ನವದೆಹಲಿ:ಕರೊನಾ ವೈರಸ್ ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಭವಿಷ್ಯ ನಿಧಿ (ಪಿಎಫ್) ಹಣವನ್ನು ವಾಪಸ್ ಪಡೆಯುವ ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್​ಒ) ನಿಯಮವನ್ನು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ಸಡಿಲಿಸಿದೆ. ನೌಕರರ ಮೂರು ತಿಂಗಳ ಮೂಲ ವೇತನ ಹಾಗೂ ತುಟ್ಟಿಭತ್ಯೆ ಅಥವಾ ಅವರ ಖಾತೆಯಲ್ಲಿರುವ ಒಟ್ಟು ಹಣದ ಶೇಕಡಾ 75ರಷ್ಟು ಈ ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ವಾಪಸ್ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್ ಪೀಡಿತವೆಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಪ್ರದೇಶ ವ್ಯಾಪ್ತಿಯ ನೌಕರರು, ಕಾರ್ವಿುಕರು ಈ ಸೌಲಭ್ಯಕ್ಕೆ ಅರ್ಹರು ಎಂದು ಸಚಿವಾಲಯ ಹೇಳಿದೆ. ಹಣ ಪಡೆಯಲು ಪಿಎಫ್ ಚಂದಾದಾರರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಿಯಮ ತಿದ್ದುಪಡಿ ಬಗ್ಗೆ ಎಲ್ಲ ಪಿಎಫ್ ಕಚೇರಿಗಳಿಗೆ ತಿಳಿಸಲಾಗಿದ್ದು, ಅದರನ್ವಯ ಸಲ್ಲಿಸುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ದೇಶಿಸಲಾಗಿದೆ.
ಯಾರಿಗೆ ಅನ್ವಯ?
ಗರಿಷ್ಠ ನೂರರಷ್ಟು ಉದ್ಯೋಗಿಗಳಿರುವ ಹಾಗೂ ಮಾಸಿಕ -ಠಿ; 15 ಸಾವಿರಕ್ಕಿಂತ ಕಡಿಮೆ ವೇತನವಿರುವಂತಹ ನೌಕರರಿಗೆ ಈ ನಿಯಮ ಅನ್ವಯವಾಗುತ್ತದೆ. ಪಿಎಫ್ ಖಾತೆಯಿಂದ ವಿತ್ ಡ್ರಾ ಮೊತ್ತವನ್ನು ವಾಪಸ್ ಕಟ್ಟಬೇಕಿಲ್ಲ.
ಬಿಗ್​ ರಿಲೀಫ್​ ಸಿಕ್ಕಿದೆ ಎಸ್​ಬಿಐ ಗ್ರಾಹಕರಿಗೆ- ಅವಧಿ ಸಾಲಗಳ ಇಎಂಐ ಆಟೋಮ್ಯಾಟಿಕ್ ಆಗಿ ಮೂರು ತಿಂಗಳು ಮುಂದಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
