ಜೈಪುರ:ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಂತೂ ಭಾರೀ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಬೆಲೆ ಏರಿಕೆ ಬಿಸಿ ರಾಜಸ್ಥಾನಕ್ಕೆ ತುಸು ಹೆಚ್ಚಾಗಿಯೇ ತಗುಲಿದ್ದು, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 110 ರೂಪಾಯಿ ಹಾಗೂ ಡೀಸೆಲ್​ ಬೆಲೆ ಲೀಟರ್​ಗೆ 100 ರೂಪಾಯಿ ಗಡಿ ದಾಟಿದೆ.
ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಭಾನುವಾರ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 27 ಪೈಸೆ ಏರಿಕೆ ಆಗಿದೆ. ಈ ಮೂಲಕ ಪ್ರೀಮಿಯಂ ಪೆಟ್ರೋಲ್ ಬೆಲೆ 112.54 ರೂಪಾಯಿ, ಸಾಮಾನ್ಯ ಪೆಟ್ರೋಲ್ ಬೆಲೆ 109.49 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್​ಗೆ 101.96 ರೂಪಾಯಿಯಷ್ಟಾಗಿದೆ. ಅದರ ಜತೆ ಹನುಮಾನ್​ಗಢದಲ್ಲೂ ಇಂಧನ ಬೆಲೆ ಹೆಚ್ಚಾಗಿದೆ. ಅಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 112.11 ರೂಪಾಯಿ, ಸಾಮಾನ್ಯ ಪೆಟ್ರೋಲ್ ಬೆಲೆ 109.05 ರೂಪಾಯಿ ಹಾಗೂ ಡೀಸೆಲ್ ಬೆಲೆ 101.55 ರೂಪಾಯಿ ಆಗಿದೆ.
ರಾಜಸ್ಥಾನದ ಇಂಧನ ಬೆಲೆಯಿಂದಾಗಿ ಕಂಗೆಟ್ಟಿರುವ ರಾಜ್ಯದ ಗಡಿ ಭಾಗದ ಜನರು ಪಕ್ಕದ ಪಂಜಾಬ್, ಹರಿಯಾಣ ರಾಜ್ಯಕ್ಕೆ ತೆರಳಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡು ಬರಲಾರಂಭಿಸಿದ್ದಾರೆ. ಮಧ್ಯಪ್ರದೇಶದಲ್ಲೂ ಡೀಸೆಲ್ ಬೆಲೆ 100ರ ಗಡಿ ದಾಟಿದೆ. (ಏಜೆನ್ಸೀಸ್)
ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 10 =
Remember me
