ಬೆಂಗಳೂರು:ಪಿಎಫ್​ಐ ಸದಸ್ಯರಿದ್ದ ಗ್ಯಾಂಗ್​ನಿಂದ ಡಕಾಯಿತಿ ಪ್ರಕರಣದಲ್ಲಿ ಮಹದೇವಪುರ ಠಾಣೆ ಪೊಲೀಸರು ಒಟ್ಟು ಎಂಟು ಜನರ ಬಂಧನ ಮಾಡಿದ್ದಾರೆ.
ಇವರು ಕೇರಳ ಮೂಲದವರಾಗಿದ್ದು ಮೊಹಮ್ಮದ್ ಜಮಾಲ್, ಮೊಹಮ್ಮದ್ ಶಫಿ, ಸುಜೇಶ್, ಅತುಲ್, ಜಮ್ಮೀರ್, ಶಮೀಲ್, ಶಿಜೀಲ್ ಸೇರಿ ಎಂಟು ಜನರನ್ನು ಬಂಧಿಸಲಾಗಿದೆ.
ಇವರು ಹಣ ಸಂಗ್ರಹಿಸುವ ಸಿಎಂಎಸ್ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಈ ಸಂದರ್ಭ ಇಂಡಿಕಾ ಕಾರಿನಲ್ಲಿದ್ದ 97 ಲಕ್ಷ ಹಣ ದೋಚಿದ್ದರು. ಆ ಸಿಎಂಎಸ್​ ಕಾರಿನಲ್ಲಿ ನಾಲ್ವರು ಸಿಬ್ಬಂದಿ ಹಣ ತರುತ್ತಿದ್ದರು. ಈ ಬಗ್ಗೆ ಹಿಂದೆಯೇ ಮಾಹಿತಿ ಇದ್ದ ಈ 12 ಜನ ದುಷ್ಕರ್ಮಿಗಳು ಸಿಂಗಯ್ಯನಪಾಳ್ಯ ಬಳಿ ಕಾರು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ. ಚಲಿಸುತ್ತಿದ್ದ ಸಿಎಂಎಸ್ ಕಾರಿಗೆ ಈ ಗ್ಯಾಂಗ್​ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು ಗಲಾಟೆ ಮಾಡಿದ್ದಾರೆ.
ಅದಾದ ಬಳಿಕ ಕಾರಿನ ಗಾಜುಗಳನ್ನ ಹೊಡೆದು ಹಾಕಿ ದುಷ್ಕರ್ಮಿಗಳು ಪೆಪ್ಪರ್ ಸ್ಪ್ರೇ ಹಾಕಿದ್ದರು. ನಂತರ ಈ ಖತರ್ನಾಕ್​ ಗ್ಯಾಂಗ್​ ಕಾರಿನಲ್ಲಿದ್ದ ಹಣ ಎಗರಿಸಿ ಪರಾರಿ ಆಗಿದ್ದರು. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಕೇರಳ ಗ್ಯಾಂಗನ್ನು ಬಂಧಿಸಿದರು.
ಬಂಧಿತರಿಂದ ಒಟ್ಟು 37 ಲಕ್ಷ ನಗದು, 45 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಒಬ್ಬರಾದ ಮೊಹಮ್ಮದ್ ಶಫಿ, ಶರತ್ ಹಾಗೂ ಅತುಲ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಮೂವರು ಆರೋಪಿಗಳು ಕೇಂದ್ರ ತನಿಖಾ ತಂಡಗಳ ವಿಚಾರಣೆಗೂ ಒಳಗಾಗಿದ್ದರು ಎನ್ನಲಾಗಿದೆ. ಇವರು ಕೇರಳ ಮತ್ತು ರಾಜ್ಯದ ದೊಂಬಿ, ಕೊಲೆಯತ್ನ, ಸುಲಿಗೆ, ಹಲ್ಲೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆರೋಪಿಗಳಿಂದ ನಾಲ್ಕು ಕಾರುಗಳು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
