ನವದೆಹಲಿ:ನೇಣುಗಂಬಕ್ಕೆ ಹಾಕುವವರಿಗೆ ಒಂದು ಸಲ ಕೊನೆಯ ಆಸೆ ಏನು ಎಂದು ಕೇಳುತ್ತಾರೆ. ಆದರೆ ಸ್ವತಃ ನೇಣು ಹಾಕಿಕೊಳ್ಳುವವರು ತಮ್ಮ ಕೊನೆಯ ಆಸೆ ಏನಾದರೂ ಇದ್ದರೆ ಡೆತ್​ನೋಟ್​ನಲ್ಲಿ ಬರೆದಿಟ್ಟು ಸಾಯುತ್ತಾರೆ. ಹಾಗೆ ತನ್ನ ಕೊನೆಯ ಆಸೆಯೊಂದನ್ನು ಬರೆದಿಟ್ಟು ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿದ್ದಾನೆ.
ಅಷ್ಟಕ್ಕೂ ಆತ ಡೆತ್​ನೋಟ್ ಬರೆಯಲು ಬಳಸಿದ ಕಾಗದವೇ ಗಮನ ಸೆಳೆದಿದೆ. ಏಕೆಂದರೆ ನೇಣು ಹಾಕಿಕೊಂಡು ಮೃತಪಟ್ಟ ಈ ವ್ಯಕ್ತಿಯ ಕಿಸೆಯಲ್ಲಿ ಬ್ಯಾಂಕ್​ ಪಾಸ್​ಬುಕ್​ ಹಾಗೂ ಪೆನ್ ಪತ್ತೆಯಾಗಿದೆ. ಅದರಲ್ಲೂ ಆತ ಪಾಸ್​ಬುಕ್​ ಮೇಲೇ ಡೆತ್​ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತನ್ನ ಕೊನೆಯ ಆಸೆಯನ್ನು ಆತ ಡೆತ್​ನೋಟ್​ನಲ್ಲಿ ಹೇಳಿಕೊಂಡಿದ್ದು, ಆ ಆಸೆ ಈಡೇರಿಸುವಂತೆ ಡೆತ್​ ಮೂಲಕ ಸೋದರ ಮಾವನಲ್ಲಿ ಕೋರಿಕೊಂಡಿದ್ದಾನೆ.
ನವದೆಹಲಿಯ ಆಜಾದ್ ಕಾಲನಿಯ ಬುದ್ಧ ವಿಹಾರ್ 2ನೇ ಹಂತದ ನಿವಾಸಿ, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದ ಸುಬೋಧ್​ (40) ದೆಹಲಿ ರೋಹಿಣಿ ಏರಿಯಾದ ಟಿ ಪಾಯಿಂಟ್​ನ ಪಾರ್ಕ್​ನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
