇರುವುದರಿಂದ ಮುಂದಕ್ಕೆ ಹೋಗದಂತೆ ಸೂಚಿಸಿದರು. ಆದರೂ ನಾನು ನನ್ನ ಪ್ರಯಾಣವನ್ನು ಮುಂದುವರಿಸಿದ್ದೆ. ಆದರೆ, ಭಾನುವಾರ ಬೆಳಗ್ಗೆ ಜಮ್ಮು ಕಡೆಗೆ ತೆರಳುತ್ತಿದ್ದ ಟ್ರಕ್​ಗೆ ಹತ್ತಿಸಿದ ಪೊಲೀಸ್​ ಸಿಬ್ಬಂದಿ, ನನಗೆ ಆಹಾರವನ್ನೂ ಕೊಟ್ಟರು ಎಂದು ತಿಳಿಸಿದ್ದಾರೆ.
ಮೊಹಮ್ಮದ್​ ಆರೀಫ್​ ಅವರ ಕತೆ ಕೇಳಿದ ಸಿಆರ್​ಪಿಎಫ್​ ಸಿಬ್ಬಂದಿ ಜಮ್ಮುವಿನ ರಾಜೋರಿ ಜಿಲ್ಲೆಯಲ್ಲಿರುವ ಆರೀಫ್​ ಅವರ ಮನೆಗೆ ತೆರಳಿ ಅವರ ತಂದೆಯ ಆರೋಗ್ಯ ವಿಚಾರಿಸಿದರು. ಅವರು ಪಾರ್ಶ್ವವಾಯು ಪೀಡಿತರಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮದದ್​ಗಾರ್​ ಯೋಜನೆಯಡಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಅವರ ತಂದೆಯ ಸ್ಥಿತಿ ತುಂಬಾ ಗಂಭೀರವಾಗಿದೆ. ಅಗತ್ಯ ಬಿದ್ದಲ್ಲಿ ಅವರನ್ನು ಕಾಟ್ರಾದಲ್ಲಿರುವ ನಾರಾಯಣ ಹಾಸ್ಪಿಟಲ್​ಗೆ ಸ್ಥಳಾಂತರಿಸಲಾಗುವುದು ಎಂದು ಸಿಆರ್​ಪಿಎಫ್​ನ ಸ್ಪೆಶಲ್​ ಡಿಜಿ ಝುಲ್ಫಿಕರ್​ ಹಸನ್​ ಹೇಳಿದ್ದಾರೆ.
ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 7 =
Remember me
