ಹಣದುಬ್ಬರ ಪ್ರಮಾಣ ಏರದಂತೆ ತಡೆಯಲು ಇಂಧನ ದರ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಇಳಿಸಿದೆ. ಪೆಟ್ರೋಲ್ ಲೀಟರ್ ಮೇಲೆ 8 ರೂಪಾಯಿ, ಡೀಸೆಲ್ ಲೀಟರ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆಯಾಗಿದೆ. ಜತೆಗೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಕೂಡ ಇಳಿಕೆಯಾಗಿದೆ. ಅಬಕಾರಿ ಸುಂಕದಲ್ಲಿ ರಾಜ್ಯಕ್ಕೆ ಪ್ರತಿ ಲೀಟರ್​ನಲ್ಲಿ 1.4 ರೂಪಾಯಿ ಮಾತ್ರ ಸಲ್ಲುತ್ತದೆ. ಸೆಸ್ ಮತ್ತು ಇತರ ತೆರಿಗೆಗಳು ರಾಜ್ಯಗಳಿಗೆ ಸಲ್ಲುವುದಿಲ್ಲ. ಇದಕ್ಕೆ ಸಂಬಂಧಿಸಿದ ತೆರಿಗೆ ಲೆಕ್ಕ ಹೀಗಿದೆ.
ರಾಜ್ಯ ತೆರಿಗೆ ಸಂಗ್ರಹದ ಮೇಲೆ ಆಗುವ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ದೆಹಲಿಯ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ. ದೆಹಲಿಯಲ್ಲಿ ಮಾರಾಟ ತೆರಿಗೆ ಶೇಕಡ 19.4 ಇದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದ್ದರ ಪರಿಣಾಮ, ದೆಹಲಿ ವ್ಯಾಟ್​ನಲ್ಲಿ ಪೆಟ್ರೋಲ್ ಲೀಟರಿಗೆ 0.83 ರೂ.ವಿನಾಯಿತಿ ನೀಡಿದೆ.

ದೆಹಲಿ ಮಾದರಿಯಲ್ಲೇ ವಿವಿಧ ರಾಜ್ಯಗಳಲ್ಲಿ ಕೂಡ ವ್ಯಾಟ್ ಇದೆ. ಇಲ್ಲಿ ಕೇಂದ್ರ ಅಬಕಾರಿ ತೆರಿಗೆ ಫಿಕ್ಸೆಡ್ ಆಗಿದ್ದು, ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಕೆಲವು ರಾಜ್ಯಗಳು ಸೆಸ್, ಹೆಚ್ಚುವರಿ ತೆರಿಗೆಗಳನ್ನೂ ವಿಧಿಸುತ್ತಿವೆ. ಇವುಗಳ ವಿವರ ಇಲ್ಲಿದೆ.


ಮಾಹಿತಿ – ಪಿಪಿಎಸಿ, ಸಿಎಜಿ, ಐಒಸಿಎಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 3 =
Remember me
