ಚೆನ್ನೈ:ಸೂಪರ್​​ಸ್ಟಾರ್​ ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರ ಬಿಡುಗಡೆಯಾದ ದಿನದಿಂದಲೂ ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುತ್ತಿದ್ದು, 10 ದಿನಗಳಲ್ಲಿ ಸಿನಿಮಾ 400ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​​ ಮಾಡುವ ಮೂಲಕ ಅಬ್ಬರಿಸುತ್ತಿದೆ.
ಇದೀಗ ಜೈಲರ್​ ಚಿತ್ರಕ್ಕೆ ಸಂಕಷ್ಟ ಒಂದು ಎದುರಾಗಿದ್ದು ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಮದ್ರಾಸ್​ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯೊಂದು ಸಲ್ಲಿಕೆಯಾಗಿದೆ. ನ್ಯಾಷನಲ್​ ಪೀಪಲ್ಸ್​ ಪಾರ್ಟಿ(NPP) ಮುಖಂಡ ರವಿ ಅವರು ಚಿತ್ರದ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಹೃದಯಾಘಾತಕ್ಕೊಳಗಾಗಿ ಮಂಡ್ಯ ಮೂಲದ ಯುವನಟ ಮೃತ್ಯು
ರಜಿನಿಕಾಂತ್​ ಅಭಿನಯದ ಜೈಲರ್​ ಚಿತ್ರದಲ್ಲಿ ಘರ್ಷಣೆ ಹೆಚ್ಚಿದ್ದು, ಈ ಸಿನಿಮಾಗೆ ಸೆನ್ಸಾರ್​ ಬೋರ್ಡ್​ U/A ಸರ್ಟಿಫಿಕೆಟ್​ ನೀಡಿದೆ. ಚಿತ್ರದಲ್ಲಿ ಬಹಳಷ್ಟು ಹಿಂಸಾತ್ಮಕ ದೃಶ್ಯಗಳಿದ್ದು, ಯಾವ ಆಧಾರದ ಮೇಲೆ ಸೆನ್ಸಾರ್​ ಬೋರ್ಡ್​ U/A ಸರ್ಟಿಫಿಕೇಟ್​ ನೀಡಿದೆ. ಈ ಕೂಡಲೇ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು.
ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ತಪ್ಪಾಗಿ ಸರ್ಟಿಫಿಕೇಟ್​ ನೀಡಿದ್ದು, 12 ವರ್ಷ ಹಾಗೂ ಅದರ ಕೆಳಗಿನ ವಯಸ್ಸಿನ ಮಕ್ಕಳು ಈ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಚಿತ್ರದಲ್ಲಿ ಘರ್ಷಣೆ ಹಾಗೂ ರಕ್ತಪಾತದ ದೃಶ್ಯಗಳಿದ್ದು, U/A ಸರ್ಟಿಫಿಕೇಟ್ ನೀಡುವಂತಿಲ್ಲ. ಕೂಡಲೇ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
