ಜನಸಂಖ್ಯೆಯಲ್ಲಿ ಭಾರತ ಈಗ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದೇ ರೀತಿ ತೈಲ ಬೇಡಿಕೆ ಬೆಳವಣಿಗೆಯಲ್ಲಿ ಕೂಡ ಭಾರತವು 2027ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ. ಹೀಗಂತ ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ (ಅಂತಾರಾಷ್ಟ್ರೀಯ ಇಂಧನ ಸಂಸ್ಥೇ- ಐಇಎ) ವರದಿ ಅಂದಾಜಿಸಿದೆ.
ಮುಂದಿನ ಐದು ವರ್ಷಗಳ ಮುನ್ನೋಟವಿರುವ ‘ಆಯಿಲ್ 2023’ ಎಂಬ ಈ ವರದಿಯು, ಈ ವರ್ಷ ಭಾರಿ ಏರಿಕೆಯಾದ ನಂತರ 2024ರಿಂದ ಚೀನಾದ ತೈಲ ಬೇಡಿಕೆಯು ಸ್ಥಿರವಾಗಿ ಕುಸಿಯುತ್ತದೆ ಎಂದು ಹೇಳಿದೆ. ‘ಭಾರತದ ತೈಲ ಬೇಡಿಕೆಯು ಹೆಚ್ಚಾಗುತ್ತದೆ. ಜಾಗತಿಕ ತೈಲ ಬೇಡಿಕೆಯ ಬೆಳವಣಿಗೆಯ ಅತಿದೊಡ್ಡ ಚಾಲಕನಾಗಿ ಭಾರತವು ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಲಿದೆ’ ಎಂದು ಐಇಎ ಮುಖ್ಯಸ್ಥ ಫಾತಿಹ್ ಬಿರೋಲ್ ಅವರು ಈಚೆಗೆ ನವದೆಹಲಿಯಲ್ಲಿ ನಡೆದ ಜಿ 20 ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದ್ದಾರೆ.
ಚೀನಾದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡ ನಂತರ ವಿಶ್ವ ತೈಲ ಬೇಡಿಕೆಯು 2023ರಲ್ಲಿ ಪ್ರತಿದಿನಕ್ಕೆ 24 ಲಕ್ಷ ಬ್ಯಾರೆಲ್​ಗಳಿಗೆ ತಲುಪಿದೆ. 2023ನೇ ಸಾಲಿನಲ್ಲಿ ಚೀನಾ ದೇಶವು ತೈಲ ಬೇಡಿಕೆಯಲ್ಲಿ ಜಾಗತಿಕ ಬೆಳವಣಿಗೆಯ ಅಂದಾಜು 60 ಪ್ರತಿಶತ ಪಾಲನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಚೀನಾದ ಕೈಗಾರಿಕಾ ಬೆಳವಣಿಗೆ ನಿಧಾನಗೊಳ್ಳಲಿದ್ದು, ತೈಲದ ಬಳಕೆ ಕುಸಿಯಲಿದೆ. ಹೀಗಾಗಿ, ತೈಲಕ್ಕೆ ಚೀನಾದಿಂದ ಬೇಡಿಕೆ ಕಡಿಮೆ ಆಗಲಿದೆ ಎಂದು ವರದಿ ಅಂದಾಜಿಸಿದೆ.
2028ರ ವೇಳೆಗೆ ಭಾರತದ ತೈಲ ಬೇಡಿಕೆಯು ಪ್ರತಿದಿನಕ್ಕೆ 10 ಲಕ್ಷ ಬ್ಯಾರಲ್​ಗೆ ಹಿಗ್ಗಲಿದೆ. ಚೀನಾದ ತೈಲ ಬೇಡಿಕೆಯ ಬೆಳವಣಿಗೆಯು 2024ರಿಂದ ಕುಸಿಯಲಿದೆ. 2023ರಲ್ಲಿ ಜಾಗತಿಕ ತೈಲ ಬೇಡಿಕೆಯು ಪ್ರತಿದಿನಕ್ಕೆ 10.2 ಕೋಟಿ ಬ್ಯಾರಲ್ ಇದೆ. 2028ರಲ್ಲಿ ಒಟ್ಟಾರೆ ಜಾಗತಿಕ ತೈಲ ಬೇಡಿಕೆಯು ಪ್ರತಿದಿನಕ್ಕೆ 10.5 ಕೋಟಿ ಬ್ಯಾರಲ್​ಗೆ ತಲುಪಲಿದೆ ಎಂದು ವರದಿ ಅಂದಾಜಿಸಿದೆ.
ಏಷ್ಯಾದಲ್ಲಿ ದಾಖಲೆ ಪ್ರಮಾಣದ ಉತ್ಪಾದನೆಯ ಕಾರಣದಿಂದಾಗಿ ಜಾಗತಿಕ ಕಚ್ಚಾ ತೈಲ ಉತ್ಪಾದನೆಯು 2023ರ ಏಪ್ರಿಲ್​ವರೆಗೆ ಪ್ರತಿದಿನಕ್ಕೆ ಅಂದಾಜು 8.23 ಕೋಟಿ ಬ್ಯಾರೆಲ್​ಗಳನ್ನು ತಲುಪಿದೆ. ಮುಂದಿನ ದಿನಗಳಲ್ಲಿ ತೈಲ ಬೇಡಿಕೆಯ ಬೆಳವಣಿಗೆಯ ಹೆಚ್ಚಿನ ಪಾಲು ಪೆಟ್ರೋಕೆಮಿಕಲ್ಸ್ (ಎಲ್​ಪಿಜಿ/ನಾಫ್ತಾ) ಮತ್ತು ವಾಯುಯಾನ ಇಂಧನದಿಂದ ಬರುತ್ತದೆ ಎಂದೂ ವರದಿ ಹೇಳಿದೆ.
ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಆ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಪ್ರಮಾಣ ಇಳಿಕೆಯಾಗಲಿದೆ. 2022ರಲ್ಲಿ ಚೀನಾದಲ್ಲಿ 61 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ 48,000 ಮಾತ್ರ. ಚೀನಾದಲ್ಲಿ ತೈಲ ಬೇಡಿಕೆ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕಾರುಗಳು ಮತ್ತು ಬಸ್ಸುಗಳ ತ್ವರಿತ ವಿದ್ಯುದ್ದೀಕರಣ ಎಂದು ಫಾತಿಹ್ ಬಿರೋಲ್ ಹೇಳಿದ್ದಾರೆ. ಭಾರತದಲ್ಲಿ ಕೂಡ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾದಂತೆ ತೈಲದ ಬೇಡಿಕೆ ಕಡಿಮೆಯಾಗುತ್ತದೆ ಎಂದು ಅವರು ನಿರೀಕ್ಷಿಸಿದ್ದಾರೆ. ಎರಡು ವರ್ಷಗಳ ಹಿಂದೆ ವಿಶ್ವದಲ್ಲಿ ಮಾರಾಟವಾದ 25 ಕಾರುಗಳಲ್ಲಿ ಒಂದು ಮಾತ್ರ ಎಲೆಕ್ಟ್ರಿಕ್ ವಾಹನವಾಗಿತ್ತು. ಈ ವರ್ಷ ಇದು 5ಕ್ಕೆ ಏರಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಜಾಗತಿಕವಾಗಿ ತೈಲ ಬೇಡಿಕೆಯ ವಾರ್ಷಿಕ ಬೆಳವಣಿಗೆಯಲ್ಲಿ ಸಾಕಷ್ಟು ಕುಸಿತವಾಗಲಿದೆ ವರದಿ ಭವಿಷ್ಯ ನುಡಿದಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ, ತೈಲ ಉದ್ಯಮದಲ್ಲಿ ಸುಧಾರಿತ ತಂತ್ರ ಜ್ಞಾನದ ಉಪಯೋಗ ಮುಂತಾದ ಕಾರಣ ಗಳಿಂದಾಗಿ ತೈಲ ಬೇಡಿಕೆಯ ಜಾಗತಿಕ ಬೆಳವಣಿಗೆಯು ಕಡಿಮೆ ಆಗಲಿದೆ. 2024ರ ನಂತರ ತೈಲ ಬೇಡಿಕೆಯ ಬೆಳವಣಿಗೆಯು ದಿನಕ್ಕೆ 10 ಲಕ್ಷ ಬ್ಯಾರೆಲ್​ಗಳಿಗಿಂತ ಕಡಿಮೆ ಇರುತ್ತದೆ ಎಂದು ವರದಿ ಹೇಳಿದೆ. 2022 ಮತ್ತು 2028ರ ನಡುವೆ ಜಾಗತಿಕ ತೈಲ ಬೇಡಿಕೆಯು 6 ಪ್ರತಿಶತದಷ್ಟು ಹೆಚ್ಚಾಗುತ್ತಾ ಸಾಗಿ, ಪ್ರತಿ ದಿನಕ್ಕೆ 10.57 ಕೋಟಿ ಬ್ಯಾರೆಲ್​ಗಳನ್ನು ತಲುಪಲಿದೆ. ಎಂದು ವರದಿ ಹೇಳಿದೆ.
‘ಭಾರತವು ಜಾಗತಿಕ ಇಂಧನ ವ್ಯವಹಾರಗಳ ಕೇಂದ್ರವಾಗುವ ಹಂತಕ್ಕೆ ಹೋಗಲಿದೆ ಎಂದು ಆರು ವರ್ಷಗಳ ಹಿಂದೆ ಹೇಳಿದ್ದೆ. ಈಗ 6 ವರ್ಷಗಳ ನಂತರ ಭಾರತವು ಜಾಗತಿಕ ಇಂಧನ ವ್ಯವಹಾರಗಳ ಕೇಂದ್ರವಾಗಿದೆ ಎಂದು ಹೇಳಬಲ್ಲೆ. ಬೃಹತ್ ಬೇಡಿಕೆಯ ಬಲದ ಮೇಲೆ ಮಾತ್ರವಲ್ಲದೆ, ಸೌರಶಕ್ತಿಯಂತಹ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದಿಸುವಲ್ಲಿ ಮತ್ತು ಪಳೆಯುಳಿಕೆ ಇಂಧನಗಳನ್ನು ಬದಲಿಸಲು ಕಬ್ಬು, ಆಹಾರಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಎಥೆನಾಲ್​ನಂತಹ ಜೈವಿಕ ಇಂಧನಗಳನ್ನು ಬಳಸುವಲ್ಲಿ ಭಾರತ ತ್ವರಿತ ಪ್ರಗತಿಯನ್ನು ಸಾಧಿಸಿದೆ. ಶೇಕಡಾ 10ರಷ್ಟು ಎಥೆನಾಲ್ ಅನ್ನು ಪೆಟ್ರೋಲ್​ನಲ್ಲಿ ಮಿಶ್ರಣ ಮಾಡುವುದರಿಂದ 2 ಶತಕೋಟಿ ಡಾಲರ್​ಗೆ (16,397 ಕೋಟಿ ರೂಪಾಯಿ) ಸಮಾನವಾದ ತೈಲ ಆಮದು ಪ್ರಮಾಣ ಕಡಿಮೆಯಾಗಿದೆ. ಕಳೆದ 5 ವರ್ಷಗಳಲ್ಲಿ, ಜಾಗತಿಕ ಸೌರ ಇಂಧನ ಸಾಮರ್ಥ್ಯಕ್ಕೆ ಭಾರತವು ಅತಿದೊಡ್ಡ ಕೊಡುಗೆ ನೀಡಿದೆ. ಇದು 50 ಕೋಟಿ ಜನರಿಗೆ ವಿದ್ಯುತ್ ಲಭ್ಯತೆ ಒದಗಿಸಿದೆ. ಅಂದಾಜು 10 ಕೋಟಿ ಜನರಿಗೆ ಅಡುಗೆ ಅನಿಲ ಒದಗಿಸಿದೆ. ಅಲ್ಲದೆ, ಮರ ಮತ್ತು ಇತರೆ ವಸ್ತುಗಳ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ತೊಡೆದುಹಾಕಲು ನೆರವಾಗಿದೆ ಎಂದು ಫಾತಿಹ್ ಬಿರೋಲ್ ಶ್ಲಾಘಿಸಿದ್ದಾರೆ. ಭಾರತವು ನವೀಕರಿಸಬಹುದಾದ ಮೂಲಗಳಿಂದ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತದೆ. ಹಸಿರು ಹೈಡ್ರೋಜನ್ ಉತ್ಪಾದಿಸುವ ನಿಟ್ಟಿನಲ್ಲಿ ನೀರನ್ನು ವಿಭಜಿಸಲು ಈ ಅಗ್ಗದ ವಿದ್ಯುತ್ ಅನ್ನು ಭಾರತ ಬಳಸಬಹುದು. ಈ ಮೂಲಕ ಅತ್ಯಂತ ಅಗ್ಗದ ಹಸಿರು ಹೈಡ್ರೋಜನ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಬಹುದು. ನನ್ನ ದೃಷ್ಟಿಯಲ್ಲಿ ಭಾರತವು ನಾಯಕನಾಗಲು, ಹಸಿರು ಹೈಡ್ರೋಜನ್​ನಲ್ಲಿ ಮಹಾಶಕ್ತಿಯಾಗಲು ಐತಿಹಾಸಿಕ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಆ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಪ್ರಮಾಣ ಇಳಿಕೆಯಾಗಲಿದೆ. 2022ರಲ್ಲಿ ಚೀನಾದಲ್ಲಿ 61 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ 48,000 ಮಾತ್ರ. ಚೀನಾದಲ್ಲಿ ತೈಲ ಬೇಡಿಕೆ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕಾರುಗಳು ಮತ್ತು ಬಸ್ಸುಗಳ ತ್ವರಿತ ವಿದ್ಯುದ್ದೀಕರಣ ಎಂದು ಫಾತಿಹ್ ಬಿರೋಲ್ ಹೇಳಿದ್ದಾರೆ. ಭಾರತದಲ್ಲಿ ಕೂಡ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾದಂತೆ ತೈಲದ ಬೇಡಿಕೆ ಕಡಿಮೆಯಾಗುತ್ತದೆ ಎಂದು ಅವರು ನಿರೀಕ್ಷಿಸಿದ್ದಾರೆ. ಎರಡು ವರ್ಷಗಳ ಹಿಂದೆ ವಿಶ್ವದಲ್ಲಿ ಮಾರಾಟವಾದ 25 ಕಾರುಗಳಲ್ಲಿ ಒಂದು ಮಾತ್ರ ಎಲೆಕ್ಟ್ರಿಕ್ ವಾಹನವಾಗಿತ್ತು. ಈ ವರ್ಷ ಇದು 5ಕ್ಕೆ ಏರಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಮೆರಿಕ, ಚೀನಾ ಮತ್ತು ಭಾರತವು ವಿಶ್ವದ ಮೂರು ಅತಿದೊಡ್ಡ ತೈಲ ಗ್ರಾಹಕ ರಾಷ್ಟ್ರಗಳಾಗಿವೆ. ತೈಲ ಬಳಕೆಯಲ್ಲಿ ಪ್ರಸ್ತುತ ಭಾರತವು ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಪ್ರಪಂಚದ ಒಟ್ಟು ಬಳಕೆಯ ಅಂದಾಜು ಶೇಕಡಾ 4.6ರಷ್ಟು ತೈಲವನ್ನು ಭಾರತ ಉಪಯೋಗಿಸುತ್ತದೆ. ಭಾರತವು ದ್ರವೀಕೃತ ನೈಸರ್ಗಿಕ ಅನಿಲ (ಎಲ್​ಎನ್​ಜಿ) 4ನೇ ಅತಿ ದೊಡ್ಡ ಆಮದುದಾರ ಕೂಡ ಆಗಿದೆ. ಭಾರತವು 2021-22ರ ಹಣಕಾಸು ವರ್ಷದಲ್ಲಿ 20.423 ಕೋಟಿ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿದೆ. ಇದು ಹಿಂದಿನ 2020-21ನೇ ಸಾಲಿಗೆ ಹೋಲಿಸಿದರೆ ಶೇ. 5.1ರಷ್ಟು ಅಧಿಕವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಇದು 22.23 ಕೋಟಿ ಟನ್​ಗಳಿಗೆ ಏರಿಕೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 10.2 ಹೆಚ್ಚಳವಾಗಿದೆ.
ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nineteen =
Remember me
