ನವದೆಹಲಿ: ಕೀಟನಾಶಕಗಳ ವ್ಯಾಪಾರಕ್ಕೆ ಕಡಿವಾಣ ಹಾಕುವ ಮತ್ತು ನಕಲಿ ಕೃಷಿ ರಾಸಾಯನಿಕಗಳನ್ನು ಬಳಸಿ ನಷ್ಟ ಉಂಟಾದಲ್ಲಿ ರೈತರಿಗೆ ಪರಿಹಾರ ನೀಡುವ ಮಸೂದೆಯನ್ನು ಈ ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಕ್ಯಾಬಿನೆಟ್ ಬುಧವಾರ ನಡೆದಿದ್ದು, ಪೆಸ್ಟಿಸೈಡ್ಸ್​ ಮ್ಯಾನೇಜ್​ಮೆಂಟ್​ ಬಿಲ್​ 2020ಕ್ಕೆ ಅನುಮೋದನೆಯನ್ನು ನೀಡಿದೆ. ಈ ಮಸೂದೆ 1968ರ ಇನ್​ಸೆಕ್ಟಿಸೈಡ್ಸ್ ಆ್ಯಕ್ಟ್​ನ ಜಾಗವನ್ನು ಈ ಹೊಸ ಮಸೂದೆ ತುಂಬಲಿದೆ. ಅಲ್ಲದೆ, ಕೀಟನಾಶಕಗಳ ಜಾಹೀರಾತುಗಳನ್ನೂ ಇದು ನಿಯಂತ್ರಿಸಲಿದೆ ಮತ್ತು ಯಾವುದೇ ರೀತಿಯ ಉಲ್ಲಂಘನೆಗೆ ಭಾರಿ ಕನಿಷ್ಠ 25,000 ರೂಪಾಯಿಯಿಂದ ಗರಿಷ್ಠ 50 ಲಕ್ಷ ರೂಪಾಯಿ ತನಕ ದಂಡವನ್ನೂ ಮತ್ತು ಗರಿಷ್ಠ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸುವ ಅವಕಾಶವನ್ನು ಈ ಮಸೂದೆ ನೀಡುತ್ತದೆ.ಕೇಂದ್ರ ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್​ ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ್ದು, ಈ ವಿಚಾರ ತಿಳಿಸಿದ್ದಾರೆ.
ಕೃಷಿಕರ ಕುರಿತ ಕಾಳಜಿ ವಿಚಾರದಲ್ಲಿ ಇದು ನಮ್ಮ ಪ್ರಾಥಮಿಕ ಆದ್ಯತೆ. ಕೀಟನಾಶಕ ನಿರ್ವಹಣಾ ಮಸೂದೆ2020 ಸಂಸತ್ತಿನಲ್ಲಿ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಪ್ರಸ್ತುತ ಕೀಟನಾಶಕಗಳ ವ್ಯಾಪಾರವನ್ನು 1968ರ ಕಾನೂನು ಮೂಲಕ ನಿಯಂತ್ರಿಸಲಾಗುತ್ತದೆ. ಕೃಷಿ ಸಮುದಾಯಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ಕಾನೂನಾಗಿದ್ದು, ಕೇಂದ್ರ ಸರ್ಕಾರ ಹಂತ ಹಂತವಾಗಿ ಕೃಷಿಕರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಜಾವಡೇಕರ್ ಹೇಳಿದ್ದಾರೆ.
ಈ ಮಸೂದೆ ಜಾರಿಯಾದ ನಂತರದಲ್ಲಿ ಕೃಷಿಕರು ನಕಲಿ ಕೃಷಿ ರಾಸಾಯನಿಕಗಳಿಂದ ಮೋಸ ಹೋಗುವುದು ತಪ್ಪುತ್ತದೆ. ಕೃಷಿ ರಾಸಾಯನಿಕಗಳ ಅಂತಿಮ ಬಳಕೆದಾರ ಕೃಷಿಕನೇ ಆಗಿರುವುದರಿಂದ ಈಗ ಮೋಸಕ್ಕೆ ಒಳಗಾಗುತ್ತಿದ್ದಾನೆ.ಇದನ್ನು ತಪ್ಪಿಸುವ ಸಲುವಾಗಿ ಎಲ್ಲ ಕೀಟನಾಶಕ ಉತ್ಪಾದಕರು ಇನ್ನು ಮೇಲೆ ಹೊಸ ಕಾನೂನು ಜಾರಿಯಾದ ನಂತರದಲ್ಲಿ, ಇದರ ಪ್ರಕಾರ ನೋಂದಣಿ ಮಾಡಿಸಿಕೊಳ್ಳಬೇಕು. ಅವರು ನೀಡುವ ಜಾಹೀರಾತಿನ ಮೇಲೂ ನಿಗಾ ಇರಿಸಲಾಗುತ್ತಿದ್ದು, ಯಾವುದೇ ರೀತಿಯಲ್ಲೂ ಕೃಷಿಕರಿಗೆ ವಂಚನೆ ಆಗಬಾರದು ಎಂಬ ಎಲ್ಲ ಮುನ್ನೆಚ್ಚರಿಕಾ ಕ್ರಮವನ್ನು ಈ ಮಸೂದೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಜಾವಡೇಕರ್ ಸ್ಪಷ್ಷಪಡಿಸಿದ್ದಾರೆ.
ನಿಯಮ ಉಲ್ಲಂಘನೆಗೆ ಕೀಟನಾಶಕ ಉತ್ಪಾದಕ ಸಂಸ್ಥೆಗಳ ವಿರುದ್ಧ ದಂಡವೂ ವಿಧಿಸಬಹುದಾಗಿದ್ದು, ಬಂದ ಹಣವನ್ನು ಕೇಂದ್ರ ನಿಧಿಗೆ ಹಾಕಲಾಗುತ್ತದೆ. ಅದರಿಂದಲೇ ಪರಿಹಾರವನ್ನೂ ಕೊಡಲಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ಕೃಷಿಕರಿಗೆ ಕೀಟನಾಶಕಗಳ ಬಲ ಮತ್ತು ದೌರ್ಬಲ್ಯಗಳ ಮಾಹಿತಿ ಒದಗಿಸಿ ಅದರ ಅಪಾಯದ ಅರಿವು ಮೂಡಿಸಲಾಗುತ್ತದೆ. ಅದಕ್ಕೆ ಪರ್ಯಾಯ ಯಾವುದು ಎಂಬ ಮಾಹಿತಿಯೂ ಡಿಜಿಟಲ್ ಮಾದರಿಯಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದರು.
ಈ ಮಸೂದೆ ಮಂಡನೆಯ ಮೂಲ ಉದ್ದೇಶ ಸಾವಯವ ಕೀಟನಾಶಕಗಳಿಗೆ ಉತ್ತೇಜನ ನೀಡುವಂತದ್ದು. 2008ರಲ್ಲೇ ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಕೃಷಿ ಸ್ಥಾಯಿ ಸಮಿತಿ ಪರಿಶೀಲನೆಗೆ ಸಲ್ಲಿಕೆಯಾಗಿತ್ತು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ 2017-18ರಲ್ಲಿ ಈ ಸಂಬಂಧ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 8 =
Remember me
