ರಾಂಚಿ:ಮನುಷ್ಯನ ಅವಿಭಾಜ್ಯ ಅಂಗಗಳಲ್ಲಿ ನಾಯಿಯು ಸಹ ಒಂದು. ಮನುಷ್ಯ ಬಹುಶಃ ನಾಯಿಯ ಮೇಲೆ ತೋರಿಸುವಷ್ಟು ಪ್ರೀತಿ ಇನ್ನಾವ ಪ್ರಾಣಿಗಳ ಮೇಲೂ ತೋರಿಸಲಾರ. ಅತ್ಯಂತ ನಿಷ್ಠಾವಂತ ಎಂದೇ ಬಿಂಬಿತಗೊಂಡಿರುವ ನಾಯಿಯೆಂದರೆ ಉನ್ನತ ಹುದ್ದೆಯಲ್ಲಿ ಇರುವವರಿಂದ ಹಿಡಿದು ಅತ್ಯಂತ ಕೆಳಮಟ್ಟದ ವರ್ಗದವರು ಎನಿಸಿಕೊಂಡವವರೆಗೆ, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವೇ. ಎಷ್ಟೋ ಮನೆಗಳಲ್ಲಲಿ ಇವು ಪ್ರಾಣಿಯ ಬದಲಾಗಿ ಸದಸ್ಯನಂತೆಯೇ ಇವೆ.
ಅಂಥದ್ದೇ ಒಂದು ನಾಯಿಯ ಪ್ರೀತಿಯಲ್ಲಿ ತೇಲಿ ಹೋಗಿರುವವರು ಜಾರ್ಖಂಡ್​ನ ಧನಬಾದ್​ ಮೂಲದ ಕುಟುಂಬ, ತಮ್ಮ ಸಾಕು ನಾಯಿಗೆ ಅದ್ಧೂರಿಯಾಗಿ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಅತಿಥಿಗಳಿಗೆ ಆಹ್ವಾನ ಪತ್ರಿಕೆ ಸಹ ನೀಡಲಾಗಿತ್ತು.
ಅಂದಹಾಗೆ ಶ್ವಾನದ ಹೆಸರು ಅಕ್ಸರ್​ ಎಂದು. ಮನೆಯ ಸದಸ್ಯರಲ್ಲಿ ಒಬ್ಬನಂತಿರುವ ಅಕ್ಸರ್​ ಮನೆ ಮಂದಿಗೆಲ್ಲ ತುಂಬಾ ಮುದ್ದು. ಪುಟ್ಟ ಮರಿಯಾದಗಿನಿಂದ ಬೆಳೆಸಿರುವ ಶ್ವಾನ ಆಗಿರುವುದರಿಂದ ಅದರ ಮೇಲೆ ಇಡೀ ಕುಟುಂಬಕ್ಕೆ ಭಾವುಕತೆ ಹೆಚ್ಚಿದೆ. ಹೀಗಾಗಿ ಅದರ ಬರ್ತಡೇಯನ್ನು ಬಹಳ ಅದ್ಧೂರಿಯಾಗಿಯೇ ಆಚರಿಸಿದ್ದಾರೆ.
ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಅತಿಥಿಗಳಿಗೆ ಹಂಚಿ ಆಹ್ವಾನಿಸಲಾಗಿತ್ತು. ಶ್ವಾನಕ್ಕೆ 4500 ರೂ. ಬೆಲೆಯ ಬಟ್ಟೆಯನ್ನು ತರಲಾಗಿತ್ತು. ಮನೆಯಲ್ಲೇ ನಡೆದ ಸಂಭ್ರಮಾಚರಣೆಯಲ್ಲಿ 350ಕ್ಕೂ ಹೆಚ್ಚು ಅಥಿತಿಗಳು ಭಾಗವಹಿಸಿದ್ದರು. ಕೇವಲ ಅಕ್ಕ-ಪಕ್ಕದವರು ಮಾತ್ರವಲ್ಲದೆ, ದೂರದ ಊರುಗಳಿಂದಲೂ ಆಗಮಿಸಿದ್ದರು. ಬಂದವರಿಗೆ ಒಳ್ಳೆಯ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಂದ ಅತಿಥಿಗಳು ಬರಿಗೈನಲ್ಲಿ ಬಾರದೇ ದುಬಾರಿ ಉಡುಗೊರೆಗಳನ್ನು ಸಹ ಜೊತೆಗೆ ತಂದಿದ್ದರು. ಅವುಗಳಲ್ಲಿ ಮೂರು ಚಿನ್ನದ ಲಾಕೆಟ್​ಗಳು ಸೇರಿವೆ.
ಕೇಕ್​ ಕತ್ತರಿಸುವ ಮುನ್ನ ನಾಯಿಗೆ ಆರತಿಯನ್ನು ಸಹ ಬೆಳಗಲಾಯಿತು. ಈ ಸಂಭ್ರಮಾಚರಣೆಗೆ ಸಂಬಂಧಿಸಿದ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮನೆ ಒಡತಿ ತನ್ನ ಮುದ್ದಿನ ನಾಯಿಗೆ ಚುಂಬಿಸುವ ದೃಶ್ಯ ಸಹ ವಿಡಿಯೋದಲ್ಲಿದೆ.
ಅಂದಹಾಗೆ ಸುಮಿತ್ರಾ ಕುಮಾರಿ ಮತ್ತು ಸಂದೀಪ್​ ಎಂಬುವರೇ ಈ ಶ್ವಾನದ ಮಾಲೀಕರು. ರಸ್ತೆ ಪಕ್ಕದಲ್ಲಿ ಸಿಕ್ಕ 20 ದಿನದ ಮರಿಯನ್ನು ಮನೆಗೆ ತಂದು, ಸಾಕಿ, ಬೆಳೆಸಿರುವುದರಿಂದ ಶ್ವಾನದ ಮೇಲೆ ಹೆಚ್ಚು ಪ್ರೀತಿ ಎನ್ನುತ್ತಾರೆ ದಂಪತಿ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ದಂಪತಿಯ ಶ್ವಾನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದು, ಬಗೆ ಬಗೆಯ ಕಾಮೆಂಟ್​ ಮೂಲಕ ಶುಭ ಕೋರಿದ್ದಾರೆ.(ಏಜೆನ್ಸೀಸ್​)
धनबाद में एक पालतू कुत्ते की जन्मदिन पार्टी को देख लोग बोले ‘क़िस्मत सहो तो ऐसी’pic.twitter.com/yRc9iqgQFo
— Shubhankar Mishra (@shubhankrmishra)December 1, 2022

ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ತೂರಿಬಂತು ಕಬ್ಬಿಣದ ರಾಡ್: ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು​

ಮೀಸಲಾತಿ ಲಾಭ ದೊರೆಯಲಿ; ರೋಸ್ಟರ್ ಬಿಂದು ಗುರುತು ಕಾರ್ಯ ತ್ವರಿತಗೊಳ್ಳಲಿ

ಗುಜರಾತ್​ನಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ: ಬ್ರಿಟಿಷರೊಂದಿಗೆ ಕೆಲಸ ಮಾಡಿದ ಕಾಂಗ್ರೆಸ್​ಗೆ ಇನ್ನೂ ಗುಲಾಮ ಮನಸ್ಥಿತಿ ಇದೆ ಎಂದು ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
