ಉತ್ತರಕನ್ನಡ:ಮಾಟ-ಮಂತ್ರದ ಉದ್ದೇಶಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕೇರಳ ಪೊಲೀಸರಿಗೆ ಬೇಕಾಗಿದ್ದ ಈ ಆರೋಪಿಯನ್ನು ಕರ್ನಾಟಕ ಪೊಲೀಸರ ನೆರವಿನಿಂದ ಕಾರವಾರದಲ್ಲಿ ಬಂಧಿಸಲಾಗಿದೆ.
ಕೇರಳದ ಸನು ಮೋಹನ್ ಬಂಧಿತ ಆರೋಪಿ. ನಲ್ವತ್ತು ವರ್ಷದ ಈತ ಮಾಟ-ಮಂತ್ರದ ಉದ್ದೇಶಕ್ಕಾಗಿ ತನ್ನ 13 ವರ್ಷದ ಮಗಳನ್ನೇ ಬಲಿ ನೀಡಿದ್ದ. ಈ ಸಂಬಂಧ ತ್ರಿಕ್ಕಾಕರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಕೇರಳ ಪೊಲೀಸರು ಲುಕ್​ಔಟ್ ನೋಟಿಸ್ ನೀಡಿದ್ದರು.
ಆರೋಪಿಯ ಮೊಬೈಲ್​ಫೋನ್ ನೆಟ್​ವರ್ಕ್​ ಆಧಾರದ ಮೇರೆಗೆ ಈತ ಕರ್ನಾಟಕದ ಕಾರವಾರ ಪ್ರದೇಶದಲ್ಲಿ ಇರುವುದ ಸುಳಿವು ತಿಳಿದ ಪೊಲೀಸರು, ಕರ್ನಾಟಕ ಪೊಲೀಸರ ನೆರವು ಕೋರಿದ್ದರು. ಬಳಿಕ ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಈತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 19 =
Remember me
