ದುಬೈ:ಕಳೆದ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್​ ಮುಷರಫ್​​​ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತು ಅವರ ಕುಟುಂಬ ಮೂಲಗಳು ಟ್ವೀಟ್​ ಮಾಡಿದ್ದು, ಮುಷರಫ್​​ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ಅವರು ತುರ್ತು ನಿಗಾ ಘಟಕದಲ್ಲಿ ಇಲ್ಲ, ಆದರೆ ಗಂಭೀರ ಸಮಸ್ಯೆ ಇರುವುದರಿಂದ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಅವರು ಗುಣಮುಖರಾಗುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದಾರೆ ಎಂದು ಮುಷರಫ್​ ಅಧಿಕೃತ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.
ಅವರು ಅಮಿಲೋಯ್ಡೋಸಿಸ್​ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಇದು ದೇಹದ ಅಂಗಾಂಗಗಳಲ್ಲಿ ಅಸಹಜ ಪ್ರೋಟೀನ್​ ರಚನೆಯಿಂದ ಉಂಟಾಗುವ ಅಪರೂಪದ ಗಂಭೀರ ಕಾಯಿಲೆ ಇದಾಗಿದ್ದು, ಇದು ಹೃದಯ, ಮೆದುಳು, ಮೂತ್ರಪಿಂಡಗಳು, ಮತ್ತು ದೇಹದ ಇತರೆ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಈ ಸಮಸ್ಯೆಯಿಂದ ಬಳಲುತ್ತಿರುವ ಮುಷರಫ್​ ಆರೋಗ್ಯದಲ್ಲಿ ಮೂರು ವಾರಗಳಿಂದ ಚೇತರಿಕೆ ಕಾಣುತ್ತಿಲ್ಲ ಎಂದು ಹೇಳಲಾಗಿದೆ.
ದೇಶದ್ರೋಹ ಆರೋಪದ ಮೇಲೆ ಪಾಕಿಸ್ತಾನದ ತೊರೆದಿರುವ ಮುಷರಫ್​​​ ದುಬೈಯಲ್ಲಿ ನೆಲೆಸಿದ್ದಾರೆ. ಅಲ್ಲದೇ 2018ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಗಿತ್ತು.(ಏಜೆನ್ಸೀಸ್​)
ನಯನತಾರಾ-ವಿಘ್ನೇಶ್​ ಬಳಿಯಿರುವ ಆಸ್ತಿ ಇಷ್ಟೊಂದಾ? ಒಟ್ಟು ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
