ನವದೆಹಲಿ:ನೋಡಲು ಸ್ಫುರದ್ರೂಪಿ. ಆದರೆ ಮಾಡಲು ಕೆಲಸವಿಲ್ಲ. ಆದರೂ ಐಷಾರಾಮಿ ಮರ್ಸಿಡೀಸ್​ ಬೆಂಜ್​ ಕಾರಿನಲ್ಲಿ ತಿರುಗಾಟ. ಏನೋ ಭಾರಿ ಕೆಲಸ ಮಾಡುವವನಂತೆ ಹೆದ್ದಾರಿಗಳಲ್ಲಿ ತಿರುಗಾಟ. ಮಿಕಗಳನ್ನು ಗುರುತಿಸಿ, ಅವರ ಕಾರುಗಳನ್ನು ಹಿಂದಕ್ಕೆ ಹಾಕಿ, ಅಡ್ಡಗಟ್ಟಿ ಹಣ ಸುಲಿಗೆ ಮಾಡುತ್ತಿದ್ದ. ಇದೀಗ ಈತನ ಐಷಾರಾಮಿ ಸುಲಿಗೆ ಮಾಡುವ ಪದ್ಧತಿ ಪೊಲೀಸರಿಗೆ ಗೊತ್ತಾಗಿದ್ದು, ಈತನನ್ನು ತಮ್ಮ ಅತಿಥಿಯನ್ನಾಗಿ ಮಾಡಿಕೊಂಡಿದ್ದಾರೆ.
ಅಮರ್​ ಸಿಂಗ್​ ಅಲಿಯಾಸ್​ ಅವಧ್​ ಬಿಹಾರಿ ಬಂಧಿತ. ಮೂಲತಃ ಬಿಹಾರದವನಾಗಿದ್ದ ಈತ ದೆಹಲಿಯ ಸುತ್ತಮುತ್ತಲ ಹೆದ್ದಾರಿಗಳಲ್ಲಿ ಸುಲಿಗೆ ಮಾಡುತ್ತಿದ್ದ. ಗ್ರೇಟರ್​ ನೋಯ್ಡಾದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ಪವರ್​ ಸ್ಟಾರ್​’ಗೂ ಎದುರಾಯ್ತು ಪೈರಸಿ ಕಾಟ!
ಈತನ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮಿಕಗಳನ್ನು ಹುಡುಕಿಕೊಂಡು ಈತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಮಿಕಗಳನ್ನು ಗುರುತಿಸಿದ ಬಳಿಕ ಅವರ ಕಾರುಗಳನ್ನು ಹಿಂದಿಕ್ಕಿ ಅಡ್ಡಗಟ್ಟುತ್ತಿದ್ದ. ತನ್ನ ಬಳಿ ಇದ್ದ ಪರವಾನಗಿ ಇರುವ ಪಿಸ್ತೂಲ್​ ತೋರಿಸಿ ಹಣ ಕೊಡುವಂತೆ ಬೆದರಿಸುತ್ತಿದ್ದ. ಕೊಡಲು ನಿರಾಕರಿಸಿದರೆ ಗುಂಡು ಸಿಡಿಸಿ ಹತ್ಯೆ ಮಾಡುವ ಬೆದರಿಕೆ ಹಾಕಿ, ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದ ಎಂದು ಹೇಳಿದ್ದಾರೆ.
ಜುಲೈ 21ರಂದು ಗ್ರೇಟರ್​ ನೋಯ್ಡಾದಲ್ಲಿ ಈತ ಸುಲಿಗೆ ಮಾಡಿದ್ದ. ಆ ಕಾರಿನ ಮಾಲೀಕರ ಪೊಲೀಸರಲ್ಲಿ ದೂರು ದಾಖಲಿಸಿದ್ದ. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಗ್ರೇಟರ್​ ನೋಯ್ಡಾ ಪೊಲೀಸರು ಅವಧ್​ ಬಿಹಾರಿಯನ್ನು ಬಂಧಿಸಿದ್ದಾರೆ. ಉತ್ತರಾಖಂಡ್​ನಲ್ಲಿ ನೋಂದಾಯಿಸಲ್ಪಟ್ಟಿರುವ ಪಿಸ್ತೂಲ್​ ಒಂದಷ್ಟು ಗುಂಡುಗಳು ಮತ್ತು ಮರ್ಸಿಡೀಸ್​ ಕಾರನ್ನು ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ಗೌತಮ್​ ಬುದ್ಧ ನಗರ್​, ಘಾಜಿಯಾಬಾದ್​ ಮತ್ತು ಇಟಾ ಜಿಲ್ಲೆಗಳಲ್ಲಿ ಕೂಡ ಇದೇ ಬಗೆಯ ದೂರುಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಶ್ರೀನಗರ ಜಿಲ್ಲೆಯಲ್ಲೀಗ ಸಕ್ರಿಯ ಉಗ್ರರೇ ಇಲ್ಲ: ಜಮ್ಮು-ಕಾಶ್ಮೀರ ಪೊಲೀಸ್ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
