ನವದೆಹಲಿ:ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್​ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್​ ಶರ್ಮಾ ಆರೋಪಿಸಿದ್ದರು.
ಅಂಕಿತ್ ಶರ್ಮಾ ಅವರ ಸಾವಿನಲ್ಲಿ ಆಪ್​ ಮುಖಂಡ ತಾಹೀರ್​ ಹುಸ್ಸೇನ್​ ಅವರ ಪಾತ್ರವಿದೆ ಎಂದು ಬಲವಾದ ಆರೋಪವೂ ಕೇಳಿಬಂದಿತ್ತು.
ಅದಕ್ಕೆ ಪುಷ್ಠಿ ನೀಡುವಂತೆ ಆಪ್​ ಕೌನ್ಸಿಲರ್​ ತಾಹೀರ್​ ಅವರ ಮನೆಯ ಟೆರೇಸ್​ನಲ್ಲಿ ಪೆಟ್ರೋಲ್​ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿವೆ.
ಮಾಧ್ಯಮವೊಂದಕ್ಕೆ ಸ್ಥಳೀಯರು ಕೊಟ್ಟ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದಾಗ ಟೆರೇಸ್​ ಮೇಲೆ ಪೆಟ್ರೋಲ್​ ಬಾಂಬ್​ಗಳು ಸಿಕ್ಕಿವೆ.  ತಾಹೀರ್​ ಹುಸ್ಸೇನ್​ ಮನೆಯಲ್ಲಿ ಹಲವು ಶಸ್ತ್ರಾಸ್ತ್ರಗಳಿವೆ. ಅವರ ಮನೆಯಲ್ಲಿ ನೂರಾರು ದಂಗೆಕೋರರು ಒಟ್ಟಾಗಿ ಸಭೆ ಸೇರಿದ್ದರು.
ಅಲ್ಲಿಂದ ಬೇರೆಯವರ ಮನೆಯ ಮೇಲೆ ಕಲ್ಲು ಮತ್ತು ಪೆಟ್ರೋಲ್​ ಬಾಂಬ್​ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ಅಂಕಿತ್​ ಶರ್ಮಾ ಸಾವಿನಲ್ಲಿ ತಮ್ಮ ಹೆಸರು ಕೇಳಿಬರುತ್ತಲೇ ಹುಸ್ಸೇನ್ ಬೇರೆಯದೇ ರೀತಿ ಮಾತನಾಡಿದ್ದರು. ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ ಎಂದು ತಾಹೀರ್​ ಹುಸ್ಸೇನ್​ ಹೇಳಿಕೊಂಡಿದ್ದರು. ನಮ್ಮ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಮನೆಯಿಂದ ನೂಕಿದ್ದರು ಎಂದಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
