ನವದೆಹಲಿ:ಜಾಗತಿಕ ತೈಲ ಬೆಲೆಗಳಲ್ಲಿ ಮೂರು ವರ್ಷಗಳಲ್ಲೇ ಅತಿಯಾದ ಏರಿಕೆ ಕಂಡುಬಂದಿರುವ ಕಾರಣ, ಭಾರತದಲ್ಲಿ ಶನಿವಾರ(ಅ.2) ಪೆಟ್ರೋಲ್​-ಡೀಸೆಲ್​ ಬೆಲೆಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ​25 ಪೈಸೆ ಏರಿಕೆಯೊಂದಿಗೆ ಲೀಟರ್​ಗೆ 101.89 ರೂ. ಇದ್ದ ಪೆಟ್ರೋಲ್ ಬೆಲೆ ₹ 102.14 ಆಗಿದೆ. ಡೀಸೆಲ್​ ಬೆಲೆಯು 30 ಪೈಸೆಯಷ್ಟು ಹೆಚ್ಚಿದ್ದು, ಪ್ರತಿ ಲೀಟರ್​ಗೆ ₹ 90.17 ರಿಂದ ₹ 90.47 ಹೆಚ್ಚಿದೆ ಎಂದು ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ತಿಳಿಸಿದೆ.
ಮುಂಬೈನಲ್ಲಿ 24 ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್​ ಬೆಲೆಯು ಲೀಟರ್​ಗೆ 108.19 ರೂ. ಆಗಿದ್ದು, ಡೀಸೆಲ್​ಗೆ ಪ್ರತಿ ಲೀಟರ್​ಗೆ 32 ಪೈಸೆ ಹೆಚ್ಚಳವಾಗಿ 98.16 ರೂ. ತಲುಪಿದೆ. ನಾಲ್ಕು ಮೆಟ್ರೊ ನಗರಗಳಲ್ಲಿ ಅತಿಹೆಚ್ಚಿನ ಇಂಧನ ಬೆಲೆ ಇರುವ ನಗರವೆಂದರೆ ಮುಂಬೈ. ವ್ಯಾಟ್​ನಲ್ಲಿನ​ ವ್ಯತ್ಯಾಸದಿಂದಾಗಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಇಂಧನ ದರಗಳು ಇರುತ್ತವೆ.(ಏಜೆನ್ಸೀಸ್)
VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + nine =
Remember me
