ನವದೆಹಲಿ:ಯುವಕರಿಬ್ಬರು ನಾಯಿಗೆ ಚಿತ್ರಹಿಂಸೆ ನೀಡಿ ಅದನ್ನು ನೀರಿನಲ್ಲಿ ಎಸೆದು ಅದನ್ನು ಟಿಕ್​ಟಾಕ್​ ಮೂಲಕ ವೀಡಿಯೋ ಮಾಡಿ ಹರಿಬಿಟ್ಟಿರುವ ದೃಶ್ಯ ಈಚೆಗೆ ಭಾರಿ ವೈರಲ್​ ಆಗಿತ್ತು.
ಇಬ್ಬರು ಯುವಕರು ನಾಯಿಯ ಕಾಲುಗಳಿಗೆ ಹಗ್ಗಕಟ್ಟಿ ಅದನ್ನು ನೀರಿಗೆ ಎಸೆದು ವಿಕೃತಿ ಮೆರೆದಿದ್ದರು. ಇದನ್ನು ಟಿಕ್​ಟಾಕ್​ನಲ್ಲಿ ವೀಡಿಯೋ ಮಾಡಲಾಗಿತ್ತು.ಇದು ಭಾರಿ ವೈರಲ್​ ಆಗುತ್ತಿದ್ದಂತೆಯೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಟಿಕ್​ಟಾಕ್​ ಬ್ಯಾನ್​ ಮಾಡುವ ಕೂಗು ಕೇಳುತ್ತಿರುವಾಗಲೇ ಇಂಥದ್ದೊಂದು ವಿಕೃತ ಮನೋಭಾವದ ವೀಡಿಯೋ ನೋಡಿದ ಜನರು ಕಿಡಿ ಕಾರಿದ್ದರು. ಆ ಮೂಕ ಪ್ರಾಣಿ ಅನುಭವಿಸಿರುವ ನೋವಿಗೆ ತುಂಬಾ ಮಂದಿ ಸಂಕಟ ಪಟ್ಟಿದ್ದರು.
ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿಗೆ ವಕ್ಕರಿಸಿದ ಕರೊನಾ ಸೋಂಕು: ಕಾಂಗ್ರೆಸ್​ ಸಚಿವರಲ್ಲಿ ಎರಡನೇ ಕೇಸ್​!
ಇದೀಗ ಈ ವೀಡಿಯೋ ಪ್ರಾಣಿ ದಯಾ ಸಂಘವನ್ನು (ಪೇಟಾ) ಕೆರಳಿಸಿದೆ. ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಪೇಟಾ ಈ ಯುವಕರ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದೆ. ಈ ಯುವಕರ ಗುರುತು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಪೇಟಾ ಘೋಷಿಸಿದೆ. ಪೇಟಾ ನೀಡಿರುವ ದೂರಿನ ಅನ್ವಯ ಪೊಲೀಸರು ಯುವಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.
ಈ ವೀಡಿಯೋ ಮಾಡಿದವರು ಯಾರು? ಇದು ನಡೆದ ಸ್ಥಳ ಎಲ್ಲಿ ಎಂಬ ಬಗ್ಗೆ ಸದ್ಯ ಪೊಲೀಸರಿಗೂ ಯಾವುದೇ ಮಾಹಿತಿ ಇಲ್ಲ. ಯುವಕರು ಹಿಂದಿಯಲ್ಲಿ ಮಾತನಾಡುತ್ತಿದ್ದುದು ಬಿಟ್ಟರೆ ಬೇರಾವ ಮಾಹಿತಿಯೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಹಸಿರಾಗಿದ್ದ ರಾಮನಗರಕ್ಕೂ ವಕ್ಕರಿಸಿತು ಕರೊನಾ ಮಾರಿ: ರಾಜ್ಯದಲ್ಲಿ 43 ಬಲಿ
ಆದರೆ ಇದು ಈಗಾಗಲೇ ಸಿಕ್ಕಾಪಟ್ಟೆ ವೈರಲ್​ ಆಗಿರುವ ಕಾರಣ, ಹಾಗೂ ಯುವಕರ ಮುಖ ಸ್ಪಷ್ಟವಾಗಿ ಕಾಣುವ ಹಿನ್ನೆಲೆಯಲ್ಲಿ, ಈ ಬಗ್ಗೆ ಯಾರಿಗೇ ತಿಳಿದರೂ ಕೂಡಲೇ ಅವರು, ಪೇಟಾದ ಸಂಖ್ಯೆ +91 9820122602 ಗೆ ಕರೆ ಮಾಡುವ ಮೂಲಕ ಇಲ್ಲವೇ ಇ ಮೇಲ್​ ವಿಳಾಸ e-mail[email protected]. ಈ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ.
ಇದಾಗಲೇ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಟ್ವಿಟರ್​ನಲ್ಲಿ ಒಬ್ಬರು ಕಮೆಂಟ್​ ಮಾಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
#tiktokbanindiaGot this Video via whatsapp , Please Ban tiktok .pic.twitter.com/j8uYP13FKE
— Tarun Choubey (@Tarunchoubey4)May 20, 2020

ಸತ್ತು ಹೋಗಿದ್ದ ವೃದ್ಧ ದಿಢೀರ್​ ಪ್ರತ್ಯಕ್ಷನಾದಾಗ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
