ನವದೆಹಲಿ:ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸಾರ್ವಕಾಲಿಕ ಏರಿಕೆ ದಾಖಲಿಸಿರುವ ಪರಿಣಾಮ ಇನ್ನೊಂದು ವಾರದಲ್ಲಿ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ತುಟ್ಟಿಯಾಗುವುದು ನಿಶ್ಚಿತವಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ 9 ರೂಪಾಯಿ ಕಡಿಮೆ ಇದೆ. ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಮುಂದಿನ ವಾರ ಪೆಟ್ರೋಲ್, ಡೀಸೆಲ್ ದರ ನಿತ್ಯವೂ ಏರಿಕೆ ಕಾಣಬಹುದೆಂದು ಹೇಳಲಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೆರೇಶನ್ ಲಿ., (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೆರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೆರೇಷನ್ ಲಿ., (ಎಚ್​ಪಿಸಿಎಲ್) ಮೂಲಗಳ ಪ್ರಕಾರ, ಸಾಮಾನ್ಯ ಲಾಭಾಂಶ ಪ್ರತಿ ಲೀಟರ್​ನಲ್ಲಿ 2.5 ರೂಪಾಯಿ ಪರಿಗಣಿಸದೆ ಲೆಕ್ಕ ಹಾಕಿದರೂ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್​ನಲ್ಲಿ 5.7 ರೂ. ನಷ್ಟ ಅನುಭವಿಸುತ್ತಿವೆ.
ಮುಂದಿನ ದಿನಗಳಲ್ಲಿ ಚಿಲ್ಲರೆ ಮಾರಾಟ ದರವನ್ನು ಪ್ರತಿ ಲೀಟರಿಗೆ 9 ರೂಪಾಯಿ ಅಥವಾ ಶೇಕಡ 10 ಏರಿಕೆ ಮಾಡದೇ ಹೋದರೆ ಲಾಭವಾಗದು. ಚಿಲ್ಲರೆ ದರ ಏರಿಕೆ 5-8 ರೂಪಾಯಿ ನಿರೀಕ್ಷಿಸಲಾಗುತ್ತಿದ್ದು, ಸರ್ಕಾರವೂ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರಿಗೆ 1- 3 ರೂಪಾಯಿ ಇಳಿಸಿದರೆ ಅನುಕೂಲವಾದೀತು.
ದಾಖಲೆ ಏರಿಕೆ:ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 113 ಡಾಲರ್ ದಾಟಿದ್ದು, ನೈಸರ್ಗಿಕ ಅನಿಲ ದರವೂ ಗಗನ ಮುಖಿಯಾಗಿದೆ. ಯುರೋಪ್ ತೈಲ ಮಾರುಕಟ್ಟೆ ಬ್ರೆಂಟ್ ನಾರ್ತ್ ಆಯಿಲ್​ನಲ್ಲಿ ಪ್ರತಿ ಬ್ಯಾರೆಲ್ ಬೆಲೆ 113.02 ಡಾಲರ್ ಆಗಿದೆ. 2014ರಿಂದೀಚೆಗೆ ಇದು ಸಾರ್ವಕಾಲಿಕ ಗರಿಷ್ಠ ದರವಾಗಿ ದಾಖಲಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿಬ್ಯಾರೆಲ್​ಗೆ 111.50 ಡಾಲರ್ ಆಗಿದ್ದು, 2013ರ ನಂತರದಲ್ಲಿ ಇದೇ ಗರಿಷ್ಠ ದರವಾಗಿ ದಾಖಲಾಗಿದೆ. ಪರಿಣತರ ಪ್ರಕಾರ ಇದು 125 ಡಾಲರ್ ಗಡಿ ದಾಟುವ ಸಾಧ್ಯತೆ ಇದೆ.
ತೈಲ ಉತ್ಪಾದನೆ ಹೆಚ್ಚಳಕ್ಕೆ ಚಿಂತನೆ:ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಕಾರಣ, ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಕುರಿತು ಚಿಂತನೆ ನಡೆಸಿದ್ದು, ಶೀಘ್ರವೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಏಪ್ರಿಲ್​ನಲ್ಲಿ ನಿತ್ಯ 4 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ನಿಗದಿಮಾಡಲಾಗಿದೆ. ಯುರೋಪ್ ರಾಷ್ಟ್ರಗಳಲ್ಲಿ ರಷ್ಯಾದಿಂದ ಆಮದುಮಾಡಿಕೊಳ್ಳುತ್ತಿದ್ದ ಕಚ್ಚಾತೈಲ ಪ್ರಮಾಣ ಕಡಿಮೆ ಮಾಡಲಾಗುತ್ತಿದ್ದು, ಇತರ ದೇಶಗಳಿಂದ ಈ ಪ್ರಮಾಣ ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳುತ್ತಿವೆ. ರಷ್ಯಾದ ಸ್ಥಾನವನ್ನು ಸೌದಿ ಅರೇಬಿಯಾ ಭರ್ತಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
