ಮುಂಬೈ:ಗಂಡ-ಹೆಂಡತಿ ಬೇರ್ಪಟ್ಟರೆ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡುವುದು ಸಾಮಾನ್ಯ. ಆದರೆ ಪತ್ನಿ ಹಾಗೂ ಆಕೆಯ ಸಾಕು ನಾಯಿಗಳಿಗೆ ವಸತಿ ಕಲ್ಪಿಸುವಂತೆ ಕೋರ್ಟ್ ನೀಡಿರುವ ಪ್ರಮುಖ ತೀರ್ಪು ಕುತೂಹಲ ಮೂಡಿಸಿದೆ.ಮುಂಬೈನ ಬಾಂದ್ರಾ ಕೋರ್ಟ್ ಕುತೂಹಲಕಾರಿ ತೀರ್ಪು ನೀಡಿದೆ.

55 ವರ್ಷದ ಮಹಿಳೆಯೊಬ್ಬರು 1986ರಲ್ಲಿ ವ್ಯಕ್ತಿಯೊರ್ವನ ಜೆತೆಗೆ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜೋಡಿಗೆ  ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ, ಜಗಳ ಸಾಮಾನ್ಯ. ಅವರಿಬ್ಬರ ಜೀವನದಲ್ಲೂ ಇದೆ ರೀತಿಯಾಗಿತ್ತು. ಈ ಸಂದರ್ಭದಲ್ಲಿ, ಪತಿ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದರು. ಇದರಿಂದ ಹತಾಶೆಗೊಂಡು ಪತ್ನಿಗೆ ಕಿರುಕುಳ ನೀಡತೊಡಗಿದ. ಅವಳಿಗೆ ಸಹಿಸಲಾಗಲಿಲ್ಲ. ಇಬ್ಬರ ನಡುವೆ ಮನಸ್ತಾಪ ಬೆಳೆದು ಪತಿ ಆಕೆಯನ್ನು ಬೆಂಗಳೂರಿನಿಂದ ಮುಂಬೈಗೆ ಕಳುಹಿಸಿದ್ದಾನೆ. ಇನ್ನು ಒಟ್ಟಿಗೆ ಇರಲು ಸಾಧ್ಯವಿಲ್ಲ.ನಿನಗೆ ಬದುಕಲು ಬೇಕಾದ ಹಣವನ್ನು ಕಳುಹಿಸುತ್ತೇನೆ ಎಂದನು.

ಇದನ್ನೂ ಓದಿ:ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!
ನನಗೆ 55 ವರ್ಷವಾಗಿದೆ ಉದ್ಯೋಗವಿಲ್ಲ. ತನ್ನನ್ನು ಅವಲಂಬಿಸಿರುವ ಸಾಕುನಾಯಿಗಳನ್ನು ಸಾಕುವುದೇ ಕಷ್ಟವಾಗಿದೆ.ಹೀಗಾಗಿ ಪತಿಯಿಂದ ಜೀವನಾಂಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತನಗೆ ಯಾವುದೇ ಆದಾಯವಿಲ್ಲದ ಕಾರಣ, ತನ್ನ ಗಂಡನ ಜೀವನಾಂಶದಲ್ಲಿ ಜೀವನ ಸಾಗಿಸುವುದರ ಜತೆಗೆ ತನ್ನೊಂದಿಗೆ ಸಾಕು ನಾಯಿಗಳಿಗೂ ಸೇರಿ ತಿಂಗಳಿಗೆ 70,000 ಕೊಡುವಂತೆ ಕೇಳಿದಳು. ಮೂರು ಸಾಕುನಾಯಿಗಳು ತನ್ನ ಮೇಲೆ ಅವಲಂಬಿತವಾಗಿವೆ..ಹಾಗಾಗಿ ತನ್ನ ನಾಯಿಗಳಿಗೂ ಜೀವನಾಂಶ ಕೊಡಬೇಕೆಂದು ಹೇಳಿದಳು. ವಿಚ್ಛೇದಿತ ಪತಿ ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬುದಕ್ಕೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾಳೆ.ಮಹಿಳೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮಹಿಳೆಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ:ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
ಈ ತೀರ್ಪಿನ ಸಂದರ್ಭದಲ್ಲಿ, ಮುಂಬೈನ ಬಾಂದ್ರಾ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲಸಿಂಗ್ ರಾಜ್‌ಪೂತ್ ಅವರು ಜೂನ್ 20 ರಂದು ಹೊರಡಿಸಿದ ಆದೇಶ ಕುತೂಹಲಕಾರಿಯಾಗಿದೆ. ಜನರು ಆರೋಗ್ಯಕರ ಜೀವನವನ್ನು ನಡೆಸಲು ಸಾಕುಪ್ರಾಣಿಗಳು ಸಹಾಯ ಮಾಡುತ್ತವೆ. ಪತ್ನಿ ಜತೆಗೆ ಆಕೆ ಸಾಕುತ್ತಿರುವ ಮೂರು ನಾಯಿಗಳಿಗೂ ಜೀವನಾಂಶ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ:ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಅವನ್ನೆಲ್ಲ ಪರಿಶೀಲಿಸಿದ ನ್ಯಾಯಾಲಯ ಆಕೆ ಸಾಕುತ್ತಿರುವ ಮೂರು ನಾಯಿಗಳಿಗೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದೆ.ಇದರಿಂದ ಪತಿ ಆಘಾತಕ್ಕೊಳಗಾಗಿದ್ದರು.ಹೆಂಡತಿ ಮತ್ತು ಅವಳ ನಾಯಿಗಳಿಗೆ ಜೀವನಾಂಶ?ಅವನಿಗೆ ಆಶ್ಚರ್ಯವಾಯಿತು.ತನಗೆ ವ್ಯವಹಾರದಲ್ಲಿ ನಷ್ಟವಾಗಿರುವುದರಿಂದ ಆ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಹೆಂಡತಿಗೆ ಜೀವನಾಂಶ ಕೊಡಬೇಕು, ಸಾಕು ನಾಯಿಗಳಿಗೆ ಕೊಡಬಾರದು ಎಂದು ಪತಿ ವಾದಿಸಿದ್ದಾನೆ.
ಆದರೆ ಅವರ ವ್ಯವಹಾರದಲ್ಲಿ ನಷ್ಟವಾಗಿದೆ ಎಂಬುದಕ್ಕೆ ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ.ಪತಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.ಇದರಿಂದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲಸಿಂಗ್ ರಜಪೂತ್ ಅವರು ಪತ್ನಿಗೆ ಮಾಸಿಕ 50 ಸಾವಿರ ನೀಡುವಂತೆ ಜೂ.20ರಂದು ಆದೇಶ ಹೊರಡಿಸಿದ್ದಾರೆ.
ದೇಶಾದ್ಯಂತ ಜೂನ್‌ನಲ್ಲಿ ಶೇ.10 ಮಳೆ ಕುಂಠಿತ: ರಾಜ್ಯದ 25 ಜಿಲ್ಲೆಗಳಲ್ಲೂ ಅಭಾವ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
