ನವದೆಹಲಿ:ಅಂತರರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಉಂಟಾದ ಏರಿಕೆಯ ಹಿನ್ನೆಲೆಯಲ್ಲಿ ಇಂದು ಮತ್ತೆ ಭಾರತದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳನ್ನು ಹೆಚ್ಚಿಸಲಾಗಿದೆ. ಎರಡು ದಿನಗಳ ಯಥಾಸ್ಥಿತಿಯ ನಂತರ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 106.19 ರೂಪಾಯಿ ಆಯಿತು; ಡೀಸೆಲ್ ಬೆಲೆ ಲೀಟರ್​ಗೆ 94.92 ರೂ. ಆಯಿತು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 36 ಪೈಸೆ ಏರಿಕೆಯೊಂದಿಗೆ ಇಂದಿನ ಪೆಟ್ರೋಲ್​ ಬೆಲೆ 109.89 ರೂಪಾಯಿ ಆಗಿದ್ದರೆ, ಡೀಸೆಲ್​ ಬೆಲೆ 38 ಪೈಸೆ ಏರಿಕೆಯೊಂದಿಗೆ 100.75 ರೂ. ತಲುಪಿದೆ. ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈನಲ್ಲಿ ಪೆಟ್ರೋಲ್​ ದರ ಲೀಟರ್​ಗೆ 112.11 ರೂ. ಮತ್ತು ಡೀಸೆಲ್​ ದರ ಲೀಟರ್​ಗೆ 102.89 ರೂ.ಗಳಷ್ಟಾಗಿದೆ.(ಏಜೆನ್ಸೀಸ್)
ಮತಾಂತರ ಪ್ರತಿಭಟನೆ: ವಕೀಲ, ಹಿಂದೂ ಮುಖಂಡರ ವಿರುದ್ಧ ಎಫ್​ಐಆರ್​

ವಿಮಾನದಲ್ಲಿ ನಟಿಯ ಸೊಂಟ ಹಿಡಿದು ಎಳೆದ ಸಹಪ್ರಯಾಣಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
