ನವದೆಹಲಿ:ಉದ್ಯಮಿಗಳು ಹಾಗೂ ನಾಗರಿಕರು ಸಲ್ಲಿಸಬೇಕಾಗಿರುವ ಪ್ರಮುಖ ಹಣಕಾಸು ವಿವರಕ್ಕೆ ನೀಡಲಾಗಿದ್ದ ಡಿ.31ರ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಇದರೊಂದಿಗೆ ಇಪಿಎಫ್​ಒ ನಾಮಿನೇಶನ್, ಜಿಎಸ್​ಟಿ ರಿಟರ್ನ್ಸ್, ಕೆವೈಸಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಮತ್ತೊಂದೆಡೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಕೂಡ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಗಡುವು ವಿಸ್ತರಣೆ ಖಚಿತವಾದರೂ ಎಲ್ಲಿಯವರೆಗೆ ಅವಕಾಶ ವಿಸ್ತರಿಸಲಾಗಿದೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ನಿರ್ವಹಿಸುವ ಪಿಂಚಣಿ ಖಾತೆಗಳಿಗೆ ನಾಮಿನಿ ಹೆಸರು ನಾಮನಿರ್ದೇಶನಕ್ಕೆ ಡಿ.31 ಗಡುವು ವಿಧಿಸಲಾಗಿತ್ತು. ಇದೀಗ ವಿಸ್ತರಣೆಯಾಗಿದೆ. ಆದಾಗ್ಯೂ, ಚಂದಾದಾರರು ಕೂಡಲೇ ತಮ್ಮ ಖಾತೆಯ ಇ-ನಾಮಿನೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಇಪಿಎಫ್​ಒ ಮನವಿ ಮಾಡಿದೆ. ಇಪಿಎಫ್​ಒ ಪೋರ್ಟಲ್​ನಲ್ಲಿ ತಾಂತ್ರಿಕ ತೊಂದರೆ ಉಂಟಾಗುತ್ತಿರುವುದಾಗಿ ಚಂದಾದಾರರು ಇತ್ತೀಚೆಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿದೆ.
ಜಿಎಸ್​ಟಿ:ಆರ್ಥಿಕ ವರ್ಷ 2020-21ರ ವಾರ್ಷಿಕ ರಿಟರ್ನ್ಸ್ ಫೈಲಿಂಗ್​ನ ಡೆಡ್​ಲೈನ್ ಡಿ.31 ಎಂದು ಮೊದಲು ಪ್ರಕಟಿಸಲಾಗಿತ್ತು. ಈಗ 2022ರ ಫೆ.28ರ ತನಕ ವಿಸ್ತರಿಸಲಾಗಿದೆ. 2021ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷ (2020-21)ರ ಜಿಎಸ್​ಟಿ ಲೆಕ್ಕಪತ್ರ ಸರಿಪಡಿಸಿಕೊಂಡು ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.
ಕೆವೈಸಿ:ಕೆಲವು ನಿರ್ಬಂಧಿತ ಸಂಸ್ಥೆಗಳ ಬ್ಯಾಂಕ್ ಖಾತೆಯ ಕೆವೈಸಿಯನ್ನು ನಿಯಮಿತವಾಗಿ 3 ತಿಂಗಳಿಗೊಮ್ಮೆ ಅಪ್ಡೇಟ್ ಮಾಡುತ್ತಿರಬೇಕು. ಇದಕ್ಕಾಗಿ ನಿಗದಿಪಡಿಸಿದ್ದ ಗಡುವನ್ನು 2022ರ ಮಾ.31ರ ತನಕ ವಿಸ್ತರಿಸಿ ಆರ್​ಬಿಐ ಆದೇಶ ಹೊರಡಿಸಿದೆ. ಕೋವಿಡ್ 19 ಸಂಕಷ್ಟದ ಕಾರಣ ನಿಯಮಗಳ ಸಡಿಲಿಕೆ ಮಾಡಲಾಗುತ್ತಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.
ಜಿಎಸ್​ಟಿ ಕೌನ್ಸಿಲ್ ಸಭೆ ಇಂದು:ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನ ಮಹತ್ವದ 46ನೇ ಸಭೆ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸ್ತುತ ಜಿಎಸ್​ಟಿ ವ್ಯವಸ್ಥೆಯಲ್ಲಿ ಶೆ. 5,12,18 ಮತ್ತು 28 ತೆರಿಗೆ ವಿಧಿಸುವ ವಿನ್ಯಾಸವಿದೆ. ಬದಲಾದ ಸನ್ನಿವೇಶದಲ್ಲಿ ಶೇಕಡ 12 ಮತ್ತು 18 ಸ್ಲ್ಯಾಬ್ ವಿಲೀನಗೊಳಿಸಬೇಕೆಂಬ ಆಗ್ರಹವನ್ನು ಕೆಲವು ರಾಜ್ಯಗಳು ವ್ಯಕ್ತಪಡಿಸಿವೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ. 1,000 ರೂಪಾಯಿ ಒಳಗಿನ ಉಡುಪು ಮತ್ತು ಪಾದರಕ್ಷೆ ಮೇಲಿನ ಜಿಎಸ್​ಟಿಯನ್ನು ಶೇಕಡ 5ರಿಂದ 12ಕ್ಕೆ ಏರಿಸುವ ನಿರ್ಣಯವನ್ನು ಸೆಪ್ಟೆಂಬರ್​ನಲ್ಲಿ ತೆಗೆದುಕೊಳ್ಳಲಾಗಿತ್ತು. ಇದರ ಅನುಷ್ಠಾನ ಮುಂದೂಡಲ್ಪಡುವ ಸಾಧ್ಯತೆ ಕೂಡ ಇದೆ.
ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 14 =
Remember me
