ಪುಣೆ:ಯಾವುದೇ ವಾಹನಗಳು ಓಡಾಡಲು ಇಂಧನ ಬೇಕು. ಇಂಧನ ಬೇಕಾದರೆ ಪೆಟ್ರೋಲ್ ಬಂಕ್​ಗೆ ಹೋಗಲೇಬೇಕು. ಆದರೆ ಇಲ್ಲಿಯವರೆಗೆ ಪೆಟ್ರೋಲ್ ಬಂಕ್​ಗೆ ಹೋಗುವವರು ತಮಗೆ ಬೇಕಾದಷ್ಟು ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ, ಇದೀಗ ಪೆಟ್ರೋಲ್ ಬಂಕ್‌ಗಳಿಗೆ ಹೋಗುವ ವಾಹನ ಸವಾರರಿಗೆ ದೊಡ್ಡ ಆಘಾತವೊಂದು ಕಾದಿದೆ.
ನಿಮ್ಮ ವಾಹನದಲ್ಲಿ ಆ ಒಂದು ಪ್ರಮಾಣ ಪತ್ರ ಇಲ್ಲದಿದ್ದರೆ, ನಿಮ್ಮ ಜೇಬಿಗೆ ಕತ್ತರಿ ಬೀಳಲಿದ್ದು, 10 ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಹೌದು, ಸಂಚಾರಿ ಪೊಲೀಸರು ಹೊಸ ನಿಯಮಗಳನ್ನು ತರುತ್ತಿದ್ದಾರೆ. ಇದರ ಅಡಿಯಲ್ಲಿ ಈ ಒಂದು ಸಂಚಾರ ನಿಯಮವನ್ನು ಪಾಲಿಸದ ವಾಹನ ಸವಾರರಿಗೆ ಪೆಟ್ರೋಲ್ ಬಂಕ್​ಗಳಲ್ಲಿ ದಂಡ ವಿಧಿಸಲಾಗುತ್ತದೆ. ಯಾವ ಕಾರಣಕ್ಕಾಗಿ ದಂಡ ವಿಧಿಸಲಾಗುತ್ತದೆ ಎಂಬುದನ್ನು ನಾವು ವಿವರವಾಗಿ ತಿಳಿಯೋಣ.
ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳನ್ನು ತಡೆಯಲು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಕೆಲ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಎಷ್ಟು ಬಾರಿ ದಂಡ ಕಟ್ಟಿದರೂ ಬದಲಾವಣೆ ಆಗುತ್ತಿಲ್ಲ. ಈ ಸಮಸ್ಯೆಯನ್ನು ತಡೆಯಲು ಅಧಿಕಾರಿಗಳು ಹೊಸ ನಿಯಮವನ್ನು ಪರಿಚಯಿಸುತ್ತಿದ್ದಾರೆ. ಸಾಮಾನ್ಯವಾಗಿ ಸಂಚಾರ ಪೊಲೀಸರು ವಾಹನ ತಪಾಸಣೆಯ ಭಾಗವಾಗಿ ಡ್ರೈವಿಂಗ್ ಲೈಸೆನ್ಸ್, ಆರ್​ಸಿ, ಮಾಲಿನ್ಯ ಪ್ರಮಾಣ ಪತ್ರ, ವಿಮೆಯನ್ನು ಪರಿಶೀಲಿಸುತ್ತಾರೆ. ಇವುಗಳಲ್ಲಿ ಯಾವುದೂ ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ, ಕೆಲವೆಡೆ ವಾಹನ ಸವಾರರು ಪೊಲೀಸ್ ಅಧಿಕಾರಿಗಳಿಗೆ ಕೇಳಿದಷ್ಟು ಹಣ ಕೊಟ್ಟು ಜಾರಿಕೊಳ್ಳುತ್ತಾರೆ. ಇನ್ಮುಂದೆ ಅದು ಸಾಧ್ಯವಿಲ್ಲ. ಮಾಲಿನ್ಯ ಪ್ರಮಾಣ ಪತ್ರ ಹೊಂದಿರದವರ ವಿರುದ್ಧ ಸಂಚಾರ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಮಾನ್ಯವಾದ ಮಾಲಿನ್ಯ ಪ್ರಮಾಣಪತ್ರವನ್ನು ಹೊಂದಿರದ ವಾಹನಗಳು ಪೆಟ್ರೋಲ್ ಬಂಕ್‌ಗಳಲ್ಲಿ ಸ್ವಯಂಚಾಲಿತ ದಂಡಕ್ಕೆ ಒಳಪಡುತ್ತವೆ. 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಮಾಲಿನ್ಯ ಪ್ರಮಾಣ ಪತ್ರದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಿದರೆ ಭಾರೀ ಬೆಲೆ ತೆರಬೇಕಾಗುತ್ತದೆ. ದಂಡ ಮಾತ್ರವಲ್ಲದೆ, ಮಾಲಿನ್ಯ ಪ್ರಮಾಣ ಪತ್ರವನ್ನು ಹೊಂದಿರದ ಕಾರುಗಳನ್ನು ನೋಂದಣಿಯಿಂದ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಈ ಹೊಸ ವ್ಯವಸ್ಥೆಯನ್ನು ಇದೀಗ ಪುಣೆ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲೂ ಇದು ಜಾರಿಗೆ ಬಂದರೆ ಅಚ್ಚರಿಯೇನಿಲ್ಲ.
ಪೆಟ್ರೋಲ್ ಬಂಕ್‌ಗಳಲ್ಲಿ ಆಧುನಿಕ ಕ್ಯಾಮೆರಾಗಳೊಂದಿಗೆ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಹನವು ಮಾನ್ಯವಾದ ಮಾಲಿನ್ಯ ಪ್ರಮಾಣ ಪತ್ರ ಹೊಂದಿದ್ದರೆ, ಅದನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಪ್ರಮಾಣಪತ್ರದ ಅವಧಿ ಮುಗಿದಿದ್ದರೆ, ವಾಹನದ ಮಾಲೀಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 10 ಸಾವಿರ ರೂ. ದಂಡವನ್ನು ಪಾವತಿಸಲು ನೋಟಿಫಿಕೇಶನ್​ ಸ್ವೀಕರಿಸುತ್ತಾರೆ.
ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಸರಿಯಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಟ್ರಾಫಿಕ್​ ಪೊಲೀಸರು ತೆಗೆದುಕೊಂಡಿರುವ ಈ ರೀತಿಯ ಕ್ರಮ ಇದೇ ಮೊದಲಲ್ಲ. ಕೇರಳದಲ್ಲಿ, ರಾಜ್ಯ ಸರ್ಕಾರವು ರಾಜ್ಯದಾದ್ಯಂತ 726 ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಿದೆ. ರಸ್ತೆ ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸುರಕ್ಷಿತ ಕೇರಳ ಯೋಜನೆಯ ಭಾಗವಾಗಿ ಇವುಗಳನ್ನು ಸ್ಥಾಪಿಸಲಾಗಿದೆ.(ಏಜೆನ್ಸೀಸ್​)
9 ವರ್ಷದಿಂದ ಮಾಸದ ಶಾಯಿ ಗುರುತು! 3 ಬಾರಿ ಮತದಾನ ಮಿಸ್​, ಈ ಸಲ ಹಕ್ಕು ಚಲಾಯಿಸಿದ್ದೇ ರೋಚಕ

ಪೆನ್​ಡ್ರೖೆವ್ ಪ್ರಕರಣ ಕಾಂಗ್ರೆಸ್ಸಿಗರ ಬಂಧನ ಏಕಿಲ್ಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one − one =
Remember me
