ನವದೆಹಲಿ:ತಕ್ಷಣ ಜಾರಿಗೆ ಬರುವಂತೆ ತಬ್ಲಿಘಿ ಜಮಾತ್​ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸುಪ್ರಿಂಕೋರ್ಟ್​ಗೆ ಮಂಗಳವಾರ ಅರ್ಜಿಯೊಂದು ದಾಖಲಾಗಿದೆ.
ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಅವರಿಗೆ ಕಳುಹಿಸಲಾಗಿದೆ. ಎಂಸಿಡಿ ಕಾಯ್ದೆ(ಮುನ್ಸಿಪಾಲ್​ ಕಾರ್ಪೋರೇಷನ್​ ಕಾಯ್ದೆ) ಅಡಿಯಲ್ಲಿ ನವದೆಹಲಿಯ ನಿಜಾಮುದ್ದಿನ್​ನಲ್ಲಿರುವ ತಬ್ಲಿಘಿ ಜಮಾತ್​ ಕಚೇರಿಯ ಕಟ್ಟಡವನ್ನು ಕೆಡವಲು ಸರ್ಕಾರಕ್ಕೆ ನಿರ್ದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಅಜಯ್​ ಗೌತಮ್​ ಎಂಬುವರು ದಾವೆ ಹೂಡಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಮನವಿ ಮಾಡಿದ್ದಾರೆ. ತಬ್ಲಿಘಿ ಜಮಾತ್​ ಹಿಂದೆ ಒಂದು ಕುತಂತ್ರವಿದೆ. ಕೊರನಾ ವೈರಸ್​ ಅನ್ನು ತಬ್ಲಿಘಿ ಕಾರ್ಯಕರ್ತರ ಮೂಲಕ ಧಾರ್ಮಿಕ ಕಾರ್ಯಕ್ರಮ ಹೆಸರಿನಲ್ಲಿ ಭಾರತದಾದ್ಯಂತ ಹರಡಲು ಸಂಚು ರೂಪಿಸಲಾಗಿದೆ. ದೆಹಲಿ ಗಲಭೆಯಲ್ಲೂ ಇವರ ಕೈವಾಡ ಇದೆ ಎಂದು ಆರೋಪಿಸಿ, ಸೂಕ್ತ ತನಿಖೆಗೆ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ದೆಹಲಿ ಸರ್ಕಾರದ ಆದೇಶವಿದ್ದರೂ ಅದನ್ನು ಜಮಾತ್​ ನಡೆಯದಂತೆ ತಡೆಯಲು ವಿಫಲವಾದ ಪೊಲೀಸ್​ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.
ಸದ್ಯ ಭಾರತದಲ್ಲಿರುವ 4 ಸಾವಿರಕ್ಕೂ ಹೆಚ್ಚು ಕರೊನಾ ಸೋಂಕಿತ ಪ್ರಕರಣಗಳಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ತಬ್ಲಿಘಿ ಜಮಾತ್​ನ ನಂಟಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಾಕಷ್ಟು ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.(ಏಜೆನ್ಸೀಸ್​)
VIDEO| ಅಪರಿಚಿತರು ನೀಡುವ ಮಾಸ್ಕ್​ನಲ್ಲಿ ಪ್ರಜ್ಞೆ ತಪ್ಪಿಸುವ ರಾಸಾಯನಿಕವಿದೆಯೇ? ಫ್ಯಾಕ್ಟ್​ಚೆಕ್​ ಬಿಚ್ಚಿಟ್ಟ ಸತ್ಯಾಂಶ ಹೀಗಿದೆ…

ಮೈಕೆಲ್​ ಕ್ಲಾರ್ಕ್​ ಕಂಡ ಶ್ರೇಷ್ಠ 7 ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಭಾರತದ ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿಗೆ ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
