ತಿರುವನಂತಪುರಂ:ದೇವರ ರಾಜ್ಯ ಕೇರಳ ಇದೀಗ ಮತ್ತೊಮ್ಮೆ ಹೇಯಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯ ಮೆರವಣಿಗೆಯು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತೆನಿಪಾಲಂ ಪಟ್ಟಣದಲ್ಲಿ ಪಿಎಫ್​ಐ ಕಾರ್ಯಕರ್ತರು ಶನಿವಾರ ಮೆರವಣಿಗೆ ನಡೆಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ನ ಸಮವಸ್ತ್ರ ಧರಿಸಿದ್ದ ತಮ್ಮದೇ ಸಂಘಟನೆಯ ಕಾರ್ಯಕರ್ತರಿಬ್ಬರ ಕೈಗೆ ಚೈನಿನಿಂದ ಬಿಗಿದು ಅವರನ್ನು ರಸ್ತೆಯ ಮೇಲೆ ಯಾವುದೋ ಅಪರಾಧ ಮಾಡಿದವರ ರೀತಿಯಲ್ಲಿ ಕರೆದೊಯ್ಯಲಾಗಿದೆ. ಅದರ ಜತೆಯಲ್ಲಿ ಬ್ರಿಟಿಷ್​ ಅಧಿಕಾರಿಯ ಬಟ್ಟೆ ಧರಿಸಿದ್ದವರನ್ನೂ ಅಪರಾಧಿಗಳಂತೆ ಕರೆದೊಯ್ಯಲಾಗಿದೆ. ಮೆರವಣಿಗೆಯಲ್ಲಿ ಇಸ್ಲಾಮಿಕ್​ ಪಠಣೆಗಳು ಕೇಳಿಬಂದಿವೆ.
ಕೆಲವು ಮೂಲಗಳು ಇಂದು ಪಿಎಫ್‌ಐನ ರ್ಯಾಲಿಯು 1921 ರ ಮಲಬಾರ್ ಹಿಂದೂ ಜನಾಂಗೀಯ ಹತ್ಯಾಕಾಂಡ ಅಥವಾ ಮೊಪ್ಲಾ ಹತ್ಯಾಕಾಂಡದ (ಮಲಬಾರ್​ ದಂಗೆ) ಶತಮಾನೋತ್ಸವವನ್ನು ಆಚರಿಸುವ ಭಾಗವಾಗಿತ್ತು ಎನ್ನಲಾಗಿದೆ.
ಪಿಎಫ್ಐ ಈ ರೀತಿ ಮೆರವಣಿಗೆ ಮಾಡಿರುವ ಬಗ್ಗೆ ಅನೇಕ ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಕೇರಳದಲ್ಲಿ ಪಿಎಫ್​ಐ ಕಾರ್ಯಕರ್ತರ ಹೇಯಕೃತ್ಯ! ಆರ್​ಎಸ್​ಎಸ್​ ಸಮವಸ್ತ್ರ ಧರಿಸಿದವರನ್ನು ಚೈನಿನಲ್ಲಿ ಬಂಧಿಸಿ ಮೆರವಣಿಗೆ…!pic.twitter.com/9RzT4c5nDP
— Vijayavani (@VVani4U)February 20, 2021

‘ಯೋಗಿ ಆದಿತ್ಯಾನಾಥರ ಹೆಸರೇ ಬೇರೆಯಿತ್ತು.. ಅವರ ರಾಜ್ಯವೂ ಬೇರೆಯದೇ..’

ಬದಲಾಯಿತು ಮತ್ತೊಂದು ನಗರದ ಹೆಸರು! ನರ್ಮದೆಯ ತಟದಲ್ಲಿ ‘ನರ್ಮದಾಪುರಂ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
