ಕೊಚ್ಚಿ:ಕಳ್ಳತನ ಮಾಡಿದ ಬಳಿಕ ಕೆಲವೊಮ್ಮೆ ತನ್ನ ತಪ್ಪಿನ ಅರಿವಾಗಿ ಕಳ್ಳ, ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗುವಂತಹ ಪ್ರಸಂಗಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ಈ ವಿಚಿತ್ರ ಪ್ರಕರಣದಲ್ಲಿ ಅಪರಿಚಿತನೊಬ್ಬ ರಸ್ತೆ ಪಕ್ಕದ ಬೈಕ್​ನಲ್ಲಿ ಪೆಟ್ರೋಲ್​ ಕದ್ದು ಕ್ಷಮೆಯಾಚಿಸಿದ್ದಾನೆ.
ಕ್ಷಮೆಯಾಚಿಸಿ ಪತ್ರ ಬರೆದಿರುವುದಲ್ಲದೆ, ಬೈಕ್​ ಮಾಲೀಕನಿಗೆ ಐದು ರೂಪಾಯಿಯ ಎರಡು ನಾಣ್ಯಗಳನ್ನು ಇಟ್ಟು ಹೋಗಿದ್ದಾನೆ. ಅಪರಿಚಿತ ಬರೆದಿರುವ ಪತ್ರದ ಸ್ಕ್ರೀನ್​ಶಾಟ್​ ಅನ್ನು ಬೈಕ್​ ಮಾಲೀಕ ಅರುಣ್​ಲಾಲ್​ ಎಂಬುವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಇದನ್ನೂ ಓದಿ:ಗಂಡ-ಹೆಂಡತಿ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಶಾಕ್!​
ವಿವರಣೆಗೆ ಬರುವುದಾದರೆ, ಅರುಣ್​ಲಾಲ್​ ಎಂಬುವರು ಕೋಯಿಕ್ಕೋಡ್​ ಬೈಪಾಸ್​ನಲ್ಲಿ ತಮ್ಮ ಬುಲೆಟ್​ ಅನ್ನು ಪಾರ್ಕ್​ ಮಾಡಿ, ಎಲ್ಲೋ ಹೋಗಿದ್ದರು. ವಾಪಸ್​ ಬಂದು ನೋಡುವಾಗ ಬುಲೆಟ್​ ಮೇಲೆ ಇದ್ದ ಪತ್ರ ಮತ್ತು ಐದು ರೂಪಾಯಿ ಎರಡು ನಾಣ್ಯಗಳನ್ನು ನೋಡಿದ್ದಾರೆ.
ಪತ್ರವನ್ನು ಓದಿದಾಗ, ನಾನು ನಿಮ್ಮ ವಾಹನದಲ್ಲಿ ಒಂದಿಷ್ಟು ಪೆಟ್ರೋಲ್​ ತೆಗೆದುಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬೇರಿ ದಾರಿ ಇರಲಿಲ್ಲ. ನಾವು 10 ರೂಪಾಯಿಯನ್ನು ಬೈಕ್​ನಲ್ಲಿ ಇಟ್ಟಿದ್ದೆವು. ಪೆಟ್ರೋಲ್​ ಬಂಕ್​ಗಳಲ್ಲಿ ಬಾಟಲ್​ಗೆ ಪೆಟ್ರೋಲ್​ ಕೊಡದಿರುವುದರಿಂದ ಪೆಟ್ರೋಲ್​ ಪಂಪ್​ ತಲುಪಲು ನಮಗೆ ಬೇರೆ ದಾರಿ ಕಾಣಲಿಲ್ಲ ಎಂದು ಬರೆದಿದ್ದಾರೆ.
ಇದೀಗ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಸ್ಟೋರಿ ಓದಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ

VIDEO |ಡ್ಯಾನ್ಸ್​, ಜಗಳ ಎಲ್ಲಾ ಆಯ್ತು; ಈಗ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 13 =
Remember me
